ಪಠ್ಯದೊಂದಿಗೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ

KannadaprabhaNewsNetwork |  
Published : Nov 27, 2026, 01:30 AM IST
ದಿ.26-ಅರ್.ಪಿ.ಟಿ.1ಪಿ: ರಿಪ್ಪನ್‍ಪೇಟೆಯ ಶಾರದಾ ರಾಮಕೃಷ್ಣ ಶಾಲಾ ಅವರಣದಲ್ಲಿ ನಡೆದ ತಾಲ್ಲೂಕ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. | Kannada Prabha

ಸಾರಾಂಶ

Along with their studies, children should also engage in co-curricular activities.

ರಿಪ್ಪನ್‍ಪೇಟೆ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಂಗ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದು ಶ್ರೀಶಾರದ ರಾಮಕೃಷ್ಣ ವಿದ್ಯಾಲಯದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಿ.ಎಂ. ದೇವರಾಜ್ ಹೇಳಿದರು.

ರಿಪ್ಪನ್‍ಪೇಟೆಯ ಶ್ರೀಶಾರದ ರಾಮಕೃಷ್ಣ ವಿದ್ಯಾಲಯ ಅವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಹೊಸನಗರ ಸಹಯೋಗದಲ್ಲಿ ಆಯೋಜಿಸಿದ್ದ 2026-27 ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನ ಶೀಲತೆ ಕಲಾಸಕ್ತಿ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಅತ್ಮವಿಶ್ವಾಸ ಸೃಜನಶೀಲತೆ ಬೆಳಸಲು ಸಹಕಾರಿಯಾಗಬೇಕು ಎಂದರು. ಕ.ರಾ.ಸ.ನೌ.ಸ.ಆಧ್ಯಕ್ಷ ಬಿ.ಪಿ.ಸೋಮಶೇಖರ, ಪ್ರೌ.ಶಾ.ಮು.ಶಿ.ಸಂಘ ಅಧ್ಯಕ್ಷ ನಾಗರಾಜ್, ಜಿ.ಆರ್.ರಮೇಶ್, ದುಗ್ಗಪ್ಪ, ಶೀಲಾವತಿ, ಪುಟ್ಟಸ್ವಾಮಿ, ಜಗದೀಶ ಕಾಗಿನಲ್ಲಿ, ಇನ್ನಿತರರು ಇದ್ದರು.

ಮುಖ್ಯ ಶಿಕ್ಷಕ ಕರಿಬಸಪ್ಪ ಸ್ವಾಗತಿಸಿದರು.ಮಂಜುನಾಥ ನಿರೂಪಿಸಿದರು. ಮುಖ್ಯ ಶಿಕ್ಷಕ ರವಿ ವಂದಿಸಿದರು.

--------------------

ದಿ.26-ಅರ್.ಪಿ.ಟಿ.1ಪಿ: ರಿಪ್ಪನ್‍ಪೇಟೆಯ ಶಾರದಾ ರಾಮಕೃಷ್ಣ ಶಾಲಾ ಅವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ದಿನವಿಡೀ ಕಾಯುವ ಬಡವರು
ಸಂವಿಧಾನ ಪ್ರತಿ ನಾಗರಿಕನ ಬದುಕಿಗೆ ದಾರಿದೀಪ: ದಿನೇಶ್