ಶಂಕರಸ್ವಾಮಿ ದೀಪೋತ್ಸವಕ್ಕೆ ರಂಭಾಪುರಿ ಜಗದ್ಗುರುಗಳ ಚಾಲನೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರ
ಆರದವಳ್ಳಿ ಸಮೀಪದ ಶಂಕರದೇವರ ಮಠದಲ್ಲಿ ಬುಧವಾರ ಸಂಜೆ ನಡೆದ ಶ್ರೀಗುರು ಶಂಕರಸ್ವಾಮಿ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿ, ಹೊರಗಿರುವ ಕತ್ತಲೆ ದೂರವಾಗುವುದರ ಜೊತೆಗೆ ಒಳಗಿನ ಅಜ್ಞಾನವೆಂಬ ಕತ್ತಲೆ ಕಳೆದು ಜ್ಞಾನದ ಬೆಳಕು ಅರಿಯ ಬೇಕೆಂಬುದೇ ದೀಪೋತ್ಸವ ಎಂದರು.
ಆಧುನಿಕತೆ, ವೈಚಾರಿಕತೆಯ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಪರಂಪರೆ ಕಲುಷಿತ ವಾಗುತ್ತಿದೆ. ಬೆಳೆಯುವ ಪೀಳಿಗೆಯಲ್ಲಿ ಯೋಗ್ಯ ಸಂಸ್ಕಾರ ಮಾರ್ಗದರ್ಶನದ ಕೊರತೆ ಕಾಡುತ್ತಿದ್ದು ಅವರ ಜೀವನ ಅವನತಿಯತ್ತ ಸಾಗುತ್ತಿದೆ. ಸತ್ಯ ಶುದ್ಧವಾದ ಧರ್ಮದ ತತ್ತ್ವಸಿದ್ಧಾಂತ ಮನವರಿಕೆ ಮಾಡಿ ಕೊಡುವ ಮೂಲಕ ವಿಶೇಷವಾಗಿ ಯುವ ಜನರನ್ನು ಜಾಗೃತಿಗೊಳಿಸುವ ಕಾರ್‍ಯ ಹಿಂದೆಂದಿಗಿಂತ ಇಂದು ಅಗತ್ಯವಾಗಿದೆ ಎಂದು ಹೇಳಿದರು.ಅಸತ್ಯದಿಂದ ಸತ್ಯದೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ, ಸಾವಿನಿಂದ ಸಾವಿಲ್ಲದ ಕಡೆಗೆ ಕರೆದೊಯ್ಯುವುದೇ ಗುರುವಿನ ಪರಮ ಕರ್ತವ್ಯ. ಧರ್ಮ ವೇದಿಕೆ ಮೇಲಿನ ಮಾತಲ್ಲ. ಆಡಿದ ಮಾತಿ ನಂತೆ ನಡೆಯುವುದೇ ನಿಜ ಧರ್ಮ. ಮಾತು ತಪ್ಪುವುದರಿಂದಲೇ ಧರ್ಮ ಸೇರಿದಂತೆ ಎಲ್ಲ ರಂಗಗಳಲ್ಲಿ ಅರಾಜಕತೆ, ಅಸ್ತವ್ಯಸ್ಥತೆ ಕಾಣುತ್ತಿದೆ. ಬದುಕು ಬದಲಾಗಬೇಕಾದರೆ ದಾರಿಯನ್ನು ಬದಲಾಯಿಸಿ ಕೊಳ್ಳಬೇಕು ಎಂದ ಜಗದ್ಗುರುಗಳು, ಸದ್ವಿಚಾರಗಳನ್ನು ಮರೆಯುವುದು ಮನುಷ್ಯ ಸ್ವಭಾವ. ಮರೆತದ್ದನ್ನು ನೆನಪಿಸಲು ಗುರು ಬೋಧನೆ ಅಗತ್ಯ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಜನರಿಗೆ ನಿಜ ಧರ್ಮದ ಬೋಧನೆಗೆ ಅತಿ ಹೆಚ್ಚು ಪ್ರವಾಸ ಮಾಡುವ ಪೂಜ್ಯರೆಂದು ರಂಭಾಪುರಿ ಜಗದ್ಗುರುಗಳು ಹೆಸರಾಗಿದ್ದಾರೆ. ವೀರಶೈವ ಲಿಂಗಾಯಿತ ಧರ್ಮದ ಜಾಗೃತಿಗೆ ಶ್ರಮಿಸುತ್ತಿದ್ದಾರೆ. ಹಣತೆ, ಕಗ್ಗತ್ತಲನ್ನು ದೂರ ಮಾಡುವಂತೆ ಅಂಧಕಾರ ದೂರಮಾಡುವಲ್ಲಿ ಪೀಠ ಮಠಗಳು ನಿರಂತರವಾಗಿ ಶ್ರಮಿಸುತ್ತಿವೆ ಎಂದರು.
ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಆಯುರ್ವೇದ ವೈದ್ಯಕೀಯ ಕಾಲೇಜು ಉಪನ್ಯಾಸಕರಾದ ಹಾವೇರಿ ಗೌರಿ ಮಠಾಧ್ಯಕ್ಷ ಶ್ರೀಶಿವಯೋಗಿ ಶಿವಾಚಾರ್ಯರು, ರಟ್ಟೆಹಳ್ಳಿ ಕಬ್ಬಿಣಕಂತೆ ಮಠಾಧ್ಯಕ್ಷ ಶ್ರೀ ಶಿವಲಿಂಗ ಶಿವಾಚಾರ್ಯರು ಉಪದೇಶ ನೀಡಿದರು. ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವಸಿದ್ಧಲಿಂಗ ಶಿವಾಚಾರ್ಯರು, ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.
ಶ್ರೀ ದೇವಿ ಗುರುಕುಲದ ಡಾ. ದಯಾನಂದಮೂರ್ತಿ ಶಾಸ್ತ್ರಿ ತಂಡದಿಂದ ಭಕ್ತಿಗೀತೆಗಳ ಗಾಯನ, ಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ, ಲೋಕೇಶ್ ಕಲಾತಂಡಂದ ವೀರಗಾಸೆ, ಬಾಣ ಬಿರುಸುಗಳ ಪ್ರದರ್ಶನ ಗಮನ ಸೆಳೆಯಿತು. ದಿನೇಶ್, ಶಿಕ್ಷಕಿ ದೇವಿಕಾ , ಅಶೋಕಕುಮಾರ್ ಇದ್ದರು.
ಚಿಕ್ಕಮಗಳೂರು ತಾಲೂಕು ಆರದವಳ್ಳಿ ಸಮೀಪದ ಶಂಕರದೇವರ ಮಠದಲ್ಲಿ ಬುಧವಾರ ಸಂಜೆ ಶ್ರೀಗುರು ಶಂಕರಸ್ವಾಮಿ ಕಾರ್ತಿಕ ದೀಪೋತ್ಸವ ಸಮಾರಂಭ ನಡೆಯಿತು.