ಸರ್ವರಿಗೂ ಸಾಮಾಜಿಕ ನ್ಯಾಯ ನೀಡಿರುವ ಅಂಬೇಡ್ಕರ್‌: ತಹಸೀಲ್ದಾರ್‌ ಅಮೀತಕುಮಾರ್‌

KannadaprabhaNewsNetwork |  
Published : Apr 16, 2024, 01:03 AM IST
ಚಿತ್ರ 14ಬಿಡಿಆರ್51 | Kannada Prabha

ಸಾರಾಂಶ

ಕಮಲನಗರ ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ತಹಸೀಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್‌ ಅವರ 133ನೇ ಜಯಂತ್ಯುತ್ಸವದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅಮೀತಕುಮಾರ್‌ ಕುಲಕರ್ಣಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ಪ್ರತಿಯೊಬ್ಬರೂ ಜಾತಿ, ಭೇದ, ಶ್ರೀಮಂತ, ಬಡವ ಎನ್ನದೆ ಸಮಾನತೆಯಿಂದ ಬದುಕಲು ಅವಕಾಶ ಕಲ್ಪಿಸಿ ಸರ್ವ ಜನಾಂಗಕ್ಕೂ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಿರುವ ಮಹಾನ್‌ ವ್ಯಕ್ತಿ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ಎಂದು ತಹಸೀಲ್ದಾರ್‌ ಅಮೀತಕುಮಾರ್‌ ಕುಲಕರ್ಣಿ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ತಹಸೀಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್‌ ಅವರ 133ನೇ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಅವರು, ಡಾ. ಅಂಬೇಡ್ಕರ್‌ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಅವರು ಸಮಾನತೆ ಮತ್ತು ಪ್ರಗತಿಯ ಕನಸು ಕಂಡ ಮೇರು ನಾಯಕರಾಗಿದ್ದರು. ಅವರ ತತ್ವಾದರ್ಶಗಳು ಎಲ್ಲರ ಜೀವನಕ್ಕೆ ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಬೇಕು ಎಂದು ಹೋರಾಟ ಮಾಡಿದವರು ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ಅವರನ್ನು ಪ್ರಜಾಪ್ರಭುತ್ವ ಪಿತಾಮಹ ಎಂದು ಕರೆಯುತ್ತಾರೆ. ಇಂಥ ಮಹಾನ್‌ ನಾಯಕ ರಚಿಸಿದ ಸಂವಿಧಾನದಿಂದ ದೇಶ ನಡೆಯುತ್ತಿದೆ. ಡಾ. ಅಂಬೇಡ್ಕರ್‌ ಅವರ ಜೀವನ, ಅವರ ಬದುಕು ಪ್ರತಿಯೊಬ್ಬ ನಾಗರಿಕನಿಗೂ ಮಾದರಿಯಾಗಬೇಕು, ಆದರ್ಶವಾಗಬೇಕು ಎಂದು ಹೇಳಿದರು.

ಗ್ರೇಡ್-2 ತಹಸೀಲ್ದಾರ ರಮೇಶ ಪೇದ್ದೆ, ತಾ.ಪಂ ಇಒ ಶಿವಕುಮಾರ ಘಾಟೆ, ಕಂದಾಯ ನಿರೀಕ್ಷಕ ಪ್ರವೀಣ ಬಿರಾದಾರ, ಕಮಲನಗರ ಸಿಆರ್‌ಸಿ ನಾಗೇಶ ಸಂಗಮೆ, ಉಮಾಕಾಂತ ಮಹಾಜನ, ಗ್ರಾಮದ ನಾಗರೀಕರಾದ ಜ್ಞಾನೇಶ್ವರ ಹಿಪ್ಪಳಗಾಂವೆ, ಅಮೋಲ ಸೂರ್ಯವಂಶಿ, ಬುದ್ಧಬುಷನ, ಗುರುನಾಥ ಪಾಟೀಲ್, ಪ್ರವೀಣ ಸೋಮವಂಶಿ, ಅಮರ ವಾನಖೇಡೆ, ರೋಹಿತ ಗೋಖಲೆ, ಧನರಾಜ ಲಾಮತೂರೆ, ನಿಲೇಶ ಯಾದವರಾವ ಗಾಯಕವಾಡ ಹಾಗೂ ಅನೇಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ