ಕನ್ನಡಪ್ರಭ ವಾರ್ತೆ ಬೆಳಗಾವಿ
ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ಚರಮೂರ್ತಿ ಚರಂತೇಶ್ವರ ವಿರಕ್ತಮಠದಲ್ಲಿ ಈಚೆಗೆ ಜರುಗಿದ ಶರಣ ಸಂಸ್ಕೃತಿ ಉತ್ಸವ ಹಾಗೂ ಬಸವ ಜಯಂತಿಯ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕ್ರಾಂತಿಕಾರಕ ಮನೋಭಾವ ಹೊಂದಿದವನು. ಅದಕ್ಕಾಗಿ ನನ್ನನ್ನು ಅನೇಕರು ದ್ವೇಷಿಸುತ್ತಾರೆ. ಬಸವ ಬೆಳವಿಯಂತಹ ಪುಟ್ಟ ಗ್ರಾಮದಲ್ಲಿ ದಶಕಗಳಿಂದ ಅನಾಥವಾಗಿದ್ದ ಶ್ರೀಮದ ಪುನರ್ ನಿರ್ಮಾಣದ ಸಂಕಲ್ಪ ತೊಟ್ಟಿದ್ದೇನೆ. ಬದುಕಲ್ಲಿ ಎಷ್ಟೇ ಕಷ್ಟ ಬಂದರು ಜಾತ್ಯಾತೀತವಾದ ಬಸವ ನೆಲೆಗಟ್ಟಿನಲ್ಲೇ ಮಠ ನಡೆಸುವೆ ಎಂದು ತಿಳಿಸಿದರು.
ಉಪನ್ಯಾಸಕ ಹನುಮಂತ ಠಕ್ಕನ್ನವರ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣವರು ಕುರಿತು ವಿಶೇಷ ಉಪನ್ಯಾಸ ನೀಡಿ, ಕಾಯಕ ಹಾಗೂ ದಾಸೋಹ ಪರಂಪರೆಯ ಮೂಲಕ ಇಡೀ ನಾಡಿಗೆ ಸಮಾನತೆಯ ಪಾಠ ಹೇಳಿಕೊಟ್ಟ ವಿಶ್ವಗುರು ಬಸವಣ್ಣನವರನ್ನು ರಾಜ್ಯ ಸರ್ಕಾರ ಕರ್ನಾಟಕ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಣೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.ಅನುಭವ ಮಂಟದ ಮೂಲಕ ಸಮಾಜದ ಎಲ್ಲ ವರ್ಗದವರಿಗೆ ನ್ಯಾಯ ನೀಡುವ ಸಂಸತ್ತಿನ ಪರಿಕಲ್ಪನೆಯನ್ನು ಬಸವಣ್ಣನವರು 12ನೇ ಶತಮಾನದಲ್ಲಿ ಹುಟ್ಟು ಹಾಕಿದರು. ವಚನ ಸಾಹಿತ್ಯದ ಮೂಲಕ ಜನರ ನಡುವಿನ ಸಾಮಾಜಿಕ ಅಂತವರನ್ನು ಕಡಿಮೆ ಮಾಡಿ ಸಮಾನತೆ ಸಾರಿದರು. ಪ್ರತಿಯೊಬ್ಬರೂ ಬಸಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಸುಭಾಷ್ ಶಿರಗಾಂವಿ, ವಕೀಲ ನಾಗೇಶ ಕಿವಡ, ಗುರುರಾಜ ಪೂಜೇರಿ, ಲಕ್ಷ್ಮೀಕಾಂತ ಗಿಜವನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.