ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಕ್ಕೆ ಕಾಂಗ್ರೆಸ್ಸಿನ ಕೊಡುಗೆ ಅಪಾರವಾಗಿದೆ. ಜೊತೆಗೆ ಅಂಬೇಡ್ಕರ್ ಅವರ ಕೊಡುಗೆಯೂ ಸಾಕಷ್ಟು ಇದೆ. ಅಂಬೇಡ್ಕರ್ ಚುನಾವಣೆಲ್ಲಿ ಸ್ಪರ್ಧಿಸಿದ್ದ ವೇಳೆ ಅವರನ್ನು ಕಾಂಗ್ರೆಸ್ಸಿಗರೇ ಸೋಲಿಸಿದರು ಎಂದು ಪದೇ ಪದೇ ಬಿಜೆಪಿಗರು ಹೇಳುತ್ತಲೇ ಇದ್ದಾರೆ. ಆದರೆ, ಅದರ ಮೂಲ ಹುಡುಕಿದಾಗ ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಯಿ ವರ್ಗವೇ ಬಾಬಾ ಸಾಹೇಬರನ್ನು ಸೋಲಿಸಿದೆ ಎಂದು ಸ್ಪಷ್ಟಪಡಿಸಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ಹೋರಾಟಗಾರರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೆಸರಿನಲ್ಲೇ ಚಳವಳಿ ಮಾಡಿದ್ದರು. ಸ್ವಾತಂತ್ರ್ಯಾ ನಂತರದ ಕಾಲಘಟ್ಟದಲ್ಲಿ ಎದುರಾದ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬೇಡ್ಕರ್‌ರನ್ನು ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಹಿ ವರ್ಗದವರು ಸೋಲಿಸಿದರು. ನಂತರ ಕಾಂಗ್ರೆಸ್ ಬಿಟ್ಟು ಬಿಜೆಪಿಯನ್ನು ಈ ವರ್ಗ ಅಸ್ತಿತ್ವಕ್ಕೆ ತಂದರು ಎಂದು ವಿವರಿಸಿದರು.ಕಾಂಗ್ರೆಸ್ ಪಕ್ಷ ಎಂದಿಗೂ ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಹಾಳುವ ಕೆಲಸ ಮಾಡಲಿಲ್ಲ. ಬದಲಾಗಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಅಭಿವೃದ್ಧಿ ಕಾರ್‍ಯ ಮಾಡಿದೆ. ಪ್ರಧಾನಿಯಾಗಿದ್ದ ದಿಟ್ಟ ಮಹಿಳೆ ಇಂದಿರಾಗಾಂಧಿ ಆಡಳಿತವನ್ನು ಸಹಿಸದೆ ಸಿಖ್ ಆಪರೇಷನ್ ಬ್ಲೂಸ್ಟಾರ್ ಹತ್ಯೆ ಮಾಡಿದರು. ನಂತರ ಅನಿವಾರ್‍ಯವಾಗಿ ರಾಜೀವ್ ಗಾಂಧಿಯವರು ಆಡಳಿತ ಹಿಡಿದು ತಂತ್ರಜ್ಞಾನ ಕ್ರಾಂತಿಯನ್ನೇ ಮಾಡಿದರು. ಇಂದು ದೇಶದ ಎಲ್ಲ ನಾಗರೀಕರೂ ಕೈಯಲ್ಲೇ ಜಗತ್ತನ್ನು ನೋಡುವ ಸ್ಥಿತಿಗೆ ಬಂದಿದೆ ಅಂದರೆ ಅದಕ್ಕೆ ಅಂದಿನ ರಾಜೀವ್‌ಗಾಂಧಿಯವರ ಯೋಜನೆಯೇ ಕಾರಣ ಎಂದರು.
ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ಹೆಣ್ಣು ಮಕ್ಕಳನ್ನು ಅಪಹರಿಸಿ ಬಲವಂತವಾಗಿ ಆಸ್ತಿ ಬರೆಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ, ಅವರೇ ಮುಖ್ಯಮಂತ್ರಿಯಾಗಿದವರು ಒಂದು ವೇಳೆ ಶಿವಕುಮಾರ್ ಅವರು ಹೆಣ್ಣು ಮಕ್ಕಳನ್ನು ಅಪಹರಿಸಿದ್ದರೆ ಏಕೆ ಕಾನೂನು ಕ್ರಮಕ್ಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು. ಕಾನೂನು ಕ್ರಮ ಕೈಗೊಳ್ಳದೆ ಇಡೀ ಮಹಿಳಾ ವರ್ಗಕ್ಕೆ ಅಪಮಾನ ಮಾಡಿದ್ದೀರಿ ಎಂದು ಕಿಡಿಕಾರಿದರು.
ದೇಶದ 2.06 ಲಕ್ಷ ಗ್ರಾಪಂಗಳಿಗೆ ಇಂಟರ್‌ನೆಟ್ ಸೇವೆ ಒದಗಿಸುತ್ತೇವೆ ಎಂದು ಹೇಳಿದ್ದ ನರೇಂದ್ರ ಮೋದಿ ಸರ್ಕಾರ ಕೇವಲ 6322 ಗ್ರಾಪಂಗಳಿಗೆ ಮಾತ್ರ ಇಂಟರ್‌ನೆಟ್ ಸೇವೆ ನೀಡಿದೆ. ಇದು ಇವರ ಸಾಧನೆಯೇ ಎಂದು ಪ್ರಶ್ನಿಸಿದರು.
ಶಾಲೆ ಕಟ್ಟಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ನೀಡಲಿಲ್ಲ. ಈ ದೇಶದ ಸಾಮಾನ್ಯ ವರ್ಗ ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದಾರೆ. ಇದಕ್ಕೆ ಯಾವ ಯೋಜನೆಯನ್ನೂ ರೂಪಿಸಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಗೇಲಿ ಮಾಡುತ್ತಿದ್ದಾರೆ. ಆದರೆ, ಅವರ ಪ್ರಣಾಳಿಕೆಯಲ್ಲಿ ಶೋಷಿತ ವರ್ಗದವರು, ರೈತರಿಗೆ ಯಾವುದೇ ಯೋಜನೆ ರೂಪಿಸಿಲ್ಲ ಎಂದು ದೂರಿದರು.