ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ

KannadaprabhaNewsNetwork |  
Published : Aug 21, 2026, 01:30 AM IST
20ಕೆಪಿಕೆವಿಟಿ01:  | Kannada Prabha

ಸಾರಾಂಶ

ಪಟ್ಟಣದ ಮುಖ್ಯ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ರಸ್ತೆ ತೆರವು ಕಾರ್ಯಾಚರಣೆ ಕೈ ಎಂದು ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣಾ ಒಕ್ಕೂಟದ ವತಿಯಿಂದ ವ್ಯಾಪಾರಿಗಳು ಪಪಂ ಮುಖ್ಯಾಧಿಕಾರಿ ಜಸ್‌ಪಾಲ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದಸರು.

ಕನ್ನಡಪ್ರಭ ವಾರ್ತೆ ಕವಿತಾಳ

ಪಟ್ಟಣದ ಮುಖ್ಯ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ರಸ್ತೆ ತೆರವು ಕಾರ್ಯಾಚರಣೆ ಕೈ ಎಂದು ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣಾ ಒಕ್ಕೂಟದ ವತಿಯಿಂದ ವ್ಯಾಪಾರಿಗಳು ಪಪಂ ಮುಖ್ಯಾಧಿಕಾರಿ ಜಸ್‌ಪಾಲ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದಸರು.

ರಾಯಚೂರು ಲಿಂಗಸೂಗೂರು ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳ ಬದಿಯಲ್ಲಿ ಮೆಕಾನಿಕ್‌ ಗ್ಯಾರೇಜ್, ಹಣ್ಣು, ಚಹಾ, ಹೂವಿನ ಅಂಗಡಿ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ವ್ಯಾಪಾರ ಮಾಡುತ್ತಾ ಬಂದಿದ್ದು ಸ್ಥಳೀಯ ಆಡಳಿತಕ್ಕೂ ಸಹಕರಿಸುತ್ತಿದ್ದಾರೆ. ರಸ್ತೆ ತೆರವು ಕಾರ್ಯಾಚರಣೆ ಮೂಲಕ ಏಕಾ ಏಕಿ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದರು.

ಹೋರಾಟದ ಎಚ್ಚರಿಕೆ: ಕಾನೂನುಬದ್ಧ ವ್ಯಾಪಾರ ವಲಯಗಳನ್ನು ಗುರುತಿಸಿ, ವ್ಯಾಪಾರಿಗಳಿಗೆ ಸೂಕ್ತ ಪರ್ಯಾಯ ಸ್ಥಳ ಕಲ್ಪಿಸಬೇಕು. ಸ್ಥಳೀಯ ಆಡಳಿತವು ವ್ಯಾಪಾರಿಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಸೂಕ್ತ ವ್ಯವಸ್ಥೆ ಮಾಡುವವರೆಗೆ ತೆರವು ಕಾರ್ಯಾಚರಣೆಯನ್ನು ತಡೆ ಹಿಡಿಯಬೇಕು. ಒಂದು ವೇಳೆ ಪರ್ಯಾಯ ವ್ಯವಸ್ಥೆ ಮಾಡದೆ ಒಕ್ಕಲೆಬ್ಬಿಸಿದರೆ ಕುಟುಂಬಗಳ ಜೀವನೋಪಾಯಕ್ಕೆ ಕುತ್ತು ಬರಲಿದ್ದು, ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಒಕ್ಕೂಟದ ಪದಾಧಿಕಾರಿಗಳು ಎಚ್ಚರಿಸಿದರು.

ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯಧ್ಯಕ್ಷ ಬಸವಲಿಂಗಪ್ಪ, ಸಂಘಟನೆ ಮುಖಂಡರಾದ ಮಹಿಬುಬ್ ಗಣದಿನ್ನಿ, ಚಾಂದ್ ಮೇಸ್ತ್ರಿ, ಎಂಡಿ ಮಹಿಬುಬ್ ಸಾಬ್, ಭೀಮ್ ಆರ್ಮಿ ಸಂಘದ ಅಧ್ಯಕ್ಷ ಅಜಪ್ಪ ಬುಳ್ಳಪುರು, ಹುಲುಗಪ್ಪ ಸೈದಾಪುರು, ರಸೂಲ್ ಸಾಬ್ ಅಂಜುಮನ್, ಅಕ್ಬರ್ ಮೇಸ್ತ್ರಿ, ಹಸೇನ್ ಸಾಬ್ ಗಿಡ್ಡಲ್ಲಿ, ಪ್ರಭುದಾದ ವೆಲ್ಡಿಂಗ, ಜಿಲಾನಿ ಸಾಬ್, ಸಯದ್ ಪಾಷ್ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಡಕೆ ತೋಟದ ಹಳ್ಳಕ್ಕೆ ನುಗ್ಗಿದ ಖಾಸಗಿ ಬಸ್
ಹತ್ತಿ ಬೆಳೆಗೆ ಮುಟುರು ರೋಗ ಗಿಡಹೇನು ಬಾಧೆ: ರೈತರ ಆತಂಕ