ಡಾ. ಅಂಬೇಡ್ಕರ್‌ ಪ್ರಪಂಚದ ಮಹಾನ್ ಜ್ಞಾನಿ: ಜಿ.ಕೆ. ಹರೀಶ್

KannadaprabhaNewsNetwork |  
Published : Apr 16, 2024, 01:01 AM IST
63 | Kannada Prabha

ಸಾರಾಂಶ

ಡಾ. ಅಂಬೇಡ್ಕರ್ ಸಂವಿಧಾನ ರಚನಾಕಾರರು ಮಾತ್ರವಲ್ಲದೆ 64 ಪದವಿಯೊಂದಿಗೆ 9 ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದು ಶಿಕ್ಷಣ, ಆರ್ಥಿ, ಇತಿಹಾಸ, ರಾಜ್ಯಶಾಸ್ತ್ರ ಮತ್ತು ಕಾನೂನು ತಜ್ಞರಾಗಿ 50 ಸಾವಿರ ಪುಸ್ತಕಗಳನ್ನು ಓದುವ ಮೂಲಕ ಪುಸ್ತಕ ಪ್ರೇಮಿಯಾಗಿದ್ದರಿಂದ ಅವರ ಪಾಂಡಿತ್ಯಕ್ಕೆ ಮೆಚ್ಚಿದ ಲಂಡನ್ ವಿಶ್ವ ವಿದ್ಯಾನಿಲಯ ಡಾಕ್ಟರ್ ಆಫ್ ಆಲ್ ಸೈನ್ಸ್ ಪದವಿ ನೀಡುವ ಮೂಲಕ ಅವರನ್ನು ಗೌರವಿಸಿತು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಡಾ.ಬಿ.ಆರ್. ಅಂಬೇಡ್ಕರ್ ಅವರು ಡಾಕ್ಟರ್ ಆಫ್ ಆಲ್ ಸೈನ್ಸ್ ಪದವಿ ಗಳಿಸಿದ ಜಗತ್ತಿನ ಏಕೈಕ ವ್ಯಕ್ತಿಯಾಗಿದ್ದು, ಅವರು ಪ್ರಪಂಚದ ಮಹಾನ್ ಜ್ಞಾನಿ ಮತ್ತು ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದು ತಾಪಂ ಇಒ ಜಿ.ಕೆ. ಹರೀಶ್ ಹೇಳಿದರು.

ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಆವರಣದಲ್ಲಿ ತಾಲೂಕು ಆಡಳಿತ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಅಂಬೇಡ್ಕರ್ ಸಂವಿಧಾನ ರಚನಾಕಾರರು ಮಾತ್ರವಲ್ಲದೆ 64 ಪದವಿಯೊಂದಿಗೆ 9 ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದು ಶಿಕ್ಷಣ, ಆರ್ಥಿ, ಇತಿಹಾಸ, ರಾಜ್ಯಶಾಸ್ತ್ರ ಮತ್ತು ಕಾನೂನು ತಜ್ಞರಾಗಿ 50 ಸಾವಿರ ಪುಸ್ತಕಗಳನ್ನು ಓದುವ ಮೂಲಕ ಪುಸ್ತಕ ಪ್ರೇಮಿಯಾಗಿದ್ದರಿಂದ ಅವರ ಪಾಂಡಿತ್ಯಕ್ಕೆ ಮೆಚ್ಚಿದ ಲಂಡನ್ ವಿಶ್ವ ವಿದ್ಯಾನಿಲಯ ಡಾಕ್ಟರ್ ಆಫ್ ಆಲ್ ಸೈನ್ಸ್ ಪದವಿ ನೀಡುವ ಮೂಲಕ ಅವರನ್ನು ಗೌರವಿಸಿತು ಎಂದು ತಿಳಿಸಿದರು.

ಉಪಹಾರ ವಿತರಣೆ- ಡಾ.ಬಿ.ಆರ್. ಅಂಬೇಡ್ಕರ್ ರವರ 133ನೇ ಜಯಂತಿ ಆಚರಣೆ ಅಂಗವಾಗಿ ಬಾಬಾ ಸಾಹೇಬರ ಪುತ್ಥಳಿ ಬಳಿ ತಾಲೂಕು ಭೀಮ್ ಆರ್ಮಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಂದಿಗೆ ಲಘು ಉಪಹಾರ ವಿತರಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜ್, ದಲಿತ ಮುಖಂಡರಾದ ರಾಜಯ್ಯ, ಎಂ. ಲೋಕೇಶ್, ನಾಗರಾಜು, ಸ್ವಾಮಿ, ಶಾಂತಿರಾಜ್ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಅರ್ಜುನಹಳ್ಳಿ ರಾಜಯ್ಯ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್. ಸ್ವಾಮಿ, ಪುರಸಭಾ ಸದ್ಯಸರಾದ ಪ್ರಕಾಶ್, ಶಂಕರ್, ಶಂಕರ್ ಸ್ವಾಮಿ, ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಟಿಎಸ್ಡಬ್ಲ್ಯೂ ಎಸ್.ಎಂ. ಅಶೋಕ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಹೇಮಂತ್, ಬಿಇಒ ಆರ್. ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಎಸ್ಸಿ ಘಟಕದ ಅಧ್ಯಕ್ಷ ನಂದೀಶ್, ಎಂಎಸ್ಎಸ್ ತಾಲೂಕು ಅಧ್ಯಕ್ಷ ರವಿಕುಮಾರ್, ಭೀಮ್ ಆರ್ಮಿ ಅಧ್ಯಕ್ಷ ಗುರುಸ್ವಾಮಿ, ಮುಖಂಡರಾದ ಮಂಜುರಾಜ್, ರಾಜಯ್ಯ, ಕಾಂತರಾಜ್, ಚೆಲುವರಾಜ್, ಎಂ.ಎಸ್. ನಂಜುಂಡಸ್ವಾಮಿ, ಮಹೇಶ್, ರಾಜೇಶ್, ರವಿಪೂಜಾರಿ, ಕುಮಾರ್, ಸಿದ್ದಾಪುರ ರಮೇಶ್, ಡಾ.ಕೃಷ್ಣ, ರಾಜಶೇಖರ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ