ಹೂವಿನಹಡಗಲಿ: ಪ್ರೌಢಶಾಲಾ ಸರ್ಕಾರಿ ಅನುದಾನಿತ ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆಂದು ವಿಧಾನಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಹೇಳಿದರು.
ಸಂಘಟನೆಯ ಪ್ರತಿನಿಧಿಗಳು ಹಾಗೂ ಸಹ ಶಿಕ್ಷಕರು ತಮಗಾಗುತ್ತಿರುವ ಮಾನಸಿಕ ಒತ್ತಡಗಳ ಕುರಿತು ಮಾಹಿತಿ ಹಂಚಿಕೊಂಡರು.
ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಆಯುಕ್ತರು ಹಾಗೂ ಶಿಕ್ಷಣ ಸಚಿವರ ಜತೆ, ಈ ಹಿಂದೆ ಕೂಡ ಚರ್ಚಿಸಿದ್ದೆ. ಮತ್ತೊಂದು ಬಾರಿ ಈ ಬಗ್ಗೆ ಗಮನ ಸೆಳೆಯಲಾಗುವುದು. ಜಿಲ್ಲಾ ಹಂತದ ಪದಾಧಿಕಾರಿಗಳ ಜತೆ ಆಯುಕ್ತರ ಸಭೆಯನ್ನು ಕೂಡ ನಿಗದಿ ಮಾಡುವ ಭರವಸೆ ನೀಡಿದರು.ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಶಿವಲಿಂಗಪ್ಪ, ಕೋಶಾಧ್ಯಕ್ಷ ಬಸಪ್ಪ ಕೆ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ವಿ.ಬಿ. ಜಗದೀಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಗಡ್ಡಿ ಶಿವಕುಮಾರ್, ಜಗದೀಶ್ ಜಿ., ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸೆಟ್ಟಿ ಪ್ರಕಾಶ, ಸಹ ಶಿಕ್ಷಕರ ಸಂಘದ ನಿರ್ದೇಶಕ ಎಚ್. ಕಾಂತೇಶ್, ಎಲ್. ಖಾದರಬಾಷಾ, ಉಪ ಪ್ರಾಂಶುಪಾಲ ರವೀಂದ್ರನಾಥ ಬಿ., ರಾಮಪ್ಪ ಕೋಟಿಹಾಳ, ಸುಂಕದ ಬಸವರಾಜ ಇತರರಿದ್ದರು.
ಇದೇ ಸಂದರ್ಭದಲ್ಲಿ ಎಸ್‌ಕೆಜಿಜಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರ ಗುಂಪು ಅಧ್ಯಯನ ವೀಕ್ಷಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಪ್ರೌಢಶಾಲೆಯ ಶಿಕ್ಷಕರು ಹಾಜರಿದ್ದರು.