ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮ್ಯೂಸಿಕಲ್ ಚೇರ್ ಆಟವನ್ನು ವಿಕಲಚೇತನ ಮಕ್ಕಳಿಂದ ಆಡಿಸಿ ಗೆದ್ದಂತಹ ಸ್ಪರ್ಧಿಗೆ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದಂತಹ ಮಂಜುನಾಥ ಆರ್ ಕುರುವಂಕ ಮಾತನಾಡಿ, ಇಂತಹ ಸಂಸ್ಥೆಗಳಿಗೆ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚಿನ ಆದ್ಯತೆಯನ್ನು ಕೊಡಬೇಕಾಗಿ ಸಂಘ ಸಂಸ್ಥೆಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಜೆ ರವರು ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿಕಲಚೇತನ ಮಕ್ಕಳ ಬಗ್ಗೆ ಅನುಕಂಪ ತೋರಿಸುವ ಬದಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಕೋರಿದರು. ಕಾರ್ಯದರ್ಶಿ ರಮೇಶ್ ಬಿ ಎಂ ಮತ್ತು ಖಜಾಂಚಿ ವಿನೋದ್ ಪ್ರಸಾದ್ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಈ ಸಂಸ್ಥೆಯಲ್ಲಿ ಮಾಡುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆ ಮತ್ತು ನಮ್ಮೆಲ್ಲರ ಆದ್ಯ ಕರ್ತವ್ಯ, ವಿಕಲಚೇತನರನ್ನು ಉದ್ದೇಶಿಸಿ ಮಾತನಾಡಿ ಅಪೌಷ್ಟಿಕತೆಯಿಂದ ಅಥವಾ ಅನಾರೋಗ್ಯದಿಂದ ಜನಿಸಿದಂತಹ ಮಕ್ಕಳನ್ನು ನಿರ್ಲಕ್ಷಿಸಬಾರದು ಅವರನ್ನು ಸಮಾಜದಲ್ಲಿ ಒಬ್ಬರಂತೆ ಮುಖ್ಯ ವಾಹಿನಿಗೆ ತರಲು ಎಲ್ಲರೂ ಶ್ರಮಿಸಬೇಕು ಎಂದು ನುಡಿದರು. ಮಹಿಳಾ ಕಾರ್ಯದರ್ಶಿ ಪೂಜಾ ಎಲ್‌ರವರು ಮಾತನಾಡಿ, ಇಂತಹ ಮಕ್ಕಳನ್ನು ಪಾಲನೆ ಪೋಷಣೆ ಮಾಡುವ ಎಲ್ಲಾ ಸಂಸ್ಥೆಯ ಶಿಕ್ಷಕರಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಸರ್ಕಾರವು ಗಮನ ಹರಿಸಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಜನನಿ ಸೇವಾ ಫೌಂಡೇಶನ್‌ನ ಸದಸ್ಯರಾದ ದಶರತ್ ಮಾದಿಹಳ್ಳಿ, ದಿಲೀಪ್ ಕುಮಾರ್, ಮಂಜುನಾಥ್ ಸಿಎನ್, ಶೀಲಾ ಮಂಜುನಾಥ್ ಮತ್ತು ಜಗದೀಶ್ ಆಲಗೊಂಡನಹಳ್ಳಿ ಮತ್ತಿತರಿದ್ದರು.