ನರಗುಂದ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ .ಕೂಡಲೇ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ರಾಷ್ಟ್ರಪತಿಗಳು ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕೆಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಆಗ್ರಹಿಸಿದರು.
ಅವರು ಪಟ್ಟಣದ ಶಿವಾಜಿ ಮಹಾರಾಜ್ ವೃತ್ತದಲ್ಲಿ ಭಾನುವಾರ ನರಗುಂದ ಬ್ಲಾಕ್ ಕಾಂಗ್ರೆಸ್ ಹಾಗೂ ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ತಹಸೀಲ್ದಾರ ಶ್ರೀಶೈಲ ತಳವಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಮಾತನಾಡಿದರು.ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೊಡ್ಡ ಪಡ್ಯಂತ್ರ ನಿರ್ಮಿಸಿವೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಯುತ್ತಿರುವದು ವಿಷಾದನೀಯ ಸಂಗತಿ. ಪ್ರಜಾಪ್ರಭುತ್ವದ ಕಗ್ಗೊಲೆಯಾದ ರಾಜ್ಯಪಾಲರ ಅಸಂವಿಧಾನಿಕ ಕರ್ತವ್ಯ ಖಂಡಿಸುತ್ತೇವೆ ಎಂದರು.
135 ಶಾಸಕರ ಬೆಂಬಲದಿಂದ ಬಲಿಷ್ಠ ಕಾಂಗ್ರೆಸ್ ಸರ್ಕಾರದ ಹಗರಣವಿಲ್ಲದ ಆಡಳಿತ ಸಹಿಸದೇ ಮತ್ತು ಪಕ್ಷದ ಜನಪ್ರೀಯತೆ ಸಹಿಸದೇ ದ್ವೇಷ ಭಾವನೆ ರಾಜಕೀಯ ಕುತಂತ್ರದಿಂದ ಕೇಂದ್ರ ಬಿಜೆಪಿ ಸರ್ಕಾರದ ಸಹಕಾರದಿಂದ ಸಿಎಂವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ನಮ್ಮ ರಾಜ್ಯಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಘೋರ ಅನ್ಯಾಯ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದ್ಯಾಮಣ್ಣ ಕಾಡಪ್ಪನವರ ಮಾತನಾಡಿ, ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಜನರು ಧಂಗೆ ಎದ್ದರು ಎಳಬಹುದು ಎಂದು ಎಚ್ಚರಿಸಿದರು.
ಈ ವೇಳೆ ವಕೀಲರು ಬಿ.ಎನ್. ಭೋಸಲೆ, ತಾಲೂಕಾಧ್ಯಕ್ಷ ಪ್ರವೀಣ ಯಾವಗಲ್ಲ, ಎಂ.ಎಸ್. ಪಾಟೀಲ, ಸುರೇಶ ಸಾತನ್ನವರ, ಗುರುಪಾದಪ್ಪ ಕುರಹಟ್ಟಿ, ಶಿವನಗೌಡ ಹೆಬ್ಬಳ್ಳಿ, ವಿರೇಶ ಚುಳಕಿ, ಸದ್ದಾಂಹುಸೇನ, ರಮಜಾನಸಾಬ್ ನದಾಫ್, ನೀಲಪ್ಪ ಗುಡದನ್ನವರ, ಉಮಾ ದ್ಯಾವನೂರ, ಉದಯಗೌಡ ವೀರನಗೌಡ್ರ, ಶಂಕರ ಕಾಂಬಳೆ, ವಿಷ್ಣು ಸಾಠೆ, ಪ್ರಕಾಶ ಹಡಗಲಿ, ಮಲ್ಲೇಶಪ್ಪ ಅಬ್ಬಿಗೇರಿ, ಯಶವಂತ ನಡುವಿನಮನಿ, ರವಿ ಯರಗಟ್ಟಿ, ಸುಭಾಸ ನೀಲರಡ್ಡಿ, ಎಸ್.ಕೆ. ದಂಡಾಪೂರ ಸೇರಿದಂತೆ ಹಲವಾರು ಇದ್ದರು.