ಕಾರಟಗಿ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಿಕ್ಷಕ ಅಮರೇಶ ಮೈಲಾಪೂರ ಬಣ ಮೇಲುಗೈ ಸಾಧಿಸಿದೆ.
ಎರಡು ಗುಂಪುಗಳ ನಡುವೆ ತೀವ್ರ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು ೧೧೬ ಶಿಕ್ಷಕ ಮತದಾರರಲ್ಲಿ ೧೧೦ ಮತಗಳು ಚಲಾವಣೆಗೊಂಡಿದ್ದು, ೬ ಜನ ಮತದಾರರು ಮತದಾನಕ್ಕೆ ಗೈರಾಗಿದ್ದರು. ಚುನಾವಣೆಯಲ್ಲಿ ಅಮರೇಶ ಮೈಲಾಪೂರ ಇವರಿಗೆ ೫೮ ಮತ ಪ್ರತಿಸ್ಪರ್ಧಿ ಬಸವರಾಜ ರ‍್ಯಾವಳದಗೆ ಕೇವಲ ೪೯ ಮತ ಪಡೆದು ಪರಾಭವಗೊಂಡರು. ಅಮರೇಶ ಮೈಲಾಪೂರ ತಂಡದ ಶಂಕ್ರವ್ವ ಸಜ್ಜನ ೬೦ ಮತಗಳನ್ನು ಪಡೆದು ಎದುರಾಳಿ ಉಮಾಮಹೇಶ್ವರಿ ೪೯ ಮತ ಪಡೆದು ಪರಾಭವಗೊಂಡರು.
ಅಮರೇಶ ಮೈಲಾಪೂರ ತಂಡ ಎರಡು ಸ್ಥಾನಗಳಲ್ಲಿ ಜಯಗಳಿಸಿ ಅಭೂತ ಪೂರ್ವ ಸಾಧನೆ ಮಾಡಿದರೆ. ಎದುರಾಳಿ ಬಸವರಾಜ ರ‍್ಯಾವಳದ ತಂಡ ಎರಡು ಸ್ಥಾನಗಳಲ್ಲೂ ಪರಾಭವಗೊಂಡ ಮುಖಭಂಗ ಅನುಭವಿಸಿದೆ.ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ೨೦೨೬ ರಿಂದ ೨೦೩೧ರ ಅವಧಿಗೆ ಚುನಾವಣೆ ನಡೆಯಿತು. ಬೆಳಗ್ಗೆ ೮-೩೦ರಿಂದ ೪-೩೦ ವರಗೆ ಚುನಾವಣೆ ನಡೆಯಿತು. ಒಟ್ಟು ೧೧೬ ಪ್ರಾಥಮಿಕ ಶಾಲಾ ಶಿಕ್ಷಕ ಮತದಾರರು ಇದರಲ್ಲಿ ೧೧೦ ಶಿಕ್ಷಕರು ಮತ ಚಲಾಯಿಸಿದರು.
ಪರಾಜಿತ ತಂಡದ ಬಸವರಾಜ ರ‍್ಯಾವಳದ, ಚನ್ನಬಸಪ್ಪ ಒಕ್ಕಳದ, ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ವಿಠ್ಠಲ ಜೀರಗಾಳಿ, ಕಾಯದರ್ಶಿ ಬೆನಕಟ್ಟಿ ದ್ಯಾವಣ್ಣ ತಂಡಕ್ಕೆ ಶಿಕ್ಷಕರು ಸೋಲುಣಿಸಿದರು.