ಅಂಬೇಡ್ಕರ್‌, ಜಗಜೀವನ್‌ ಎಲ್ಲರಿಗೂ ಸ್ಫೂರ್ತಿ: ಶಾಸಕ ಟಿ.ರಘುಮೂರ್ತಿ

KannadaprabhaNewsNetwork | Published : Apr 15, 2025 12:46 AM

ಸಾರಾಂಶ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್‌ ರಾಮ್ ತಮ್ಮದೇಯಾದ ವಿಶೇಷ ಸಾಧನೆ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಇಬ್ಬರೂ ಮಹಾನಾಯಕರನ್ನು ನಾವು ಕಲಿಯುಗದ ಸೂರ್ಯವೆಂದು ಕರೆಯಬಹುದಾಗಿದೆ.

ಅಂಬೇಡ್ಕರ್‌, ಜಗಜೀವನ್‌ ರಾಮ್‌ ಜನ್ಮದಿನ । ಪ್ರಬಂಧ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್‌ ರಾಮ್ ತಮ್ಮದೇಯಾದ ವಿಶೇಷ ಸಾಧನೆ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಇಬ್ಬರೂ ಮಹಾನಾಯಕರನ್ನು ನಾವು ಕಲಿಯುಗದ ಸೂರ್ಯವೆಂದು ಕರೆಯಬಹುದಾಗಿದೆ. ಅವರು ಮಾಡಿದ ಸಾಧನೆ ಇತಿಹಾಸದಲ್ಲಿ ಅಚ್ಚಳಿಯದೆ ಸದಾಕಾಲ ಉಳಿಯಲಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಜಂಟಿಯಾಗಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ೧೩೪ನೇ, ಬಾಬು ಜಗಜೀವನ್‌ ರಾಮ್‌ ೧೧೮ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶೋಷಿತ, ದೌರ್ಜನ್ಯಕ್ಕೀಡಾದ, ಅವಮಾನಕ್ಕೊಳಗಾದ ಜನಾಂಗಗಳಿಗೆ ಕಾಯಕಲ್ಪವನ್ನು ನೀಡಿದ ಕೀರ್ತಿ ಈ ಇಬ್ಬರೂ ಮಹಾನಾಯಕರದ್ದು. ಪ್ರಸ್ತುತ ರಾಜಕೀಯದಲ್ಲಿ ಇಬ್ಬರೂ ಮಹಾನ್‌ನಾಯಕರ ಆದರ್ಶಗಳನ್ನು ಅಳವಡಿಸಿಕೊಂಡರೆ ಮಾತ್ರ ರಾಜಕೀಯ ಕ್ಷೇತ್ರದ ಮೌಲ್ಯ ಹೆಚ್ಚುತ್ತದೆ. ಎಂದಿಗೂ ಅಧಿಕಾರಕ್ಕಾಗಿ ಹಾತುವರೆಯದೆ ಈ ಮಹಾನ್‌ನಾಯಕರ ಹೋರಾಟದ ಬದುಕು ಎಲ್ಲರಿಗೂ ಸ್ಫೂರ್ತಿ ಎಂದರು.

ಇಬ್ಬರೂ ಮಹಾನ್‌ನಾಯಕ ಸಾಧನೆ ಕುರಿತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ಜಡೇಕುಂಟೆ ಮಂಜುನಾಥ, ಜಿ.ಟಿ.ವೀರಭದ್ರಸ್ವಾಮಿ, ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನಕುಮಾರ್, ಕೆ.ವೀರಭದ್ರಸ್ವಾಮಿ ಮುಂತಾದವರು ಮಾತನಾಡಿದರು.

ತಹಸೀಲ್ಧಾರ್ ರೇಹಾನ್‌ಪಾಷ ಮಾತನಾಡಿ, ಶೋಷಿತ ಸಮುದಾಯದ ಆಶಾಕಿರಣವಾಗಿ ಇಬ್ಬರೂ ಮಹಾನ್‌ನಾಯಕರು ಹೊರಹೊಮ್ಮಿದ್ಧಾರೆ. ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ಜಾತಿಪದ್ಧತಿ, ಅಸಮಾನತೆ, ದೌರ್ಜನ್ಯವನ್ನು ತೊಡೆದು ಹಾಕಲು ಶ್ರಮಿಸಿದ ಮಹಾನ್‌ ನಾಯಕ ಎಂದರು.

ಆಧುನಿಕ ಭಾರತ ನಿರ್ಮಾಣದಲ್ಲಿ ಅಂಬೇಡ್ಕರ್ ಪಾತ್ರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ೬ ವಿದ್ಯಾರ್ಥಿಗಳಿಗೆ ದಲಿತ ಸಂಘಟನೆಗಳ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ದಲಿತ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹಾನೀಯರನ್ನು ಶಾಸಕರು ಗೌರವಿಸಿದರು.

ಸಾಮಾಜಿಕ ಕ್ಷೇತ್ರದಲ್ಲಿ ವಕೀಲ ಬಿ.ಮಲ್ಲಿಕಾರ್ಜುನ್, ಡಿ.ದ್ಯಾಮಯ್ಯ, ನಿಜಲಿಂಗಪ್ಪ, ಪಿ.ರೇಣುಕಮ್ಮ, ಎಚ್.ಎಸ್.ಸೈಯದ್, ಆರ್.ಟಿ.ಸ್ವಾಮಿ, ವೈ.ಟಿ.ಸ್ವಾಮಿ, ಭೀಮನಕೆರೆ ಶಿವಮೂರ್ತಿ, ಆರ್.ಡಿ.ಮಂಜುನಾಥ, ವೈ.ಕಾಂತರಾಜ್, ದ್ಯಾವರನಹಳ್ಳಿತಿಪ್ಪೇಸ್ವಾಮಿ, ಸುಶೀಲಮ್ಮ, ಸಿ.ಜೆ.ಜಯಕುಮಾರ್, ಚನ್ನಿಗರಾಯ, ಸಾಹಿತ್ಯ ಕ್ಷೇತ್ರದಲ್ಲಿ ಜಡೇಕುಂಟೆ ಮಂಜುನಾಥ, ಮೋದೂರುತೇಜ, ಕರ‍್ಲಕುಂಟೆ ತಿಪ್ಪೇಸ್ವಾಮಿಯವರನ್ನು ಅಭಿನಂದಿಸಲಾಯಿತು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಟಿ.ವೀರೇಶ್, ಗ್ಯಾರಂಟಿ ಸಮಿತಿ ತಾಲೂಕು ಅದ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ಒ.ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಕೆಪಿಡಿ ಸದಸ್ಯರಾದ ಎಂ.ರಮೇಶ್, ನೇತ್ರಾವತಿ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ರಮೇಶ್‌ಗೌಡ, ಜಯಲಕ್ಷಿö್ಮ,ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಸಮರ್ಥರಾಯ, ಟಿ.ವಿಜಯಕುಮಾರ್, ನಾಮಿನಿ ಸದಸ್ಯರಾದ ನೇತಾಜಿ ಪ್ರಸನ್ನ, ವೀರಭದ್ರಪ್ಪ, ನಟರಾಜ್, ಅನ್ವರ್‌ಮಾಸ್ಟರ್, ಬಡಗಿಪಾಪಣ್ಣ, ಇಒ ಎಚ್.ಶಶಿಧರ, ಜಗರೆಡ್ಡಿ, ಕೆ.ಎಸ್.ಸುರೇಶ್, ಟಿ.ಬಿ.ರಾಜಣ್ಣ, ಜೆ.ದೇವಲಾನಾಯ್ಕ, ವಿರೂಪಾಕ್ಷಪ್ಪ, ರೇವಣ್ಣ, ಜೆ.ಅಶೋಕ್, ಹರಿಪ್ರಸಾದ, ಶಿವರಾಜ್, ಶಿವಪ್ರಸಾದ್, ರಮೇಶ್ ಮುಂತಾದವರು ಭಾಗವಹಿಸಿದ್ದರು.

Share this article