₹95 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಹಾಗೂ ಗಟ್ಟಿಬಸಣ್ಣ ಗುಡಿಯಿಂದ ಯೋಗ್ಯಿಕೊಳ್ಳ ಗುಡಿವರೆಗೆ ₹2.95 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ಥಿಕರಣ ಕಾಮಗಾರಿಗೆ ಶನಿವಾರ ಯುವ ನಾಯಕ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ನಗರದ ಬಸವೇಶ್ವರ ವೃತ್ತದಿಂದ ಹಿಲ್ ಗಾರ್ಡನ (ಅರಣ್ಯ ಇಲಾಖೆಯ ಸಸ್ಯೋಧ್ಯಾನದ)ವರೆಗೆ ₹95 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಹಾಗೂ ಗಟ್ಟಿಬಸಣ್ಣ ಗುಡಿಯಿಂದ ಯೋಗ್ಯಿಕೊಳ್ಳ ಗುಡಿವರೆಗೆ ₹2.95 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ಥಿಕರಣ ಕಾಮಗಾರಿಗೆ ಶನಿವಾರ ಯುವ ನಾಯಕ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು.ಈ ವೇಳೆ ಜಿಪಂ ಮಾಜಿ ಸದಸ್ಯರುಗಳಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೊಲೀಸ್‌ಗೌಡರ, ನಗರಸಭೆ ಮಾಜಿ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಮಾಜಿ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಸದಸ್ಯರುಗಳಾದ ಜ್ಯೋತಿಭಾ ಸುಭಂಜಿ, ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಶಿವಾನಂದ ಹತ್ತಿ, ಕುತ್ಬುದ್ದಿನ ಗೋಕಾಕ, ಅಬ್ದುಲವಹಾಬ ಜಮಾದಾರ, ವಿಜಯ ಜತ್ತಿ, ಹರೀಶ ಬೂದಿಹಾಳ, ಅಬ್ದುಲಸತ್ತಾರ ಶಭಾಶಖಾನ ಮುಖಂಡರುಗಳಾದ ಶಿವು ಪಾಟೀಲ್, ಅಶೋಕ ಗೋಣಿ, ಲಕ್ಕಪ್ಪ ತಹಶೀಲದಾರ, ಶ್ರೀರಂಗ ನಾಯ್ಕ, ಗುತ್ತಿಗೆದಾರರಾದ ರಾಜು ದರಗಶೆಟ್ಟಿ, ಬಿ.ಬಿ.ದಾಸನವರ, ಲೋಕೋಪಯೋಗಿ ಇಲಾಖೆಯ ಎಇಇ ಅನಿಲಕುಮಾರ ಶಿಂಗೆ ಹಾಗೂ ನಗರಸಭೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.