ಕಲಿಕೆಯ ಜತೆಗೆ ಸಾಮಾನ್ಯ ಜ್ಞಾನವನ್ನೂ ತಿಳಿದುಕೊಳ್ಳಿ

KannadaprabhaNewsNetwork |  
Published : Jul 15, 2025, 01:00 AM IST
14ಎಚ್ಎಸ್ಎನ್10 : ಹೊಳೆನರಸೀಪುರದ ದೇವಾಂಗ ಬಡಾವಣೆಯ ದೇವಾಂಗ ಭವನದಲ್ಲಿ ತಾ. ದೇವಾಂಗ ನೌಕರರ ಸಂಘದ ಪದಗ್ರಹಣ ಸಮಾರಂಭದಲ್ಲಿ ರಾಜ್ಯ ದೇವಾಂಗ ನೌಕರರ ಸಂಘ ಅಧ್ಯಕ್ಷ ಹಾಗೂ ಅಬಕಾರಿ ಆಯುಕ್ತ ನಾಗೇಶ ಕುಮಾರ್ ಡಿ. ಮಾತನಾಡಿದರು.  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಜತೆಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ದೊರೆಯುವ ಅಮೂಲ್ಯವಾದ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಾಗೇಶ ಕುಮಾರ್ ಡಿ. ಸಲಹೆ ನೀಡಿದರು. ಜ್ಞಾನರ್ಜನೆಗೆ ಪೂರಕವಾದ ಪುಸ್ತಕವನ್ನು ಹೆಚ್ಚು ಹೆಚ್ಚು ಓದಿ ತಿಳಿದುಕೊಳ್ಳುವ ಮನಸ್ಥಿತಿ ರೂಡಿಸಿಕೊಂಡು, ಉತ್ತಮ ಆರೋಗ್ಯ ಹಾಗೂ ಅತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಅಗತ್ಯವಾದ ಯೋಗಾಭ್ಯಾಸ ಮಾಡುತ್ತಾ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಪೋಷಕರು ಕನಸನ್ನು ನನಸು ಮಾಡಿರೆಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಜತೆಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ದೊರೆಯುವ ಅಮೂಲ್ಯವಾದ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಾಗೇಶ ಕುಮಾರ್ ಡಿ. ಸಲಹೆ ನೀಡಿದರು.

ಪಟ್ಟಣದ ದೇವಾಂಗ ಬಡಾವಣೆಯ ದೇವಾಂಗ ಭವನದಲ್ಲಿ ತಾಲೂಕು ದೇವಾಂಗ ನೌಕರರ ಸಂಘದ ಪದಗ್ರಹಣ ಸಮಾರಂಭದಲ್ಲಿ ರಾಜ್ಯ ದೇವಾಂಗ ನೌಕರರ ಸಂಘ ಅಧ್ಯಕ್ಷ ಹಾಗೂ ಅಬಕಾರಿ ಆಯುಕ್ತ ನಾಗೇಶ ಕುಮಾರ್ ಡಿ. ಮಾತನಾಡಿದರು. ಜ್ಞಾನರ್ಜನೆಗೆ ಪೂರಕವಾದ ಪುಸ್ತಕವನ್ನು ಹೆಚ್ಚು ಹೆಚ್ಚು ಓದಿ ತಿಳಿದುಕೊಳ್ಳುವ ಮನಸ್ಥಿತಿ ರೂಡಿಸಿಕೊಂಡು, ಉತ್ತಮ ಆರೋಗ್ಯ ಹಾಗೂ ಅತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಅಗತ್ಯವಾದ ಯೋಗಾಭ್ಯಾಸ ಮಾಡುತ್ತಾ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಪೋಷಕರು ಕನಸನ್ನು ನನಸು ಮಾಡಿರೆಂದು ಸಲಹೆ ನೀಡಿದರು.ಇತ್ತೀಚಿನ ವರ್ಷಗಳಲ್ಲಿ ಶೇ.೯೦ಕ್ಕೂ ಹೆಚ್ಚು ಅಂಕ ಪಡೆಯುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ, ನಂತರದ ವ್ಯಾಸಂಗದಲ್ಲಿ ಕೆಲವರ ಪ್ರಗತಿ ಕುಂಠಿತಗೊಳ್ಳಲು ಕಾರಣವೇನೆಂದು ಪರಿಶೀಲನೆ ನಡೆಸಿದಾಗ ಸಹವಾಸ ದೋಷ ಅಥವಾ ಮೊಬೈಲ್ ಬಳಕೆ ಹಾಗೂ ಇತರೆ ಕಾರಣಗಳು ಸಾಕ್ಷಿಯಾಗಿದೆ. ಆದರೆ ಕಲಿಕೆಯ ಸಂದರ್ಭದಲ್ಲಿ ಹೆಚ್ಚಿನ ಕಾಳಜಿಯೊಂದಿಗೆ ಕಲಿಯದೇ ಸಮಯ ವ್ಯರ್ಥ ಮಾಡಿದರೆ ಜೀವನವೇ ನಾಶವಾಗುತ್ತದೆ. ೧೮ ರಿಂದ ೨೦ ವರ್ಷ ಕಲಿಕೆಯೇ ಜೀವನವೆಂದು ಪ್ರೀತಿಯಿಂದ ಕಲಿತರೆ ಮುಂದಿನ ವರ್ಷಗಳು ಶಾಂತಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ ಎಂದು ತಿಳಿಸಿ, ಸಲಹೆ, ಸೂಚನೆಗಳು ಹಾಗೂ ಎಚ್ಚರಿಕೆಯ ನುಡಿಗಳನ್ನು ಆಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಲಹೆ ನೀಡಿದರು. ಹಿಂದೂ ಸಂಸ್ಕೃತಿಯ ಪಾಲನೆ ಮತ್ತು ಪೂರ್ವಿಕರ ಆಚರಣೆಗಳನ್ನು ಅನುಸರಿಸುವ ಜತೆಗೆ ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಮತ್ತು ಭಾರತೀಯ ಸನಾತನ ಧರ್ಮದ ಅಮೂಲ್ಯ ಕೊಡುಗೆಗಳಿಂದ ನೆಮ್ಮದಿಯ ಬದುಕು ಸಾಧ್ಯವೆಂದು ಅಮೂಲ್ಯ ಮಾರ್ಗದರ್ಶನ ನೀಡಿದರು. ಪುರಸಭಾ ಸದಸ್ಯ ಎ.ಜಗನ್ನಾಥ್, ತಾ.ಆರೋಗ್ಯಾಧಿಕಾರಿ ಡಾ. ರಾಜೇಶ್, ಹಿರಿಯರಾದ ಶೈಲಜಾ ಧರಣಿ, ನಾಗವೇಣಿ ಇತರರು ಮಾತನಾಡಿದರು. ತಾಲೂಕು ದೇವಾಂಗ ನೌಕರರ ಸಂಘದ ಅಧ್ಯಕ್ಷರಾಗಿ ಶೈಲಜಾ ಧರಣಿ, ಉಪಾಧ್ಯಕ್ಷರಾಗಿ ಮಹೇಶ್ವರ, ಪ್ರಧಾನ ಕಾರ್ಯದರ್ಶಿಯಾಗಿ ವಸಂತಕುಮಾರ್ ಎಚ್.ಡಿ., ಸಹ ಕಾರ್ಯದರ್ಶಿ ದರ್ಶನ್, ಖಜಾಂಚಿ ರತ್ನಮ್ಮ ರವಿ, ಸಂಘಟನಾ ಕಾರ್ಯದರ್ಶಿ ಯೋಗೇಶ್, ಗೌರವಾಧ್ಯಕ್ಷರಾಗಿ ನಾಗವೇಣಿ ಹಾಗೂ ನಿರ್ದೇಶಕರು ಪದಗ್ರಹಣ ಮಾಡಿದರು. ವಸಂತ ಕುಮಾರ್ ಎಚ್.ಎಸ್, ರೇಣುಕೇಶ್, ಮಮತ ಉಮೇಶ್, ನಾಗೇಂದ್ರ, ಶಂಕರ, ಗಣೇಶ್, ಮೋಹನ್ ಕುಮಾರ್, ರಂಗನಾಥ್ ವಿ.ಆರ್, ಯಶವಂತ್ ಎಚ್.ಎಸ್, ಸವಿತ, ದರಣಿ, ನಾಗರಾಜ್, ಸಾತ್ವಿಕ್, ವಿಶ್ವನಾಥ್ ಇತರರು ಇದ್ದರು.

PREV

Latest Stories

ಭೂಮಿ ಉಳುವಿಗಾಗಿ ರಸಗೊಬ್ಬರ ಬಳಸಬೇಡಿ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ
ಯಶಸ್ವಿ ಪ್ರದರ್ಶನದತ್ತ ‘ಜಂಗಲ್ ಮಂಗಲ್’: ರಕ್ಷಿತ್ ಕುಮಾರ್