ಮೂಡುಬಿದಿರೆ: ಜಾಗತಿಕವಾಗಿ ಮಾನವ ಸಂಪನ್ಮೂಲದ ಕೊರತೆ ಇದೆ. ಆದರೆ ಯುವ ರಾಷ್ಟ್ರವಾಗಿರುವ ಭಾರತದಲ್ಲಿ ಮೆಡಿಕಲ್ ಸಹಿತ ನರ್ಸಿಂಗ್ ಸೇವೆಯ ಬಗ್ಗೆ ಭರವಸೆ ಮತ್ತು ವಿಶ್ವಾಸ ಜಾಗತಿಕವಾಗಿ ಹೆಚ್ಚುತ್ತಿದೆ. ವೇಗದ ಆರ್ಥಿಕತೆ ಹೊಂದಿರುವ ದೇಶದ 140 ಕೋಟಿ ಜನಸಂಖ್ಯೆಯಲ್ಲಿ 64 ಕೋಟಿ ಯುವ ಜನತೆಯ ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರುಮಿಜಾರಿನ ಶ್ರೀಮತಿ ಶೋಭಾ ಮೋಹನ್ ಆಳ್ವ ಆವರಣದಲ್ಲಿನ ಶ್ರೀಮತಿ ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಲಕ ಮಿಜಾರಿನಲ್ಲಿ ಆರಂಭಗೊಂಡ ಆಳ್ವಾಸ್ ಮೆಡಿಕಲ್ ಕಾಲೇಜನ್ನು ದೀಪ ಪ್ರಜ್ವಲನದ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರಸ್ತುತ ಎರಡೂವರೆ ಲಕ್ಷ ಕೋಟಿ ರು. ಮೀಸಲಿಡಲಾಗಿದೆ. ವೈದ್ಯಕೀಯ ಕಾಲೇಜು ಸೇರಿದಂತೆ ಸ್ನಾತಕೋತ್ತರ ಪದವಿ ಹಾಗೂ ಯೂನಿವರ್ಸಿಟಿಗಳು ಹೆಚ್ಚುತ್ತಲೇ ಇವೆ. ವಿಶೇಷವಾಗಿ ಮೆಡಿಕಲ್ ಸೀಟುಗಳನ್ನು 51 ಸಾವಿರದಿಂದ 1.40 ಲಕ್ಷ ದಷ್ಟು ಏರಿಕೆ ಮಾಡಲಾಗಿದೆ. ಜಗತ್ತಿಗೆ ವೈದ್ಯಕೀಯ ಸೇವೆ ಭಾರತದಿಂದ ಲಭ್ಯವಾಗುವ ಬೆಳವಣಿಗೆಗಳು ನಡೆದಿವೆ ಎಂದ ಅವರು ಶೈಕ್ಷಣಿಕ ಒತ್ತಡದಿಂದ ಕಾಲೇಜುಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ವಿದ್ಯಾರ್ಥಿಗಳ ಪ್ರಕರಣಗಳ ಬಗ್ಗೆಯೂ ನಾವು ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.
ಆರ್ ಎಸ್.ಎಸ್. ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ ಮಾತನಾಡಿ ಸೃಜನಶೀಲ ಅನ್ವೇಷಣಾತ್ಮಕ ಮಾದರಿ ಶಿಕ್ಷಣ ನೀಡುವ ಮೂಲಕ ಡಾ, ಮೋಹನ ಆಳ್ವ ಮತ್ತು ಅವರ ಸಂಸ್ಥೆಗಳು ಮಾದರಿಯಾಗಿ ಮೂಡಿ ಬೆಳೆದಿವೆ ಎಂದರು.ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ ಎಲ್ಲರಿಗೂ ಕೈಗೆಟಕುವ ಗುಣಮಟ್ಟದ ಹೆಲ್ತ್ ಕೇರ್ ಪ್ರಧಾನಿ ಕನಸು. ವಿಶೇಷವಾಗಿ ಟಿಬಿ ಮುಕ್ತ ಭಾರತದ ಅಭಿಯಾನಕ್ಕೂ ನಾವು ಕೈ ಜೋಡಿಸಬೇಕಾಗಿದೆ. ದಕ ಜಿಲ್ಲೆಯನ್ನು ಮೆಡಿಕಲ್ ಹಬ್ ಆಗಿಸುವಲ್ಲಿ ಮೆಡಿಕಲ್ , ಸ್ಪಿರಿಚುವಲ್ ಹೀಲಿಂಗ್ ಕ್ಯಾಪಿಟಲ್ ಆಗಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ವೈದ್ಯಕೀಯ ಶಿಕ್ಷಣದ ಮಕ್ಕಳಲ್ಲೂ ಉತ್ತಮ ಕಲಾತ್ಮಕ , ಆಧ್ಯಾತ್ಮಿಕ ಮನಸ್ಸು , ಸೌಂದರ್ಯ ಪ್ರಜ್ಞೆಯ ಜೀವನೋಲ್ಲಾಸ ಮೂಡಿಸುವ ಕನಸು ನಮ್ಮದಾಗಿದೆ ಎಂದರು. ವೃತ್ತಿ ಮತ್ತು ಬದುಕಿನ ಭಾಗವಾಗಿದ್ದ ಕುಟುಂಬಿಕರು, ಬಂಧುಗಳು ಮತ್ತು ಉದ್ಯೋಗಿಗಳ ಸಹಕಾರವನ್ನು ಭಾವುಕರಾಗಿ ಸ್ಮರಿಸಿಕೊಂಡ ಅವರು ಎಲ್ಲರ ಸಹಕಾರದಿಂದ ಕನಸು ನನಸಾಗಿದೆ ಎಂದರು. ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ಸ್ಥಾಪಕ ಕುಲಪತಿ ಡಾ. ಎಸ್. ಕಾಂತಾ, ವಿಶ್ರಾಂತ ಕುಲಪತಿಗಳಾದ ಡಾ. ಎಸ್. ಚಂದ್ರಶೇಖರ್ ಶೆಟ್ಟಿ, ಡಾ. ಎಚ್.ಎಸ್. ಬಲ್ಲಾಳ್, ಕುಲಾಧಿಪತಿಗಳು, ಮಾಹೆ, ಡಾ. ರಮಾನಂದ ಶೆಟ್ಟಿ, ಡಾ. ಎಸ್. ಸಚ್ಚಿದಾನಂದ, ಡಾ. ಜಯಕರ್ ಶೆಟ್ಟಿ, ಮಂಗಳೂರು ವಿವಿಯ ಕುಲಪತಿ ಡಾ. ಪಿ.ಎಲ್. ಧರ್ಮ, ಡಿ. ಸುರೇಂದ್ರ ಕುಮಾರ್, ಧರ್ಮಸ್ಥಳ, ಡಿ. ಹರ್ಷೇಂದ್ರ ಕುಮಾರ್, ಧರ್ಮಸ್ಥಳ, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ, ಕುಲಾಧಿಪತಿಗಳು, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ, ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ , ಡಾ. ಅಬ್ದುಲ್ ಕುಂಞ್ಞಿ, ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಷನ್ಸ್, ನ ನಿರ್ದೇಶಕ ಫೌಸ್ಟಿನ್ ಲ್ಯೂಕಸ್ ಲೋಬೋ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಅಧ್ಯಕ್ಷ ಚಿದಾನಂದ ಗೌಡ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್, ಕರಾವಳಿ ಗ್ರೂಪ್ ಆಫ್ ಕಾಲೇಜಸ್ ನ ಅಧ್ಯಕ್ಷ ಎಸ್. ಗಣೇಶ್ ರಾವ್, ಫಸ್ಟ್ ನ್ಯೂರೋ ಹಾಸ್ಪಿಟಲ್ಸ್ ನಿರ್ದೇಶಕ ಡಾ. ರಾಜೇಶ್ ಶೆಟ್ಟಿ, ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ, ಕುಮಾರಸ್ವಾಮಿ ಮಿನರಲ್ಸ್ ಬಳ್ಳಾರಿ ಪಾಲುದಾರ ರವೀಂದ್ರನಾಥ ಆಳ್ವ, ಅದಾನಿ ಸಮೂಹ ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕರ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ, ರೆ. ಧರ್ಮಗುರುಗಳು, ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಫಾ. ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಡಾ. ಎಂ.ಎಸ್. ಆಳ್ವ, ಮುಂಬೈ, ರಾಮಚಂದ್ರ ಶೆಟ್ಟಿ, ಕೊಡ್ಡಣ್‌ಗುತ್ತು, ಶ್ರೀನಿವಾಸ ಆಳ್ವ, ಮಿಜಾರುಗುತ್ತು, ಉದ್ಯಮಿ ಕೆ. ಶ್ರೀಪತಿ ಭಟ್, ಕುಲದೀಪ ಎಂ., ಚೌಟರ ಅರಮನೆ, ಮೂಡುಬಿದಿರೆ, ಭಾರತ್ ಸೌಟ್ಸ್ ಮತ್ತು ಗೈಡ್ಸ್, ಕರ್ನಾಟಕರಾಜ್ಯ ಪ್ರಧಾನ ಆಯುಕ್ತ ಡಾ. ಪಿ.ಜಿ.ಆರ್. ಸಿಂಧ್ಯಾ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ತೇಜಸ್ವಿನಿ ಆಸ್ಪತ್ರೆಯ ಅಧ್ಯಕ್ಷ ಡಾ. ಶಾಂತಾರಾಮ್ ಶೆಟ್ಟಿ, , ಕೆ.ಎಂ.ಸಿಯ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಕೆ.ವಿ. ಆಚಾರ್ಯ, ಜಯಶ್ರೀ ಅಮರನಾಥ ಶೆಟ್ಟಿ, ಅಮರನಾಥ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆಡಾ. ಅಮರಶ್ರೀ, ರಾಗಾ ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಶಿವಶರಣ್ ಶೆಟ್ಟಿ, ಮಾಜಿ ಸೆನೆಟ್ ಸದಸ್ಯೆ . ವೈಶಾಲಿ ಶ್ರೀಜಿತ್, ಬಿಮಾಲ್ ಬಿಲ್ಡ್‌ಕಾನ್ ಪ್ರೈ.ಲಿ.ಸೆನೆಟ್ ನ ಪ್ರವೀಣ್ ಕುಮಾರ್, ಡಾ. ಶಂಕರ್ ನಾಯಕ್ ಚಾರಿಟೆಬಲ್ ಟ್ರಸ್ಟ್ ನ ಪಂಕಜಾ ಶಂಕರ ನಾಯಕ್, , ಮಂಜರಿ ಪ್ರವೀಣ್ ಸಲ್ದಾನ, ಎಂ.ಬಿ.ಪುರಾಣಿಕ್, ಡಾ.ಎಂ.ಎಸ್.ಆಳ್ವ , ಭಾರತ್ ಇನ್‌ಫ್ರಾಟೆಕ್ ಪ್ರೈ.ಮುಸ್ತಫಾ ಎಸ್.ಎಂ.,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಡಾ.ವಿನಯ್ ಆಳ್ವ ಗ್ರೀಷ್ಮಾ ವಿವೇಕ್ ಆಳ್ವ, ಡಾ. ಹನಾ ವಿನಯ್ ಆಳ್ವ , ಮತ್ತಿತರ ಗಣ್ಯರು ಇದ್ದರು.ಶೀಘ್ರ ಡೀಮ್ಡ್ ವಿ.ವಿ.ಯಾಗಿ ಆಳ್ವಾಸ್: ಜೋಶಿ ಭರವಸೆ