ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಅನಂತ ರಾಂ ವೃತ್ತ ಬಳಿ ಸೇರಿದ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜೈಕಾರ ಹಾಕಿ ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ.ಮುನಿರಾಜು ಮಾತನಾಡಿ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಗೆಲುವು ಕ್ಷೇತ್ರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ಹೊಸ ಶಕ್ತಿ ತಂದಿದೆ ಎಂದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಾಡಿಕೊಂಡ ತಪ್ಪಿನಿಂದ 46 ಸಾವಿರ ಅಂತರದಿಂದ ಗೆದ್ದಿದ್ದ ಶಾಸಕರಿಗೆ ನಾವು ಮೈತ್ರಿ ಅಭ್ಯರ್ಥಿಗೆ 10 ಸಾವಿರ ಲೀಡ್ ಕೊಡುವ ಮೂಲಕ ತಿರುಗೇಟು ನೀಡಿದ್ದೇವೆ. ಮಳವಳ್ಳಿ ಕ್ಷೇತ್ರದ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ 50 ಸಾವಿರ ಮತ ಲೀಡ್ ಕೊಡುತ್ತೇವೆ ಎನ್ನುತ್ತಿದ್ದರು. ಅದನ್ನು ಸುಳ್ಳಾಗಿದೆ ಎಂದರು.
ಈ ವೇಳೆ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಪುರಸಭೆ ಸದಸ್ಯರಾದ ರವಿ, ಪುಟ್ಟಸ್ವಾಮಿ, ಟೌನ್ ಅಧ್ಯಕ್ಷ ವೇಣು, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮೋಹನ್, ಮುಖಂಡರಾದ ಕೆ.ಸಿ.ನಾಗೇಗೌಡ, ಆನಂದ್, ದೇವರಾಜು, ಸುಂದ್ರಪ್ಪ ಇದ್ದರು.