ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಆಸ್ತಿಯಲ್ಲ ಇಡೀ ದೇಶದ ಆಸ್ತಿ: ಎಸ್.ದುರುಗೇಶ್

KannadaprabhaNewsNetwork |  
Published : Apr 19, 2026, 02:45 AM IST
 ಕೂಡ್ಲಿಗಿ ತಾಲೂಕಿನ ಬಯಲು ತುಂಬರಗುದ್ದಿ ಗ್ರಾಮದಲ್ಲಿ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಘಟಕದಿಂದ ಡಾ. ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅಂಬೇಡ್ಕರ್ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ  ಮಾಡುವ ಮೂಲಕ  ಅದ್ದೂರಿಯಾಗಿ ಆಚರಿಸಲಾಯಿತು | Kannada Prabha

ಸಾರಾಂಶ

ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಆಸ್ತಿಯಲ್ಲ ಇಡೀ ದೇಶದ ಆಸ್ತಿಯಾಗಿದೆ.

ಕೂಡ್ಲಿಗಿ: ತಾಲೂಕಿನ ಬಯಲು ತುಂಬರಗುದ್ದಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಘಟಕದಿಂದ ಡಾ.ಬಿ ಆರ್ ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಅಂಬೇಡ್ಕರ್ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಸಂಚಾಲಕ ಎಸ್. ದುರುಗೇಶ್, ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಆಸ್ತಿಯಲ್ಲ ಇಡೀ ದೇಶದ ಆಸ್ತಿಯಾಗಿದೆ. ತಳಸಮುದಾಯಗಳು, ನಿಕೃಷ್ಠ ಸಮುದಾಯಗಳ ಪರವಾಗಿ ಜೀವನಪೂರ್ತಿ ಹೋರಾಟ ಮಾಡಿದವರಾಗಿದ್ದು, ಧ್ವನಿ ಇಲ್ಲದ ಜನತೆಗೆ ಧ್ವನಿ ನೀಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ಎಲ್ಲ ಸಮುದಾಯಗಳ ಮಹಿಳೆಯರು ಮುಖ್ಯವಾಹಿನಿಗೆ ಬರಲು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕಾರಣವಾಗಿದ್ದು ಇಂದು ಅಂಬೇಡ್ಕರ್ ಅವರ ವಿಚಾರಧಾರೆಗಳು ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಸದ ಸರ್ವತೋಮುಖ ಏಳ್ಗೆಗೆ ಕೈ ಜೋಡಿಸಬೇಕಿದೆ ಎಂದರು.

ವಿಜಯನಗರ ಜಿಲ್ಲಾ ಸಂಘಟನಾ ಸಂಚಾಲಕ ಬಯಲುತುಂಬರಗುದ್ದಿ ದುರುಗೇಶ್, ಕೂಡ್ಲಿಗಿ ತಾಲೂಕು ಸಂಚಾಲಕ ಬಡೇಲಡಕು ದುರುಗೇಶ್, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಟಿ.ಗಂಗಾಧರ್ ಹೊಸಹಳ್ಳಿ, ಡಿ.ಎಂ. ಈಶ್ವರಪ್ಪ, ಲೋಕಿಕೆರೆ ಕರಿಬಸಪ್ಪ, ತಾಲೂಕು ಸಂಘಟನಾ ಸಂಚಾಲಕರಾದ ಚೌಡಾಪುರ ಬಸವರಾಜ್, ಕಾನಾಮಡಗು ಫಕ್ಕೀರಪ್ಪ, ಮಾಳೆಹಳ್ಳಿ ಮಂಜಪ್ಪ, ಹೊಸಹಳ್ಳಿ ಕರಿಬಸಪ್ಪ, ಐಗಳ ಮಲ್ಲಾಪುರ ಜಿತೇಂದ್ರ ರಮೇಶ್, ಕೂಡ್ಲಿಗಿ ಎಚ್.ಅಜಯಕುಮಾರ್, ತಾಲೂಕು ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕುಮುತಿ ಯಲ್ಲಪ್ಪ, ಹುಡೇಂ ಮಂಜುನಾಥ, ತಿಪ್ಫೇಹಳ್ಳಿ ರುದ್ರಮುನಿ, ಕುರಿಹಟ್ಟಿ ಮಹಾಂತೇಶ್, ಸಕಲಾಪುರದಹಟ್ಟಿ ಯಲ್ಲಪ್ಪ, ಮಹೇಶ್, ಚೌಡಪ್ಪ, ಮಾಳೆಹಳ್ಳಿ ಅಜ್ಜಯ್ಯ, ಶಿವಣ್ಣ, ಕೆ.ಜಗದೀಶ್, ಎಚ್.ಎಂ. ವೀರಭದ್ರಯ್ಯ, ಬಿ.ಕೆ. ವೀರಭದ್ರಪ್ಪ, ಕೋಡಿಹಳ್ಳಿ ಸಿದ್ದೇಶ್, ಪೋಟೋ ಅಜಯಕುಮಾರ್, ಎಚ್.ಎಂ. ಮಲ್ಲಿಕಾರ್ಜುನಯ್ಯ, ಮೂಲೆಮನೆ ಬಸವರಾಜ್, ಮೂಲೆಮನೆ ನಾಗಭೂಷಣ, ವೀರೇಶ್, ಪಿ.ವಿ. ವೀರಭದ್ರಪ್ಪ, ರಂಗನಹಳ್ಳಿ ನಾಗರಾಜ್, ಡಿ.ಟಿ. ಮಹಾಂತೇಶ್, ಮುಖಂಡರಾದ ಈಶ್ವರಪ್ಪ, ಸಣ್ಣ ಮರಿಯಪ್ಪ, ದೊಡ್ಡ ಮರಿಯಪ್ಪ, ಹನುಮಂತಪ್ಪ, ಎಚ್.ದುರ್ಗಪ್ಪ, ಕುಂಟು ದುರ್ಗಪ್ಪ, ಯು.ದುರುಗೇಶ್, ಊಟೆಪ್ಪ, ಗ್ರಾಮ ಘಟಕದ ನೂತನ ಸಂಚಾಲಕರಾದ ಪರಶುರಾಮ್, ಡಿ.ಚಂದ್ರು, ಸುರೇಶ್, ತಿಪ್ಪೇಶ್, ಸುದೀಪ್, ಎಚ್.ದುರ್ಗಪ್ಪ, ಡಿ.ಎಸ್. ಬಸವರಾಜ್, ದೇವರಾಜ್, ಉದಯ್, ನಾಗರಾಜ್, ದರ್ಶನ್, ತಿಪ್ಪೇಶಿ, ಶಿವು, ಗಿರೀಶ್, ವೀರೇಶ್, ಶಂಕ್ರಣ್ಣ, ಅಂಜಿನಪ್ಪ ಇದ್ದರು.

ಕೂಡ್ಲಿಗಿ ತಾಲೂಕಿನ ಬಯಲು ತುಂಬರಗುದ್ದಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಬಿಷಪ್‌ ಪೀಠಾರೋಹಣ: ದೇಶದ 35 ಬಿಷಪರು, 250 ಧರ್ಮಗುರುಗಳು ಭಾಗಿ
ಕೊಡವೂರು ದೇವಳ: ಮೇ 14ರಿಂದ ಮಹಾ ರುದ್ರಯಾಗ