ಚನ್ನಮ್ಮ ನಿಧನಕ್ಕೆ ಆಲೂರಲ್ಲಿ ಪಕ್ಷಾತೀತವಾಗಿ ಸಂತಾಪ

KannadaprabhaNewsNetwork |  
Published : Jul 25, 2026, 01:45 AM IST
24ಎಚ್ಎಸ್ಎನ್12 :  | Kannada Prabha

ಸಾರಾಂಶ

ಮಹಿಳೆ ಕುಟುಂಬದ ಒಳಗಡೆ ಸಹಿಷ್ಣತೆಯಿಂದ ಸಹಕಾರವನ್ನು ನೀಡಿದರೆ ಹೊರ ಜಗತ್ತಿನಲ್ಲಿ ಪುರುಷನು ಯಾವ ರೀತಿಯಾದ ಸಾಧನೆಯನ್ನಾದರೂ ಕೂಡ ಮಾಡಬಹುದು ಎಂಬುದಕ್ಕೆ ಚನ್ನಮ್ಮನವರೇ ಆದರ್ಶ ಸಾಕ್ಷಿಯಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕೌಟುಂಬಿಕ ಜೀವನವನ್ನು ಗಮನಿಸಿದರೆ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕುಗಳು ಹೆಚ್ಚಾಗುತ್ತಿದ್ದು ವಿಚ್ಛೇದನದಂತಹ ಪ್ರಕರಣಗಳು ಸಾಮಾನ್ಯವಾಗಿರುವ ದಿನಗಳಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡರ ಜೊತೆ 72 ವರ್ಷಗಳ ಸುದೀರ್ಘ ವೈವಾಹಿಕ ಜೀವನವನ್ನು ನಡೆಸಿರುವ ಇವರು ಪ್ರಸ್ತುತ ದಿನಗಳಲ್ಲಿ ಯುವಕ ಯುವತಿಯರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಆಲೂರುಕಳೆದ ಶನಿವಾರ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ಪತ್ನಿ ಚನ್ನಮ್ಮ ಅವರು ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪಕ್ಷಾತೀತವಾಗಿ ಸಂತಾಪ ಸೂಚಕ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಎಚ್‌. ಕೆ. ಕುಮಾರಸ್ವಾಮಿ ಅವರು, ದೇಶದ ಮಾಜಿ ಪ್ರಧಾನಿಗಳ ಪತ್ನಿಯಾಗಿದ್ದರೂ ಕೂಡ ಯಾವುದೇ ಅಧಿಕಾರಕ್ಕೆ ಆಸೆಪಡದೆ ದೇವೇಗೌಡರ ರಾಜಕೀಯ ಜೀವನದ ಏಳು- ಬೀಳುಗಳಲ್ಲಿ ಅವರ ಬೆನ್ನಿಗೆ ನಿಂತು ರಾಜಕೀಯವಾಗಿ ಯಾವ ವಿಚಾರದಲ್ಲಿಯೂ ಕೂಡ ಮೂಗು ತೂರಿಸದೆ ಕುಟುಂಬದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ತ್ಯಾಗಮಯಿಯಾಗಿ ಇವತ್ತು ಜನ ಸಾಮಾನ್ಯರ ದೃಷ್ಟಿಯಲ್ಲಿ ಅಮರರಾಗಿದ್ದಾರೆ ಎಂದರು.

ಮಹಿಳೆ ಕುಟುಂಬದ ಒಳಗಡೆ ಸಹಿಷ್ಣತೆಯಿಂದ ಸಹಕಾರವನ್ನು ನೀಡಿದರೆ ಹೊರ ಜಗತ್ತಿನಲ್ಲಿ ಪುರುಷನು ಯಾವ ರೀತಿಯಾದ ಸಾಧನೆಯನ್ನಾದರೂ ಕೂಡ ಮಾಡಬಹುದು ಎಂಬುದಕ್ಕೆ ಚನ್ನಮ್ಮನವರೇ ಆದರ್ಶ ಸಾಕ್ಷಿಯಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕೌಟುಂಬಿಕ ಜೀವನವನ್ನು ಗಮನಿಸಿದರೆ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕುಗಳು ಹೆಚ್ಚಾಗುತ್ತಿದ್ದು ವಿಚ್ಛೇದನದಂತಹ ಪ್ರಕರಣಗಳು ಸಾಮಾನ್ಯವಾಗಿರುವ ದಿನಗಳಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡರ ಜೊತೆ 72 ವರ್ಷಗಳ ಸುದೀರ್ಘ ವೈವಾಹಿಕ ಜೀವನವನ್ನು ನಡೆಸಿರುವ ಇವರು ಪ್ರಸ್ತುತ ದಿನಗಳಲ್ಲಿ ಯುವಕ ಯುವತಿಯರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್ ಮಂಜೇಗೌಡ ಸಂತಾಪ ಸೂಚಿಸಿ ಮಾತನಾಡಿ, ಚನ್ನಮ್ಮನವರು ಮಹಾದೈವಭಕ್ತರಾಗಿದ್ದು ಅವರ ಜೀವಿತ ಅವಧಿಯಲ್ಲಿ ದೇವೇಗೌಡರು ವಿರೋಧಪಕ್ಷದ ನಾಯಕರಾಗಿದ್ದಾಗ ಮಂತ್ರಿಗಳಾಗಿದ್ದಾಗ, ಮುಖ್ಯಮಂತ್ರಿಗಳಾಗಿದ್ದಾಗ,ಪ್ರಧಾನಿಗಳಾಗಿದ್ದಾಗ, ಹಾಗೂ ಅವರ ಮಗ ಎಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಒಂದು ದಿನವೂ ಕೂಡ ಮಾಧ್ಯಮದ ಮುಂದೆ ಹೇಳಿಕೆ ಕೊಡದೆ ಹಾಗೂ ಯಾವುದೇ ರಾಜಕೀಯ ವಿಷಯಗಳಲ್ಲಿ ಮೂಗು ತೂರಿಸದೆ ಕುಟುಂಬ ಮತ್ತು ಮಕ್ಕಳ ಏಳಿಗೆಗೆ ಶ್ರಮಿಸುತ್ತ ಇತರ ರಾಜಕಾರಣಿಗಳ ಪತ್ನಿಯರಿಗೆ ಆದರ್ಶರಾಗಿದ್ದಾರೆ ಚೆನ್ನಮ್ಮನವರಿಗೆ ಆಲೂರು ತಾಲೂಕಿನ ಬಗ್ಗೆ ವಿಶೇಷವಾದ ಆಸಕ್ತಿಯನ್ನ ಹೊಂದಿದ್ದು ತಾಲೂಕಿನ ಅಭಿವೃದ್ಧಿಯ ವಿಚಾರವಾಗಿ ತಾಲೂಕಿನ ನಾಯಕರ ಜೊತೆ ಪ್ರಸ್ತಾಪಗಳನ್ನ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಜಿಲ್ಲಾ ಹಿಂದುಳಿದ ವರ್ಗಗಳ ಮುಖಂಡ ಶಂಕರಾಚಾರ್‌, ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಕದಾಳು ಲೋಕೇಶ್, ಹಾಸನ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ರಾಜಪ್ಪಗೌಡ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎನ್ ಕಾಂತರಾಜು, ಮಾಜಿ ಸದಸ್ಯ ನಟರಾಜು ನಾಕಲಗೂಡು, ಬಿಜೆಪಿ ತಾಲೂಕು ಮಾಜಿ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್‌, ಹಾಸನ ಹಾಲು ಒಕ್ಕೂಟ ನಿರ್ದೇಶಕ ಪಿ.ಎಲ್ ಲಿಂಗರಾಜು, ಹಾಸನ ಸಹಕಾರ ಯೂನಿಯನ್ ಅಧ್ಯಕ್ಷ ಎಸ್ಎನ್ ಪ್ರಕಾಶ್, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿ ಚೆನ್ನಮ್ಮನವರ ಆದರ್ಶಗಳನ್ನ ಸ್ಮರಿಸಿಕೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್. ಕೆ ಕುಮಾರಸ್ವಾಮಿ, ಜೆಡಿಎಸ್ ತಾಲೋಕು ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಜೆಡಿಎಸ್ ಮುಖಂಡರುಗಳಾದ ಬಿ.ಸಿ ಶಂಕರಾಚಾರ್, ಅಜ್ಜೇಗೌಡ,ಹಾಸನ ಹಾಲು ಒಕ್ಕೂಟದ ನಿರ್ದೇಶಕ ಪಿ.ಎಲ್ ನಿಂಗರಾಜು,ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಸ್.ಎನ್ ಪ್ರಕಾಶ್,ನಿರ್ದೇಶಕ ಪ್ರವೀಣ್ ರಾಜಪ್ಪ, ತಾ.ಪಂ ಮಾಜಿ ಸದಸ್ಯರುಗಳಾದ ಸಿ.ವಿ ಲಿಂಗರಾಜು, ಕೆ. ಎನ್ ಕಾಂತರಾಜು,ನಟರಾಜು ನಾಕಲಗೂಡು, ರಘು ಪಾಳ್ಯ, ಸಹಕಾರ ಸಂಘದ ಅಧ್ಯಕ್ಷ ಹೋತನಹಳ್ಳಿಪುರ ಮಂಜೇಗೌಡ, ಮುಖಂಡರುಗಳಾದ ಕೆಎಸ್‌ಆರ್‌ಟಿಸಿ ರಾಜೇಗೌಡ, ಬೈರಾಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ , ದೊರೆಸ್ವಾಮಿ, ನಂದಿಶ್, ಮಾಜಿ ಸದಸ್ಯ ಮಲ್ಲೇಶ್ ಕೆ.ವಿ ಮಲ್ಲಿಕಾರ್ಜುನ, ಸದಾನಂದ್, ಗ್ರಾ.ಫಂ ಮಾಜಿ ಉಪಾಧ್ಯಕ್ಷ ಜಯಪಾಲ್, ನಾಗರಾಜು, ಧರ್ಮರಾಜು ಮಗ್ಗೆ, ನಂದೀಶ ಸುಳಗೋಡು, ದಲಿತ ಮುಖಂಡರಾದ ಅರಸಪ್ಪ, ಬಸವರಾಜು ಗೇಕರವಳ್ಳಿ, ,ಚಂದ್ರು,ಅಶೋಕ್,ಕೋಮಲೇಶ್,ಸಹಕಾರ ಸಂಘದ ಮಾಜಿ ಅಧ್ಯಕ್ಷ ಯೋಗೇಶ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈಬರ್ ಅಪರಾಧಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಿ
ಮೆದುಳಿನ ಕಾಯಿಲೆಗಳಿಗೆ ಹಾಸನದಲ್ಲೇ ಪರಿಣತ ಚಿಕಿತ್ಸೆ ಲಭ್ಯ