ಅಂಬೇಡ್ಕರ್ ಬದುಕು ಎಲ್ಲರಿಗೂ ಸ್ಫೂರ್ತಿದಾಯಕ

KannadaprabhaNewsNetwork |  
Published : Apr 16, 2025, 12:32 AM IST
ಸುದ್ದಿಚಿತ್ರ 1 ನಗರದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಹಾಗೂ ಡಾ ಬಾಬು ಜಗಜೀವನ್ ರಾಮ್ ಅವರ 118 ನೇ ಜಯಂತೋತ್ಸವ ಮತ್ತು ಅಂಬೇಡ್ಕರ್ ಭವನ, ಸರ್ಕಾರಿ ನೌಕರರ ಭವನ, ಗುರುಭವನಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದಗಣ್ಯರು | Kannada Prabha

ಸಾರಾಂಶ

ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಅಂಬೇಡ್ಕರ್‌ ಶ್ರಮ ಹಾಗೂ ಹೋರಾಟಗಳನ್ನು ಎಲ್ಲರೂ ಸ್ಮರಿಸಬೇಕು. ಪ್ರತಿಯೊಂದು ಹಂತದಲ್ಲೂ ಅಂಬೇಡ್ಕರ್ ಅವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಸಂವಿಧಾನ ಶಿಲ್ಪಿ, ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಎಷ್ಟು ಸ್ಮರಿಸಿದರೂ ಸಾಲದು. ನಮ್ಮೆಲ್ಲ ಜೀವಿತಕಾಲದಲ್ಲೂ ಪ್ರತಿಯೊಂದು ಹಂತದಲ್ಲೂ ಅಂಬೇಡ್ಕರ್ ಅವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ನಗರದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಹಾಗೂ ಡಾ ಬಾಬು ಜಗಜೀವನ್ ರಾಮ್ ಅವರ 118 ನೇ ಜಯಂತ್ಯುತ್ಸವ ಮತ್ತು ಅಂಬೇಡ್ಕರ್ ಭವನ, ಸರ್ಕಾರಿ ನೌಕರರ ಭವನ, ಗುರುಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಸಮಾನತೆಯ ಪ್ರತಿಪಾದಕ ಅಂಬೇಡ್ಕರ್‌

ಶಾಸಕ ರವಿಕುಮಾರ್ ಮಾತನಾಡಿ, ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಅಂಬೇಡ್ಕರ್‌ ಶ್ರಮ ಹಾಗೂ ಹೋರಾಟಗಳನ್ನು ಎಲ್ಲರೂ ಸ್ಮರಿಸಬೇಕು ಎಂದರು.

ಪ್ರತಿಭಾ ಪುರಸ್ಕಾರ, ಸನ್ಮಾನ

ಇದೇ ಸಂದರ್ಭದಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರವಾಹನಗಳನ್ನು, ಮಹಿಳೆಯರಿಗೆ ಹೊಲಿಗೆ ಯಂತ್ರ, ಕಟ್ಟಡ ಕಾರ್ಮಿಕರಿಗೆ ಮೇಸ್ತ್ರಿ ಟೂಲ್ ಕಿಟ್ ಹಾಗೂ ಎಸ್ .ಎಸ್. ಎಲ್. ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಶಿಕ್ಷಕಿಯರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಸದಸ್ಯ ಎಂ. ಮಲ್ಲೇಶ್ ಬಾಬು, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್ ಹನುಮಂತಯ್ಯ, ಇಒ ಆರ್. ಹೇಮಾವತಿ , ತಹಶೀಲ್ದಾರ್ ಬಿ.ಎನ್.ಸ್ವಾಮಿ , ಆರಕ್ಷಕ ವೃತ್ತ ನಿರೀಕ್ಷಕ ಎಂ.ಶ್ರೀನಿವಾಸ್ , ಸಹಾಯಕ ನಿರ್ದೇಶಕ ಹೆಚ್.ಜಗದೀಶ್ , ನಗರಸಭೆ ಆಯುಕ್ತ ಮೋಹನ್ ಕುಮಾರ್ , ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ , ಸಿ.ವೆಂಕಟನಾರಾಯಣಮ್ಮ, ಜೆಡಿಎಸ್ ಮುಖಂಡ ಹೆಚ್ .ಆರ್.ಸಂದೀಪ್ ರೆಡ್ಡಿ , ಎಂ .ವಿ .ವೆಂಕಟಸ್ವಾಮಿ, ರೂಪಾ ನವೀನ್, ಬಂಕ್ ಮುನಿಯಪ್ಪ, ಪ್ರಸನ್ನಕುಮಾರ್ , ಸೀಕಲ್ ಆನಂದ ಗೌಡ, ಮೇಲೂರು ಮಂಜುನಾಥ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!