ರೌಡಿ ಶೀಟರ್ ಖಾಲಿದ್ ಮೇಲೆ ಹಲ್ಲೆ, ಆರೋಪ

KannadaprabhaNewsNetwork |  
Published : Sep 28, 2026, 01:15 AM IST
ಕನ್ನಡ ಪ್ರಭ ಚಿತ್ರ,ದಿ 26 ಎಂಬಿಆರ್  | Kannada Prabha

ಸಾರಾಂಶ

Allegation of assault on rowdy-sheeter Khalid

ದಾವಣಗೆರೆ: ರೌಡಿ ಶೀಟರ್ ಮೇಲೆ ಕಾಂಗ್ರೆಸ್ ಮುಖಂಡರ ಮಕ್ಕಳಿಂದ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ ಎನ್ನಲಾಗಿದೆ. ನಗರದ ಖಾಲಿದ್ ಪೈಲ್ವಾನ್ ಮೇಲೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಾದಿಕ್ ಪೈಲ್ವಾನರ ಮಕ್ಕಳು ಇತರರು ಹಲ್ಲೆ ಮಾಡಿದ್ದು, ತನಗೆ ನ್ಯಾಯಬೇಕೆಂದು ಹಲ್ಲೆಗೆ ಒಳಗಾದ ಖಾಲಿದ್ ಪೈಲ್ವಾನ್ ವೀಡಿಯೋ ಮಾಡಿ ಹರಿ ಬಿಟ್ಟಿದ್ದಾರೆ. ಸಚಿವ ಎಸ್ಸೆಸ್ ಮಲ್ಲಿಕಾರ್ಜುನರಿಗೆ ಜನ್ಮದಿನದ ಶುಭಾಶಯ ಕೋರಲು ಶ್ರೀ ಕಲ್ಲೇಶ್ವರ ಮಿಲ್‌ ಬಳಿ ರೌಡಿ ಶೀಟರ್ ಖಾಲಿದ್ ಪೈಲ್ವಾನ್ ಹೋಗಿದ್ದರು. ಮಿಲ್ ಬಳಿ ಸಾದಿಕ್ ಪೈಲ್ವಾನ್, ಅಯೂಬ್ ಪೈಲ್ವಾನರ ಮಕ್ಕಳು ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಾದಿಕ್ ಪೈಲ್ವಾನರ ಕುರಿತಂತೆ ಹಾಕಿರುವ ಅವಹೇಳನಕಾರಿ ಪೋಸ್ಟ್ ತೆಗೆಯಲು ಹೇಳಿದ್ದಾರೆಂದು ಗೊತ್ತಾಗಿದೆ. ಸೋಷಿಯಲ್ ಮೀಡಿಯಾಗೆ ಹಾಕಿದ್ದ ಪೋಸ್ಟ್ ವಿಚಾರಕ್ಕೆ ರೌಡಿ ಶೀಟರ್ ಖಾಲಿದ್ ಪೈಲ್ವಾನ್ ಹಾಗೂ ಸಾದಿಕ್‌ ಪೈಲ್ವಾನರ ಮಕ್ಕಳ ಮಧ್ಯೆ ಮಾತಿಗೆ ಮಾತು ಬೆಳೆದು, ನೂಕಾಟ, ತಳ್ಳಾಟ ನಡೆದು, ಪರಸ್ಪರರ ಮೇಲೆ ಹಲ್ಲೆಯಾಗಿದೆ. ನಂತರ ಖಾಲಿದ್ ಪೈಲ್ವಾನ್ ರಾಜಕೀಯವಾಗಿ ತನ್ನ ಏಳಿಗೆ ಸಹಿಸಲಾಗದೇ, ಹೀಗೆ ಹಲ್ಲೆ ಮಾಡಿದ್ದಾರೆ, ತನಗೆ ನ್ಯಾಯಬೇಕೆಂಬುದಾಗಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಆಸ್ಪತ್ರೆಯಲ್ಲಿ ಖಾಲಿದ್ ಪೈಲ್ವಾನ್‌ ಎಲ್ಎಲ್‌ಸಿ ಮಾಡಿಸಿದ್ದು, ವಿರೋಧಿ ಬಣವೂ ಎಂಎಎಲ್‌ಸಿ ಮಾಡಿಸಿದೆ ಎನ್ನಲಾಗಿದೆ. ಆರ್‌ಎಂಸಿ ಯಾರ್ಡ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಎರಡೂ ಕಡೆಯವರ ಪೈಕಿ ಯಾರಿಂದಲೂ ಸದ್ಯಕ್ಕೆ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆ: ಕೆ.ಟಿ.ಹನುಮಂತು
ದೇಶಕ್ಕೆ ಮಾದರಿಯಾಗುವ ಸಂವಿಧಾನ ಭವನ: ಪಿ.ರವಿಕುಮಾರ್