ಮಕ್ಕಳ ಸರ್ವತೋಮುಖ ಬೆಳವಣಿಗೆ ನಮ್ಮೆಲ್ಲರ ಜವಾಬ್ದಾರಿ: ಗೋನಾಳ್

KannadaprabhaNewsNetwork |  
Published : Nov 15, 2024, 12:36 AM IST
14ಕೆಪಿಎಲ್3:ಕೊಪ್ಪಳ ನಗರದ ಬಹಾರಪೇಟಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಕಿರಿಯ ಉರ್ದು ಶಾಲೆಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರವರ ಜಯಂತಿ ಹಾಗು ಮಕ್ಕಳ ದಿನಾಚರಣೆ ಆಚರಿಸಲಾಯಿತು.  | Kannada Prabha

ಸಾರಾಂಶ

ಮಕ್ಕಳನ್ನು ಬೌದ್ಧಿಕ, ಪೌಷ್ಟಿಕ, ಕ್ರಿಯಾಶೀಲರಾಗಿ ಬೆಳೆಸುವ ಹೊಣೆ ಪ್ರತಿಯೊಬ್ಬರದ್ದು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸದೃಢ, ಸಶಕ್ತ, ಸಮೃದ್ಧ ಭಾರತಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ನಮ್ಮೆಲ್ಲರ ಜವಾಬ್ದಾರಿ ಎಂದು ಸಿರಿಗ್ನನಡ ವೇದಿಕೆಯ ರಾಜ್ಯಾಧ್ಯಕ್ಷ ಜಿ.ಎಸ್. ಗೋನಾಳ್ ಹೇಳಿದರು.

ನಗರದ ಬಹಾರಪೇಟಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕಿರಿಯ ಉರ್ದು ಶಾಲೆಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಬೌದ್ಧಿಕ, ಪೌಷ್ಟಿಕ, ಕ್ರಿಯಾಶೀಲರಾಗಿ ಬೆಳೆಸುವ ಹೊಣೆ ಪ್ರತಿಯೊಬ್ಬರದ್ದು ಎಂದರು.

ಸಿಆರ್ ಪಿ ಮೈನುದ್ದೀನ್ ಮಾತನಾಡಿ, ಇಂದು ಶಿಕ್ಷಕರ ಕರ್ತವ್ಯಗಳು ಬಹುಮುಖವಾಗಿ ಹರಡಿಕೊಂಡಿವೆ. ಮಕ್ಕಳಲ್ಲಿ ಶಿಸ್ತು, ಶಾಂತಿ, ಸಹನೆ, ಪರೋಪಕಾರ ಮೊದಲಾದ ಗುಣಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು ಎಂದರು.

ಪ್ರಮುಖರಾದ ಚಿನ್ನಪ್ಪ ಗುಳಗುಳಿ, ವಕ್ಫ್ ಬೋರ್ಡ್ ಮಾಜಿ ಉಪಾಧ್ಯಕ್ಷ ಯೂಸುಫ್ ಖಾನ್, ಶಾಲೆಯ ಮುಖ್ಯ ಶಿಕ್ಷಕರಾದ ರೇಣುಕಾ ಸುರ್ವೆ, ತಬಸುಮ್ ಬಾನು, ಸಹ ಶಿಕ್ಷಕರಾದ ಉಷಾ ಚಿಮ್ಮಲಗಿ, ಅನುರಾಧಾ ಕುಲಕರ್ಣಿ, ಗಂಗಮ್ಮ, ಶಶಿಕಲಾ ಗುಡದಣ್ಣವರ್, ಅತಿಥಿ ಶಿಕ್ಷಕಿಯರಾದ ಹನುಮಂತಮ್ಮ, ಪತ್ರಕರ್ತ ಶಿವಕುಮಾರ ಹಿರೇಮಠ ಇದ್ದರು. ಶಿಕ್ಷಕ ಶ್ರೀನಿವಾಸ್ ಚಿತ್ರಗಾರ ಮಕ್ಕಳಿಗೆ ಪೆನ್ನು ನೀಡಿದರು. ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಂಕಲಿಪಿ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ