ಎರಡು ಸಾವಿರ ಬಡ ಜನರಿಗೆ ನಿವೇಶನ ಹಂಚಿಕೆ: ರಮೇಶ್‌ ಬಂಡಿಸಿದ್ದೇಗೌಡ

KannadaprabhaNewsNetwork |  
Published : Oct 05, 2026, 02:00 AM IST
4ಕೆಎಂಎನ್ ಡಿ25 | Kannada Prabha

ಸಾರಾಂಶ

ಸರ್ಕಾರ ಈಗಾಗಲೇ ರಾಜ್ಯ ಮಟ್ಟದಲ್ಲಿ ನಿವೇಶನ ವಂಚಿತ ಬಡವರಿಗೆ ನಿವೇಶನ ನೀಡಲು ಮುಂದಾಗಿದೆ. ಅದರಂತೆ ನಮ್ಮ ಕ್ಷೇತ್ರದಲ್ಲಿಯೂ ಎರಡು ಸಾವಿರ ಮಂದಿ ಬಡವರಿಗೆ ನಿವೇಶನ ಹಂಚಲಾಗುತ್ತದೆ. ಹಲವು ವರ್ಷಗಳ ಕನಸಾಗಿರುವ ನಿವೇಶನ ಹಂಚಿಕೆ ನನಸು ಮಾಡುವ ಸುದಿನ ಇದೀಗ ಬಂದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕ್ಷೇತ್ರದ ಬೆಳಗೊಳ ಸೇರಿದಂತೆ ಕೊತ್ತತ್ತಿ ಎರಡನೇ ವೃತ್ತದವರೆಗೂ ಎರಡು ಸಾವಿರ ಬಡ ಜನರಿಗೆ ನಿವೇಶನ ಹಂಚಲು ನಮ್ಮ ಸರ್ಕಾರದ ವತಿಯಿಂದ ನಾನು ಮುಂದಾಗಿದ್ದೇನೆ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಬೂದಿಗುಂಡಿ ಬಳಿ ವಾಸವಿರುವ 51 ಮಂದಿ ಬಡ ಜನರಿಗೆ ಮನೆ ದಾಖಲೆಗಳ ಮಾಡಿಸಿ ಇ-ಸ್ವತ್ತು ಪತ್ರಗಳ ವಿತರಿಸಿ ಮಾತನಾಡಿ, ಸರ್ಕಾರ ಈಗಾಗಲೇ ರಾಜ್ಯ ಮಟ್ಟದಲ್ಲಿ ನಿವೇಶನ ವಂಚಿತ ಬಡವರಿಗೆ ನಿವೇಶನ ನೀಡಲು ಮುಂದಾಗಿದೆ. ಅದರಂತೆ ನಮ್ಮ ಕ್ಷೇತ್ರದಲ್ಲಿಯೂ ಎರಡು ಸಾವಿರ ಮಂದಿ ಬಡವರಿಗೆ ನಿವೇಶನ ಹಂಚಲಾಗುತ್ತದೆ ಎಂದರು.

ಹಲವು ವರ್ಷಗಳ ಕನಸಾಗಿರುವ ನಿವೇಶನ ಹಂಚಿಕೆಯನ್ನು ನನಸು ಮಾಡುವ ಸುದಿನ ಇದೀಗ ಬಂದಿದೆ. ಈಗಾಗಲೇ ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ ಆಯಾ ಗ್ರಾಮ ಪಂಚಾಯ್ತಿ, ಪುರಸಭೆ ವ್ಯಾಪ್ತಿಲ್ಲಿನ ಬಡವರನ್ನು ಸಹ ಗುರುತಿಸಲಾಗುತ್ತಿದೆ. ಸರ್ಕಾರ ಹೇಳಿದಂತೆ ದಾಖಲೆಗಳಿಗಾಗಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ವಾಸ ಸ್ಥಳದ ದಾಖಲೆಗಳನ್ನು ನೀಡಲಾಗುತ್ತಿದೆ ಎಂದರು.

ಪಟ್ಟಣ ರಂಗನಾಥ ನಗರ ಬಡಾವಣೆ ಬೂದಿಗುಂಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಮನೆ ಇದ್ದರೂ ಯಾವುದೇ ದಾಖಲೆಗಳು ಇರಲಿಲ್ಲ. ಹಲವು ವರ್ಷಗಳಿಂದ ವಾಸವಿದ್ದ ಇವರಿಗೆ ಇದೀಗ ಮನೆ ದಾಖಲೆಗಳ ನೀಡಲಾಗಿದೆ ಎಂದರು.

ಈ ವೇಳೆ ತಹಸೀಲ್ದಾರ್ ಚೇತನ ಯಾದವ್, ತಾಪಂ ಇಒ ಚಂದ್ರು, ಮುಖ್ಯಾಧಿಕಾರಿ ಎಂ.ರಾಜಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್. ದಿನೇಶ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ. ನಂದೀಶ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಸೋಮಸುಂದರ್ ಸೇರಿದಂತೆ ಪುರಸಭೆ ಮಾಜಿ ಅಧ್ಯಕ್ಷರು ಮಾಜಿ ಸದಸ್ಯರು ಬಡಾವಣೆ ಮುಖಂಡರುಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ತುಂಗಭದ್ರಾ ರೈತ ಸಂಘ ಆಗ್ರಹ
ಕಾಣೆಯಾದ ಮಕ್ಕಳ ಪತ್ತೆಗೆ ಪೊಲೀಸ್ ಇಲಾಖೆ ಚುರುಕು