ಕನ್ನಡಪ್ರಭ ವಾರ್ತೆ ಮದ್ದೂರು
ಅತೀವೃಷ್ಟಿಯಿಂದ ರಾಜ್ಯದ ಜನತೆ ತೀರಾ ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ನಾಯಕರು ಪಾದಯಾತ್ರೆ ನಡೆಸುತ್ತಿರುವುದು ಜನವಿರೋಧಿ ನೀತಿಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.ಪಟ್ಟಣದಲ್ಲಿ ಆಯೋಜಿಸಿರುವ ಸಮಾವೇಶದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಬರಗಾಲ ಇತ್ತು. ಈಗ ಪ್ರವಾಹ ಆಗುತ್ತಿದೆ. ರಾಜ್ಯದ ಜನರಿಗೆ ಸಾಂತ್ವನ ಹೇಳದೇ ಮುಡಾ ಹಗರಣ ಮುಂದಿಟ್ಟುಕೊಂಡು ಯಾವ ಪುರುಷಾರ್ಥಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ಮೈತ್ರಿ ಕೂಟದ ಪಕ್ಷಗಳ ಅವರದೇ 21ಕ್ಕೂ ಹೆಚ್ಚು ಭ್ರಷ್ಟಾಚಾರದ ಹಗರಣಗಳಿವೆ. ಈ ಹಗರಣದ ತನಿಖೆ ಆಗುತ್ತದೆ. ತಪ್ಪಿತಸ್ಥರು ಹೊರ ಬರುತ್ತಾರೆ. ರಾಜ್ಯದ ಜನರಿಗೆ ಸತ್ಯಾಸತ್ಯತೆ ತಿಳಿಸಬೇಕಿದೆ. ಈ ಹಗರಣಗಳ ಬಗ್ಗೆ ಅವರೇ ತನಿಖೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.ರಾಜ್ಯ ಸರ್ಕಾರ ಮತ್ತು ಸಿಎಂ, ಡಿಸಿಎಂ ವಿರುದ್ಧ ಆರೋಪ ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸಲು ಹೋಗಿ ಬಿಜೆಪಿ-ಜೆಡಿಎಸ್ ಹಳ್ಳಕ್ಕೆ ಬಿದ್ದಿದ್ದಾರೆ. ರಾಜಕೀಯ ದ್ವೇಷಕ್ಕೆ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಹೇಳಲು ಸಮಯ ಸಾಕಗಲ್ಲ ಎಂದು ದೂರಿದರು.
ವಿಪಕ್ಷಗಳ ಸರ್ಕಾರದಲ್ಲೇ ಬಹಳಷ್ಟು ಸೈಟ್ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಬಂದಾಗ ಸೈಟ್ ಕೊಟ್ಟಿಲ್ಲ. ಅವರ ಕಾಲದಲ್ಲಿ ಹೆಚ್ವು ಸೈಟ್ ಕೊಟ್ಟಿದ್ದಾರೆ, ಬೇಕು ಅಂತಲೇ ಸೃಷ್ಟಿಸಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಈ ಹಿಂದೆ ಬಿಜೆಪಿಯವರು ದೇವೇಗೌಡರ ಕುಟುಂಬಕ್ಕೆ ಹೆಚ್ಚು ಸೈಟ್ ಹೋಗಿದೆ ಅಂತ ಹೇಳಿದ್ದರು. ಕಳೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಆಗಿಲ್ಲ. ಆ ಪಕ್ಷ ದಿನೇ ದಿನೇ ಕುಸಿಯುತ್ತಿದೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಆದರೆ, ಬಿಜೆಪಿ-ಜೆಡಿಎಸ್ ನಾಯಕರಲ್ಲಿ ಒಗ್ಗಟ್ಟು ಎಂಬುದೇ ಇಲ್ಲ ಎಂದು ಹೇಳಿದರು.ಅವಕಾಶ ಸಿಕ್ಕರೆ ದರ್ಶನ್ ನೋಡಲು ಹೋಗುತ್ತೇನೆ: ಕೆ.ಎಂ.ಉದಯ್
ಮದ್ದೂರು: ನಟ ದರ್ಶನ್ ನನ್ನ ಸ್ನೇಹಿತರು. ಅವಕಾಶ ಸಿಕ್ಕಿದರೆ ಅವರನ್ನು ನೋಡಲು ಹೋಗುತ್ತೇನೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಜೈಲಿನಲ್ಲಿರುವ ದರ್ಶನ್ ಡಯಟ್ ಮಾಡಿ ಸಣ್ಣ ಹಾಗಿದ್ದಾರೆ. ಅವರ ಬೇಲ್ ಅಪ್ಲಿಕೇಶನ್ ಬಗ್ಗೆ ಫ್ಯಾಮಿಲಿಯವರು ವಹಿಸಿಕೊಂಡಿದ್ದಾರೆ ಎಂದರು.
ಮೊದಲಿನಿಂದಲೇ ದರ್ಶನ್ ನನ್ನ ಸ್ನೇಹಿತರಾಗಿದ್ದರು. ಮುಂದೇನು ಒಡನಾಟ ಇರುತ್ತದೆ. ದರ್ಶನ್ ನೋಡಕೆ ಹೋಗಿಲ್ಲ ಅವಕಾಶ ಸಿಕ್ಕಾಗ ನೋಡೋಣ. ಈ ಬಗ್ಗೆ ನನಗೆ ಯಾವುದೇ ಭಯ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.