ಶಾಲೆಯಲ್ಲಿ ಗ್ರಂಥಮಾಲೆ ಸ್ಥಾಪಿಸಿದ ಹಳೆಯ ವಿದ್ಯಾರ್ಥಿ ಕುಂಬಾರ ಮಾಸ್ತರ್

KannadaprabhaNewsNetwork |  
Published : Aug 18, 2025, 12:01 AM IST
ತಳಕವಾಡದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಯ ಹಳೆಯ ವಿದ್ಯಾರ್ಥಿ ಶರಣು ಚಕ್ರಸಾಲಿ ಅವರು ಕುಂಬಾರ ಮಾಸ್ತರ್ ಗ್ರಂಥಮಾಲೆ ಸ್ಥಾಪಿಸಿ, ವಿದ್ಯಾರ್ಥಿಗಳಿಗೆ 100 ಮಕ್ಕಳ ಪುಸ್ತಕಗಳನ್ನು ಉಚಿತವಾಗಿ ನೀಡಿದರು. | Kannada Prabha

ಸಾರಾಂಶ

ಶತಮಾನೋತ್ಸವ ಕಂಡಿರುವ ಬಾದಾಮಿ ತಾಲೂಕಿನ ತಳಕವಾಡದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಯ ಹಳೆಯ ವಿದ್ಯಾರ್ಥಿ ಶರಣು ಚಕ್ರಸಾಲಿ ಅವರು ಕುಂಬಾರ ಮಾಸ್ತರ್ ಗ್ರಂಥಮಾಲೆ ಸ್ಥಾಪಿಸಿ, ವಿದ್ಯಾರ್ಥಿಗಳಿಗೆ 100 ಮಕ್ಕಳ ಪುಸ್ತಕಗಳನ್ನು ಉಚಿತವಾಗಿ ನೀಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಶತಮಾನೋತ್ಸವ ಕಂಡಿರುವ ಬಾದಾಮಿ ತಾಲೂಕಿನ ತಳಕವಾಡದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಯ ಹಳೆಯ ವಿದ್ಯಾರ್ಥಿ ಶರಣು ಚಕ್ರಸಾಲಿ ಅವರು ಕುಂಬಾರ ಮಾಸ್ತರ್ ಗ್ರಂಥಮಾಲೆ ಸ್ಥಾಪಿಸಿ, ವಿದ್ಯಾರ್ಥಿಗಳಿಗೆ 100 ಮಕ್ಕಳ ಪುಸ್ತಕಗಳನ್ನು ಉಚಿತವಾಗಿ ನೀಡಿದರು.

ವೃತ್ತಿಯಿಂದ ಪತ್ರಕರ್ತರಾಗಿರುವ ಶರಣು ಚಕ್ರಸಾಲಿ ಅವರು ಅವರ ಮುತ್ತಜ್ಜ ದಿ.ಅಡಿವೆಪ್ಪ ಹೊಳಿಯಪ್ಪ ಕುಂಬಾರ ಸ್ಮರಣಾರ್ಥವಾಗಿ ಗ್ರಂಥಮಾಲೆ ತೆರೆದಿದ್ದಾರೆ. 1912ರಲ್ಲಿ ಶಾಲೆ ಆರಂಭವಾಗಿದ್ದು, ಅಡಿವೆಪ್ಪ ಕುಂಬಾರ ಈ ಶಾಲೆಯ ಮೊದಲ ಶಿಕ್ಷಕ ಮತ್ತು ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

2024ರಲ್ಲಿ ನಡೆದ ಶಾಲೆಯ ಹೊಸ ಕಟ್ಟಡ ಉದ್ಘಾಟನೆ ಮತ್ತು ಶಾಲಾ ಶತಮಾನೋತ್ಸವ ಕಾರ್ಯಕ್ರದಲ್ಲಿ ಗ್ರಂಥಮಾಲೆ ಸ್ಥಾಪಿಸುವ ಆಶಯ ವ್ಯಕ್ತಪಡಿಸಿದ್ದ ಶರಣು ಅವರು ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಎಸ್‌ಡಿಎಂಸಿ ಸಿಬ್ಬಂದಿ ಮತ್ತು ಶಾಲಾ ಶಿಕ್ಷಕರ ಸಮ್ಮುಖದಲ್ಲಿ ಮಕ್ಕಳಿಗೆ ಪುಸ್ತಕ ಹಿರಿಯರಿಂದ ವಿತರಿಸಿದರು.

ರಾಜ್ಯದ ಶಿಕ್ಷಣ ತಜ್ಞರು, ಹಿರಿಯ ಸಾಹಿತಿಗಳನ್ನು ಹಾಗೂ ಮಕ್ಕಳ ಸಾಹಿತಿಗಳನ್ನು ಸಂಪರ್ಕಿಸಿ ಮಕ್ಕಳ ಜ್ಞಾನ ವಿಸ್ತರಣೆಗೆ ಅನುಕೂಲವಾಗುವ ಪಠ್ಯೇತರ ಪುಸ್ತಕಗಳನ್ನು ಲಿಸ್ಟ್‌ ಮಾಡಿ ಈ ವರ್ಷ 100 ಪುಸ್ತ ಕೊಡಿಸಿರುವೆ. ಶಾಲೆಯಲ್ಲಿ ಉತ್ತಮವಾದ ಗ್ರಂಥಾಲಯ ಇರಬೇಕು ಎಂಬುದು ನನ್ನ ಕನಸು. ಈ ನಿಟ್ಟಿನಲ್ಲಿ ಈ ಕೆಲಸ ಮಾಡಿರುವೆ. ಮಕ್ಕಳ ಸೃಜನಶೀಲತೆ ಹೆಚ್ಚಿಸುವಲ್ಲಿಯೂ ಈ ಪುಸ್ತಕಗಳು ನೆರವಾಗುತ್ತವೆ ಎನ್ನುತ್ತಾರೆ ಶರಣು ಚಕ್ರಸಾಲಿ.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ:

ಎಸ್‌ಡಿಎಂಸಿ ಅಧ್ಯಕ್ಷ ಯಂಕನಗೌಡ ತೆಗ್ಗಿನಮನಿ ಅವರು ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇಶಗೀತೆಯ ಹಾಡುಗಳಿಗೆ ಮಕ್ಕಳು ನೃತ್ಯ ಮಾಡಿದರು. ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಿ.ಎಚ್‌. ಹಿರ್ಲವರ ನಿರೂಪಿಸಿದರು. ಶಾಲೆಯ ಸಿಬ್ಬಂದಿ, ಅಂಗನವಾಡಿ ಸಿಬ್ಬಂದಿ ಹಾಗೂ ಗ್ರಾಮದ ಹಿರಿಯ ಕಿರಿಯರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌