ಅಂಬೇಡ್ಕರ್‌ ಜಯಂತಿ ಯಶಸ್ವಿ: ಎಆರ್‌ಕೆಗೆ ರೇಖಾ ಅಭಿನಂದನೆ

KannadaprabhaNewsNetwork |  
Published : Apr 17, 2025, 12:04 AM IST
16ಸಿಎಚ್‌ಎನ್‌56ಕೊಳ್ಳೇಗಾಲದ ನಗರಸಭೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷೆ ರೇಖಾ ರಮೇಶ್ ಮಾತನಾಡಿದರು. | Kannada Prabha

ಸಾರಾಂಶ

ಕೊಳ್ಳೇಗಾಲದ ನಗರಸಭೆಯಲ್ಲಿ ಅಧ್ಯಕ್ಷೆ ರೇಖಾ ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೊಳ್ಳೇಗಾಲ: ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿ ಯಶಸ್ವಿಯಾಗಲು ಸಹಕರಿಸಿದ ಶಾಸಕ ಎ ಆರ್ ಕೃಷ್ಣಮೂರ್ತಿ ಅವರಿಗೆ ನಾನು ಅಭಿನಂದನೆ ಸಲ್ಲಿಸುವ ಜೊತೆಗೆ ಅವರಿಗೆ ಉನ್ನತ ಅಧಿಕಾರ ಲಭಿಸಲು, ಕ್ಷೇತ್ರದ ಅಭಿವೃದ್ಧಿಗೆ ಇನ್ನು ಹೆಚ್ಚಿನ ರೀತಿ ಸ್ಪಂದಿಸಲಿ ಎಂದು ನಗರಸಭಾಧ್ಯಕ್ಷೆ ರೇಖಾ ರಮೇಶ್ ಹೇಳಿದರು.

ನಗರಸಭೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಜಯಂತಿ ಯಶಸ್ವಿಗೆ ಶಾಸಕರು ಹೆಚ್ಚಿನ ರೀತಿ ಸ್ಪಂದಿಸಿದ್ದಾರೆ, ಅದೇ ರೀತಿಯಲ್ಲಿ ತಾಲೂಕಿನ ಎಲ್ಲಾ ಅಧಿಕಾರಿ ವರ್ಗ, ಸಮಾಜದ ಬಂಧುಗಳು ಸಹಕರಿಸಿದ ಹಿನ್ನೆಲೆ ಅಂದಿನ ಮೆರವಣಿಗೆ ಅದ್ಧೂರಿಯಾಗಿ ನಡೆಯಲು ಸಹಕಾರವಾಯಿತು ಎಂದರು. ಮೆರವಣಿಗೆಯಲ್ಲಿ ಕೊಳ್ಳೇಗಾಲ ಮಾತ್ರವಲ್ಲ ವಿವಿಧ ಭಾಗಗಳಿಂದ, ಗ್ರಾಮಗಳಿಂದಲೂ ಹೆಚ್ಚಿನ ಜನಸ್ತೋಮ ಪಾಲ್ಗೊಂಡಿದ್ದರು. ಅಲ್ಲದೆ ವಿವಿಧ ಕೋಮಿನ ಜನಾಂಗ ಸಹ ಪಾಲ್ಗೊಂಡರು. ಸಾವಿರಾರು ಮಂದಿ ಪಾಲ್ಗೊಂಡ ಮೆರವಣಿಗೆ ಉತ್ತಮ ರೀತಿಯಲ್ಲಿ ಯಶಸ್ವಿಯಾಯಿತು ಎಂದರು.

ಈ ಯಶಸ್ವಿಗಾಗಿ ಸ್ಪಂದಿಸಿದ ಎಲ್ಲರನ್ನು ನಾನು ಅಭಿನಂದಿಸುವೆ, ಮುಂದಿನ ದಿನಗಳಲ್ಲೂ ಎಲ್ಲರೂ ಇದೆ ರೀತಿ ಜಯಂತಿಗೆ ಯಶಸ್ವಿಗೆ ಸಹಕರಿಸಬೇಕು ಎಂದರು. ಪಟ್ಟಣದ ಭೀಮನಗರದಲ್ಲಿ ಕಳೆದ 4 ದಿನಗಳಿಂದ ಅಂಬೇಡ್ಕರ್ ಜಯಂತಿ ಸಾಂಘವಾಗಿ ನಡೆದಿದೆ. ಆರೋಗ್ಯ ಶಿಬಿರ, ರಕ್ತದಾನ, ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಅಬಿನಂದನೆ, ನಾಟಕ ಪ್ರದರ್ಶನಗಳಂತಹ ಅನೇಕ ಕಾರ್ಯಕ್ರಮಗಳು ಎಲ್ಲರನ್ನೂ ರಂಜಿಸಿದ್ದು ಈ ಯಶಸ್ವಿ ಕಾರ್ಯಕ್ರಮ ರೂಪಿಸಿದ ಭೀಮನಗರದ ಯಜಮಾನರು ಹಾಗೂ ಮುಖಂಡರನ್ನು ಅಭಿನಂದಿಸುವೆ ಎಂದರು.ಈ ವೇಳೆ ಮಾಜಿ ಅಧ್ಯಕ್ಷ ರಮೇಶ್, ಸದಸ್ಯರಾದ ಮಂಜುನಾಥ್, ಅನ್ಸರ್ ಪಾಶಾ, ಸ್ವಾಮಿ ನಂಜಪ್ಪ, ಶಿವಮಲ್ಲು, ಜಿ ಎಂ ಸುರೇಶ್, ಧರಣೇಶ್, ನಾಗೇಂದ್ರ ಶಂಕನಪುರ ಪ್ರಕಾಶ್, ಯುವ ಮುಖಂಡ ಶಂಕನಪುರ ಜಗದೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''