ಅಂಬೇಡ್ಕರ್ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನೀಡಿದ್ದಾರೆ: ಎಂ.ಎನ್.ನಟರಾಜು

KannadaprabhaNewsNetwork |  
Published : Nov 28, 2024, 12:33 AM IST
ನೆಹರು ಯುವ ಕೇಂದ್ರ ದಕ್ಷಿಣ ಪ್ರಾಂತ್ಯದ ಮಾಜಿ ನಿರ್ದೇಶಕ ಎಂ.ಎನ್.ನಟರಾಜು  | Kannada Prabha

ಸಾರಾಂಶ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದಲ್ಲೇ ಅತಿ ಶ್ರೇಷ್ಠವಾದ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ನೆಹರು ಯುವ ಕೇಂದ್ರ ದಕ್ಷಿಣ ಪ್ರಾಂತ್ಯದ ಮಾಜಿ ನಿರ್ದೇಶಕ ಎಂ.ಎನ್.ನಟರಾಜು ಹೇಳಿದರು. ಚಾಮರಾನಗರದಲ್ಲಿ ಕನ್ನಡ ರಾಜ್ಯೋತ್ಸವದ 26ನೇ ದಿನದ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆ, ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಮಾತನಾಡಿದರು.

ಕನ್ನಡ ರಾಜ್ಯೋತ್ಸವದ 26ನೇ ದಿನದ ಕಾರ್ಯಕ್ರಮ । ಸಂವಿಧಾನ, ಚೆನ್ನಮ್ಮ ಕುರಿತು ಮಾತು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದಲ್ಲೇ ಅತಿ ಶ್ರೇಷ್ಠವಾದ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ನೆಹರು ಯುವ ಕೇಂದ್ರ ದಕ್ಷಿಣ ಪ್ರಾಂತ್ಯದ ಮಾಜಿ ನಿರ್ದೇಶಕ ಎಂ.ಎನ್.ನಟರಾಜು ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 26ನೇ ದಿನದ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆ, ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಮಾತನಾಡಿದರು.

ಸಂವಿಧಾನವನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯಗತ ಮಾಡಿದರೆ ಅದಕ್ಕಿಂತ ದೊಡ್ಡ ಗೌರವವನ್ನು ಡಾ.ಬಿ.ಆರ್.ಅಂಬೇಡ್ಕ‌ರ್‌ ಮತ್ತು ದೇಶಕ್ಕೆ ನೀಡಿದಂತಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮಹಾಚೇತನ. ಅಂಥವರು ನಮಗೆಲ್ಲ ಸ್ಫೂರ್ತಿಯಾಗಬೇಕಾಗಿದೆ ಎಂದು ಹೇಳಿದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾ 50 ದಿನಗಳ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಅಯೋಜಿಸಿರುವುದು ಬಹಳ ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಕನ್ನಡದ ಕಂಪ ಪಸರಿಸುವಲ್ಲಿ ಪೂರಕವಾಗಿವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗೈದಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಭಾರತದಲ್ಲಿ ಕ್ರಾಂತಿ ಮೂಲಕ ಬ್ರಿಟಿಷರಿಗೆ ಸೆಡ್ಡುಹೊಡೆದು ಸ್ತ್ರೀಶಕ್ತಿಯ ಪ್ರತೀಕವಾದ ಧ್ವನಿ ಎತ್ತಿದ ಕನ್ನಡದ ವೀರ ಮಹಿಳೆಯಾಗಿದ್ದು, ಇವರ ಇಡೀ ವಿಶ್ವದಲ್ಲಿ ಕನ್ನಡಿಗರಿಗೆ ಗೌರವ ತಂದು ಕೊಟ್ಟಿದ್ದಾರೆ ಎಂದರು.

ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪದ್ಮಪುರುಷೋತ್ತಮ್, ಎಲ್.ಸುರೇಶ್, ಶಾ.ಮುರಳಿ ಮಾತನಾಡಿದರು.

ಪಣ್ಯದಹುಂಡಿ ಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್, ಶಿವಲಿಂಗಮೂರ್ತಿ, ನಿಜಧ್ವನಿಗೋವಿಂದರಾಜು, ಡಾ.ಪರಮೇಶ್ವರಪ್ಪ, ಬಸವರಾಜುನಾಯಕ, ಲಿಂಗರಾಜು, ಓಂ ಶಾಂತಿ ಆರಾಧ್ಯ ನೆಹರು ಯುವ ಕೇಂದ್ರದ ಸಹನಾ, ಇತರರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ