ಬಗರುಹುಕುಂ ಸಾಗುವಳಿದಾರರಿಗೆ ಕಿರುಕುಳ ಆರೋಪ

KannadaprabhaNewsNetwork |  
Published : Nov 01, 2024, 12:06 AM IST
31ಡಿಡಬ್ಲೂಡಿ2ತಾಲೂಕಿನ ಬೆಳ್ಳಿಗೆಟ್ಟಿ ಗ್ರಾಮದ ಸಾಗುವಳಿದಾರರಿಗೆ ಕಿರುಕುಳ ತಪ್ಪಿಸಿ, ಹಕ್ಕು ಪತ್ರ ನೀಡಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ತಹಸೀಲ್ದಾರ್ ಕಚೇರಿ ಎದರು ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಬೆಳ್ಳಿಗಟ್ಟಿ ಗ್ರಾಮದ ಬಗರುಹುಕುಂ ಸಾಗುವಳಿದಾರರು ಕಳೆದ 40 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಭೂಮಿ ಹಕ್ಕುಪತ್ರ ಪಡೆಯಲು ಫಾರಂ ನಂಬರ್ 53, 57 ತುಂಬಿದ್ದು ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದೇವೆ.

ಧಾರವಾಡ:

ತಾಲೂಕಿನ ಬೆಳ್ಳಿಗೆಟ್ಟಿ ಗ್ರಾಮದ ಸಾಗುವಳಿದಾರರಿಗೆ ಕಿರುಕುಳ ತಪ್ಪಿಸಿ, ಹಕ್ಕುಪತ್ರ ನೀಡಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.

ಬೆಳ್ಳಿಗಟ್ಟಿ ಗ್ರಾಮದ ಬಗರುಹುಕುಂ ಸಾಗುವಳಿದಾರರು ಕಳೆದ 40 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಭೂಮಿ ಹಕ್ಕುಪತ್ರ ಪಡೆಯಲು ಫಾರಂ ನಂಬರ್ 53, 57 ತುಂಬಿದ್ದು ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದೇವೆ. ಬಡ ರೈತರು ತುಂಡು ಭೂಮಿಯಲ್ಲಿ ಸಾಗುವಳಿ ಮಾಡಿ ಜೀವನ ನಡೆಸುತ್ತಿದ್ದಾರೆ. ತೀವ್ರ ಸಂಕಷ್ಟದ ದಿನಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡಲಾಗುತ್ತಿದ್ದು, ಇದನ್ನು ತಪ್ಪಿಸಿ ಕೂಡಲೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಲಾಯಿತು.

ಜಿಲ್ಲಾ ಮಟ್ಟದಲ್ಲಿ ಭೂ ಮಂಜುರಾತಿ ಸಮಿತಿಯಿಂದ ಕೂಡಲೇ ಸಭೆ ಕರೆದು, ಸರ್ವೇ ಮಾಡಿ ಅರ್ಹ ರೈತರಿಗೆ ಭೂಮಿಯನ್ನು ಹಂಚಿಕೆ ಮಾಡಿ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿದ ತಹಸೀಲ್ದಾರ್‌ ಡಾ. ಡಿ.ಎಸ್. ಹೂಗಾರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಉಪಾಧ್ಯಕ್ಷ ಹನುಮೇಶ ಹುಡೇದ, ಬಸವರಾಜ ಕುರುವಿನಕೊಪ್ಪ, ಮಂಜುನಾಥ ಬಡಿಗೇರ, ಬಸವರಾಜ ಹಡಪದ, ವಿರೂಪಾಕ್ಷ ಲಕ್ಕಪ್ಪನವರು, ಮಾದೇವಪ್ಪ ಲಕ್ಕಪ್ಪನವರು, ನಾಗಪ್ಪ ಕಲ್ಲೂರು, ಮೈಲಾರಿ ಮಠಗೊಂಡ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ