ನರಗುಂದ: ಮಲಪ್ರಭಾ ಬಲದಂಡೆ, ಎಡದಂಡೆ, ಬಾಳೆಕುಂದ್ರಿ ಕಾಲುವೆಗಳಗೆ 5ಟಿಎಂಸಿ ನೀರು ಪೂರೈಕೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಆಗ್ರಹಿಸಿದರು.
ಪ್ರಸಕ್ತ ವರ್ಷ ಮಲಪ್ರಭಾ ಜಲಾಶಯ ಭಾಗದಲ್ಲಿ ವಾಡಿಕೆ ಮಳೆ ಆಗದ್ದರಿಂದ ಜಲಾಶಯಕ್ಕೆ ನೀರಿನ ಸಂಗ್ರಹ ಸದ್ಯ 20 ಟಿಎಂಸಿ ನೀರು ಸಂಗ್ರಹವಿದೆ, ಹಾಗಾಗಿ ಈ ನೀರಿನಲ್ಲಿ 3ಟಿಎಂಸಿ ಜಲಚರಗಳಗೆ, 10 ಟಿಎಂಸಿ ನೀರು ಕುಡಿಯಲಿಕ್ಕೆ, 7 ಟಿಎಂಸಿ ನೀರನ್ನು ಒಂದು ತಿಂಗಳು ಕಾಲುವೆಗೆ ಪೂರೈಸಬೇಕು. ಒಂದ ವೇಳೆ ನ.12ರೊಳಗೆ ಈ ಕಾಲುವೆಗಳಗೆ ನೀರು ಪೂರೈಕೆ ಮಾಡದಿದ್ದರೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಜಲಾಶಯದ ಜಾಕವೆಲ್‌ಗೆ ಮುತ್ತಿಗೆ ಹಾಕಿ ಕಾಲುವೆಗೆ ನೀರು ಪೂರೈಕೆ ಮಾಡವವರಿಗೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನೀರು ಕಳ್ಳತನ ತಡೆಯಬೇಕು. ಮಲಪ್ರಭಾ ಜಲಾಶಯವನ್ನು ನರಗುಂದ, ನವಲಗುಂದ, ರೋಣ, ಬದಾಮಿ ಭಾಗದ ರೈತರ ಜಮೀನುಗಳಿಗೆ ನೀರು ನೀಡುವ ಉದ್ದೇಶದಿಂದ ನಿರ್ಮಿಸಲಾಗಿದೆ. ಆದರೆ ಈ ಜಲಾಶಯದ ಸುತ್ತ ಕೆಲವು ಪ್ರಭಾವಿ ರಾಜಕಾರಣಿಗಳು ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿ ಜಲಾಶಯದ ನೀರನ್ನು ಕಳ್ಳತನ ಮಾಡುತ್ತಿದ್ದಾರೆ. ಸರ್ಕಾರ ನೀರು ಕಳ್ಳತನವಾಗುವುದನ್ನು ತಡೆಯಲು ಮುಂದಾಗಬೇಕೆಂದು ಆಗ್ರಹಿಸಿದರು.ತಹಸೀಲ್ದಾರ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿ, ಬೆಳಗಾವಿ ವಲಯ ಆಯುಕ್ತರಗೆ ರವಾನೆ ಮಾಡಲಾಗುವದೆಂದು ಹೇಳಿದರು.