ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಮುರಗೋಡ ರಸ್ತೆಯ ಬಸವ ನಗರದ ರಾಣಿ ಚನ್ನಮ್ಮ ಜ್ಞಾನ ವಿಕಾಸ ಕೇಂದ್ರದಲ್ಲಿ ಶನಿವಾರ ಜರುಗಿದ ಪೌಷ್ಟಿಕ ಆಹಾರ ಸಿರಿಧಾನ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯಯುತ ಜೀವನ ನಡೆಸಬೇಕಾದರೆ ಸಿರಿಧಾನ್ಯದ ಆಹಾರ ಸೇವಿಸಿ ಧೀರ್ಘಾಯುಶಿಗಳಾಗಿ ಬದುಕಲು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಕಿರಣ ಮೂಡಲಗಿ ಪೌಷ್ಟಿಕ ಆಹಾರದ ಉಪಯೋಗ, ಕ್ರಮಗಳ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಹಿಳೆಯರಿಗೆ ಉಪನ್ಯಾಸ ನೀಡಿದರು.ಕೇಂದ್ರದ ಅಧ್ಯಕ್ಷ್ಯೆ ಅಕ್ಕಮಹಾದೇವಿ ಕುಂಬಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಕೃಷಿ ಅಧಿಕಾರಿ ರುದ್ರಪ್ಪ ಕುಂಬಾರ, ವಲಯ ಮೇಲ್ವಚಾರಕ ರವಿಕುಮಾರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೈಲಾ ಜಕ್ಕನ್ನವರ, ಆಗಮಿಸಿದ್ದರು. ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಿರಿಧಾನ್ಯದ ಪೌಷ್ಟಿಕ ಆಹಾರ ತಯಾರಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಸೇವಾ ಪ್ರತಿನಿಧಿ ನಿರ್ಮಲ ಎಸ್ ಸ್ವಾಗತಿಸಿ, ನಿರೂಪಿಸಿದರು.