ಹಾಸನದಲ್ಲಿ ಮದ್ಯದಂಗಡಿಯಲ್ಲಿ ಅಬಕಾರಿ ಅಧಿಕಾರಿಗಳ ದೌರ್ಜನ್ಯ ಆರೋಪ

KannadaprabhaNewsNetwork | Published : Mar 1, 2024 2:15 AM

ಸಾರಾಂಶ

ಅಬಕಾರಿ ಇಲಾಖೆ ಅಧಿಕಾರಿಗಳು ಗೂಂಡಾ ವರ್ತನೆ ತೋರಿದ್ದು, ಈ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಕರ್ನಾಟಕ ಮದ್ಯಪಾನಪ್ರಿಯರ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ್ ಗೌಡ ಆಗ್ರಹಿಸಿದರು. ಹಾಸನದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು.

ಪ್ರತಿಭಟನೆ । ಅಧಿಕಾರಿಗಳ ಅಮಾನತ್ತಿಗೆ ಕರ್ನಾಟಕ ಮದ್ಯಪಾನಪ್ರಿಯರ ಹೋರಾಟಗಾರರ ಸಂಘ ಆಗ್ರಹ

ಕನ್ನಡಪ್ರಭ ವಾರ್ತೆ ಹಾಸನ

ಮದ್ಯದಂಗಡಿಗಳಲ್ಲಿ ಎಂಆರ್‌ಪಿ ನಾಮಫಲಕ ಹಾಕಿಸಿ ಎಂದು ಕೇಳಿದ್ದಕ್ಕೆ ನಮ್ಮ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಗೂಂಡಾ ವರ್ತನೆ ತೋರಿದ್ದು, ಈ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಕರ್ನಾಟಕ ಮದ್ಯಪಾನಪ್ರಿಯರ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ್ ಗೌಡ ಆಗ್ರಹಿಸಿದರು.

ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ನಗರದಲ್ಲಿ ಪ್ರತಿಭನೆ ನಡೆಸಿ ಮಾತನಾಡಿ, ನಗರದ ಕೆ.ಆರ್. ಪುರಂನಲ್ಲಿರುವ ಅಬಕಾರಿ ಇಲಾಖೆಗೆ ಕರ್ನಾಟಕ ಮದ್ಯಪಾನಪ್ರಿಯರ ಹೋರಾಟ ಸಂಘದ ಸದಸ್ಯರು ಅಬಕಾರಿ ಅಧಿಕಾರಿಯನ್ನು ಮಾತನಾಡಿಸಲು ಕಚೇರಿಗೆ ಹೋಗಿದ್ದು, ಎಲ್ಲಾ ಮದ್ಯದಂಗಡಿ ಮುಂದೆ ಎಂಆರ್‌ಪಿ ನಾಮಫಲಕ ಹಾಕಬೇಕು ಎಂದು ಕಳೆದ ಎರಡು ತಿಂಗಳ ಹಿಂದೆ ಅಬಕಾರಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಕೊಡಲಾಗಿತ್ತು. ಜತೆಗೆ ರೆವಿನ್ಯೂ ಡಿಸಿ ಅವರಿಗೂ ಕೂಡ ಮನವಿ ನೀಡಲಾಗಿತ್ತು. ರೆವಿನ್ಯೂ ಇಲಾಖೆಯವರು ಸಂಬಂಧಪಟ್ಟ ಇಲಾಖೆಗೆ ತಿಳಿಸಿರುವುದಾಗಿ ಹೇಳಿದರು. ಬುಧವಾರ ಮದ್ಯಾಹ್ನ ೧೨ ಗಂಟೆಗೆ ಅಬಕಾರಿ ಕಚೇರಿಗೆ ಹೋದ ವೇಳೆ ಅರ್ಜಿ ಬಗ್ಗೆ ಕೇಳಿದಾಗ ಗೂಂಡಾ ವರ್ತನೆ ತೋರಿದ್ದಾರೆ. ಇನ್ನು ಎಲ್ಲಾ ಮದ್ಯದ ಅಂಗಡಿಯಲ್ಲಿ ಏತಕ್ಕಾಗಿ ನಾಮಫಲಕ ಹಾಕುತ್ತಿಲ್ಲ ಎಂದು ಪ್ರಶ್ನೆ ಮಾಡಿದಾಗ ಉಡಾಫೆ ಉತ್ತರ ನೀಡಿದರು ಎಂದು ದೂರಿದರು.

ಅದರೆ ಎಂಆರ್‌ಪಿ ಬೋರ್ಡ್ ಹಾಕುತ್ತಿಲ್ಲ ಎಂಬುದು ನಮ್ಮ ಆಗ್ರಹ. ಈ ವೇಳೆ ಅಬಕಾರಿ ಅಧಿಕಾರಿ ಸಿಟ್ಟಿಗೆದ್ದು ಯಾರು ಎಂಆರ್‌ಪಿ ಹಾಕಿ ಎಂದು ಪ್ರಶ್ನೆ ಮಾಡುವುದಕ್ಕೆ. ನಮಗೆ ಹೇಳಿದ ಮೇಲೆ ಇಲ್ಲಿಂದ ಹೋಗಿ ಎಂದು ಹೇಳಿದರು. ಬೇಕಾದರೆ ನೂರು ಅರ್ಜಿ ಕೊಡಿ. ಆದರೆ ಅದನ್ನು ಮತ್ತೆ ಕೇಳಲು ಇಲ್ಲಿಗೆ ಬರಬಾರದು. ನಾನು ಅಬಕಾರಿ ಡಿಸಿ ಇದ್ದೀನಿ ಎಂದು ಉಡಾಫೆ ಉತ್ತರ ನೀಡಿದರು. ನೀವು ಈ ರೀತಿ ಪ್ರಶ್ನೆ ಮಾಡಲು ಬಂದರೆ ನಿಮ್ಮ ಮೇಲೆ ಧಮ್ಕಿ ಹಾಕಿ ಲಾರಿ ಹತ್ತಿಸುತ್ತೇನೆ ಎನ್ನುತ್ತಾರೆ ಎಂದು ಹೇಳಿದರು.

ಅಬಕಾರಿ ಇಲಾಖೆಯಲ್ಲಿ ಯಾರು ಕೂಡ ಇಲಾಖೆಯ ಸಮವಸ್ತ್ರ ಹಾಕಿರಲಿಲ್ಲ. ಪೊಲೀಸ್ ಠಾಣೆಗೆ ಬರುವಾಗ ಮಾತ್ರ ಹಾಕಿಕೊಂಡು ಬಂದಿದ್ದಾರೆ. ನಂತರ ಪೊಲೀಸ್ ಠಾಣೆಗೆ ಕರೆ ಮಾಡಿದ ಕೆಲ ಸಮಯದಲ್ಲಿ ರಿಸರ್ವ್ ಪೊಲೀಸ್ ವಾಹನವೇ ಬರುತ್ತದೆ. ಆದರೇ ನಮ್ಮನ್ನು ಬಂಧಿಸದೇ ಕೆ.ಆರ್. ಪುರಂ ಪೊಲೀಸ್ ಠಾಣೆಗೆ ಬರಲು ಸೂಚಿಸುತ್ತಾರೆ. ನಾವು ಕೂಡ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದು., ನಮ್ಮನ್ನು ಒಂದು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲೆ ಕೂರಿಸಿಕೊಂಡಿದ್ದರು. ಕೂಡಲೇ ಅಬಕಾರಿ ಡಿಸಿಯನ್ನು ಸಸ್ಪೆಂಡ್ ಮಾಡಿ ತನಿಖೆ ಮಾಡಿಸಬೇಕು. ಇಂತಹವರನ್ನು ಹಾಗೆಯೇ ಬಿಟ್ಟರೆ ಮದ್ಯಪ್ರಿಯರಿಗೆ ಕಷ್ಟವಾಗುತ್ತದೆ. ನಾವು ಅಬಕಾರಿ ಇಲಾಖೆಗೂ ದೂರು ಕೊಟ್ಟಿದ್ದೇವೆ ಎಂದು ಹೇಳಿದರು.

ಬೇಲೂರು ತಾಲೂಕು ಅಧ್ಯಕ್ಷ ತೋಟೇಶ್ ತಗರೆ, ನಿರ್ದೇಶಕ ರೇಣುಕಪ್ಪ ಇತರರು ಉಪಸ್ಥಿತರಿದ್ದರು.ಬಡಾವಣೆ ಪೊಲೀಸ್‌ ಠಾಣೆ ಮುಂದೆ ತಮ್ಮ ಅಸಮಾಧಾನ ಹೊರಹಾಕಿದ ಮದ್ಯಪಾನಪ್ರಿಯರ ಸಂಘದ ಪದಾಧಿಕಾರಿಗಳು.

Share this article