ಕನ್ನಡಪ್ರಭ ವಾರ್ತೆ ಸುರಪುರ
ನಗರದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಈ ಹಿಂದೆಯೂ ಇದೇ ತಂಡದಿಂದ ಮಾಜಿ ಸಚಿವರಾದ ರಾಜಾ ಮದನಗೋಪಾಲ ನಾಯಕ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು.
ಕ್ಲಬ್ ಅಧ್ಯಕ್ಷರಾದ ರಾಜಾ ಮುಕುಂದ ನಾಯಕ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಅಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮೋಹನ ಅಳ್ವಾ, ನಿವೃತ್ತ ಆಕಾಶವಾಣಿ ನಿರ್ದೇಶಕ ಸದಾನಂದ ಪೆರ್ಲ ಭಾಗವಹಿಸಲಿದ್ದಾರೆ.ಜ.29ರ ಸಂಜೆ ನಡೆಯುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕಲಾಸಕ್ತರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಕಲಾ ತಂಡವನ್ನು ಮೊದಲು ರುಕ್ಮಾಪುರದಲ್ಲಿ ನಿವೃತ್ತ ಎಸ್.ಪಿ. ಚಂದ್ರಕಾಂತ ಭಂಡಾರೆಯವರು ಸ್ವಾಗತಿಸಲಿದ್ದಾರೆ. ಸಂಜೆ ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಅಧ್ಯಕ್ಷರಾದ ಕಿಶೋರ್ ಚಂದ್ ಜೈನ್ ಅವರು ಕಲಾ ತಂಡದ ಆಹಾರ ಸಮಿತಿಯ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದರು.ಮುಖಂಡರಾದ ರಾಜಾ ರಂಗಪ್ಪ ನಾಯಕ ಪ್ಯಾಪ್ಲಿ, ಪ್ರಕಾಶ ಗುತ್ತೇದಾರ, ರಾಕೇಶ ಹಂಚಾಟೆ, ಕಿಶೋರ್ ಚಂದ್ ಜೈನ್, ಪಾರಪ್ಪ ಗುತ್ತೇದಾರ, ಎಸ್.ಎನ್. ಪಾಟೀಲ್ ಇತರರಿದ್ದರು.
-----27ವೈಡಿಆರ್7: ಯಾದಗಿರಿ ನಗರದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಯಿತು.