ಕಳೆದ ಆರು ದಿನಗಳಿಂದ ಪಟ್ಟಣದಲ್ಲಿ ಕೆರೆಗೆ ನೀರು, ಸಾಗುವಳಿಗಾಗಿ ರೈತಸಂಘದ ನಡೆಸುತ್ತಿರುವ ಅಹೋರಾತ್ರಿ ಧರಣಿ ಕಾಲಿಟ್ಟರೂ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಡಿಸಿಎಫ್ ರೈತರ ಒತ್ತಾಯ ಆಲಿಸದೆ ಇರುವ ಕಾರಣ ಆ.೩೧ರಂದು ಮಕ್ಕಳ ಚಳವಳಿ ನಡೆಸಲಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಳೆದ ಆರು ದಿನಗಳಿಂದ ಪಟ್ಟಣದಲ್ಲಿ ಕೆರೆಗೆ ನೀರು, ಸಾಗುವಳಿಗಾಗಿ ರೈತಸಂಘದ ನಡೆಸುತ್ತಿರುವ ಅಹೋರಾತ್ರಿ ಧರಣಿ ಕಾಲಿಟ್ಟರೂ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಡಿಸಿಎಫ್ ರೈತರ ಒತ್ತಾಯ ಆಲಿಸದೆ ಇರುವ ಕಾರಣ ಆ.೩೧ರಂದು ಮಕ್ಕಳ ಚಳವಳಿ ನಡೆಸಲಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.
ಪಟ್ಟಣದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ರೈತಸಂಘದ ಅಹೋರಾತ್ರಿ ಧರಣಿ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತಸಂಘದ ರೈತರ ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು,ಬರುವ ಆ.೩೧ರ ಸೋಮವಾರದಿಂದ ಮಕ್ಕಳ ಚಳುವಳಿ ನಡೆಯಲಿದ್ದು, ವಿದ್ಯಾರ್ಥಿಗಳು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮೊದಲು ಮಕ್ಕಳ ಚಳವಳಿ, ಬಳಿಕ ಪೊರಕೆ ಚಳವಳಿ, ಬಾರ್ ಕೋಲ್ ಚಳವಳಿ, ಜಾನುವಾರು ಸಮೇತ ತಾಲೂಕು ಕಚೇರಿಗೆ ಮುತ್ತಿಗೆ ಅದಕ್ಕೂ ಜಿಲ್ಲಾಡಳಿತ ಸ್ಪಂದಿಸದಿದ್ದರೆ ರೈತಸಂಘ ಹೋರಾಟದ ಸ್ವರೂಪ ಬದಲಾಗುತ್ತದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅವಕಾಶ ಮಾಡಿಕೊಡಬಾರದು ಎಂದರು.
ಪ್ರತಿಭಟನೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವು ನಾಯಕರು ಪ್ರತಿಭಟನೆಗೆ ಬರುವ ದಿನ ಟ್ರ್ಯಾಕ್ಟರ್ ಜಾಥಾ ನಡೆಸಲಾಗುವುದು.ಭರವಸೆಗೆ ನಾವು ಮಣಿಯುವುದಿಲ್ಲ ಸಮಸ್ಯೆ ಬಗೆಹರಿಸುವ ತನಕ ಹೋರಾಟ ನಿರಂತರ ಎಂದರು.
ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲಾ ತಾಲೂಕನ್ನು ತೀವ್ರ ಪೀಡಿತ ಬರ ಎಂದು ಘೋಷಿಸಿದೆ.ಆದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ನೆಲೆಯೂರಿ ಮೂಲ ಭೂತ ಸೌಕರ್ಯಗಳ ಜೊತೆಗೆ ಜಾನುವಾರುಗಳಿಗೆ ಮೇವು ವಿತರಣೆ ತಕ್ಷಣ ಮಾಡಬೇಕು ಎಂದು ಒತ್ತಾಯಿಸಿದರು.
ಪುಢಾರಿಗಳ ಕೆಲಸ:
೪ನೇ ಹಂತದ ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದು ರೈತಸಂಘದ ಒತ್ತಾಯ.ಆದರೆ ರಾಜಕೀಯ ಫುಡಾರಿಗಳು ೧,೨,೩ ಹಾಗೂ ೪ ನೇ ಹಂತದ ರೈತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾಲ್ಕನೇ ಹಂತದಲ್ಲಿ ಇರುವ ರೈತರ ಪರ ಹೋರಾಟ ಮಾಡಿ,ಅದು ಬಿಟ್ಟು ರೈತರಲ್ಲಿಯೇ ಎತ್ತಿ ಕಟ್ಟೋದು ಬಿಟ್ಟು,ಅಲ್ಲಿ ವಿಧಾನಸೌಧ ಒಳಗಡೆ ಕೂತು ಚಳುವಳಿಗಳನ್ನ ರೂಪಿಸಿ ಎಂದು ಆಗ್ರಹಿಸಿದರು.
೪ನೇ ಹಂತದ ಕೆರೆಗಳಿಗೆ ನೀರು ಹರಿಸಬೇಕು ಹಾಗೂ ಅರ್ಜಿ ಹಾಕಿದ ರೈತರಿಗೆ ಸಾಗುವಳಿ ವಿತರಿಸಬೇಕು. ಇದಕ್ಕೆ ಇರುವ ನಿವಾರಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.
ರೈತಸಂಘದ ತಾಲೂಕು ಅಧ್ಯಕ್ಷ ಮಲ್ಲಯ್ಯನಪುರ ಶಿವಣ್ಣ ಮಾತನಾಡಿ, ರೈತರ ಪ್ರತಿಭಟನಾ ಸ್ಥಳಕ್ಕೆ ಶಾಸಕರು ಬಂದಿಲ್ಲ. ಇದು ತಾಲೂಕು ಆಡಳಿತ ವೈಪಲ್ಯವಾಗಿದೆ. ಬರ ಎದುರಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ ಎಂದರು.
ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು,ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆರೆಗೆ ನೀರು ತುಂಬಿಸಲು ವಿಫಲರಾಗಿದ್ದಾರೆ.ಕೂಡಲೇ ಕೆರೆಗೆ ನೀರು ತುಂಬಿಸಬೇಕು. ಕೆರೆಗೆ ನೀರು ತುಂಬಿಸುವ ತನಕ ಹೋರಾಟವಂತೂ ನಿಲ್ಲುವುದಿಲ್ಲ ಎಂದರು.
ರೈತಸಂಘದ ಪ್ರಸಾದ್, ರಘು, ನಾಗರಾಜಪ್ಪ, ಬಸಮ್ಮ, ರೋಹಿತ್ ಗೌಡ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.