ಸಮಾಜವನ್ನು ಬೆಳಕಿನೆಡೆಗೆ ಕೊಂಡೊಯ್ದ ಮಹಾನ್‌ ವ್ಯಕ್ತಿ ಅಂಬೇಡ್ಕರ್‌

KannadaprabhaNewsNetwork |  
Published : Apr 23, 2025, 12:39 AM IST
22ಎಚ್ಎಸ್ಎನ್4 : ಹೊಳೆನರಸೀಪುರದ ನ್ಯಾಯಾಲಯದ ಆವರಣದಲ್ಲಿ ತಾ. ವಕೀಲರ ಸಂಘ ಆಯೋಜನೆ ಮಾಡಿದ್ದ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಅಂಬೇಡ್ಕರ್‌ ಎದುರಿಸಿದ ಕಷ್ಟಕರ ಜೀವನವನ್ನು ಮರೆತು ತಮ್ಮದೇ ದೃಢ ನಿರ್ಧಾರ ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಿದ ನಿಟ್ಟಿನಲ್ಲಿ ಅವರು ಬರೆದ ಮಹಾನ್ ಹಾಗೂ ಬೃಹತ್ ಗ್ರಂಥವಾದ ಸಂವಿಧಾನ ಕೊಡ ಮಾಡಿದ ಮಹಾನ್ ಪುರುಷರು. ಭಾರತರತ್ನ ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಮ್ಮ ಹಕ್ಕುಗಳನ್ನು ತಿಳಿಸಿ ಕೊಡುವ ಜತೆಗೆ ನಮ್ಮ ಆದ್ಯ ಕರ್ತವ್ಯವನ್ನೂ ಎಚ್ಚರಿಕೆಯಿಂದ ತಿಳಿಸಿಕೊಟ್ಟಿದ್ದಾರೆ. ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯವಾಗಿದೆ ಜತೆಗೆ ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ, ನಮ್ಮ ಮೇಲಿರುವ ಗುರುತರ ಜವಾಬ್ದಾರಿಯನ್ನು ಉಳಿಸಿಕೊಂಡು, ಬಳಸಿಕೊಂಡು ಉತ್ತಮ ಜೀವನ ನಡೆಸೋಣವೆಂದು ಕರೆ ಕೊಟ್ಟರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಡಾ. ಬಿ.ಆರ್.ಅಂಬೇಡ್ಕರ್ ಬಾಲ್ಯಾವಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅಸ್ಪೃಶ್ಯತೆ, ಬಡತನ, ಜಾತೀಯತೆ ಕೂಡಿದ ಕತ್ತಲೆಯಿಂದ ಕೂಡಿದ ಬದುಕಿನ ಜತೆಗೆ ಮುಳ್ಳಿನ ಹಾಸಿಗೆಯಂತಹ ಜೀವನವನ್ನು ಮೆಟ್ಟಿ ನಿಂತು ಸಮಾಜವನ್ನು ಬೆಳಕಿನೆಡೆಗೆ ಕೊಂಡ್ಯೊಯುವ ಕಾರ್ಯ ಮಾಡಿದ ಮಹಾ ಪುರುಷರು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ವತಿಯಿಂದ ಆಯೋಜನೆ ಮಾಡಿದ್ದ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್‌ ಎದುರಿಸಿದ ಕಷ್ಟಕರ ಜೀವನವನ್ನು ಮರೆತು ತಮ್ಮದೇ ದೃಢ ನಿರ್ಧಾರ ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಿದ ನಿಟ್ಟಿನಲ್ಲಿ ಅವರು ಬರೆದ ಮಹಾನ್ ಹಾಗೂ ಬೃಹತ್ ಗ್ರಂಥವಾದ ಸಂವಿಧಾನ ಕೊಡ ಮಾಡಿದ ಮಹಾನ್ ಪುರುಷರು. ಭಾರತರತ್ನ ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಮ್ಮ ಹಕ್ಕುಗಳನ್ನು ತಿಳಿಸಿ ಕೊಡುವ ಜತೆಗೆ ನಮ್ಮ ಆದ್ಯ ಕರ್ತವ್ಯವನ್ನೂ ಎಚ್ಚರಿಕೆಯಿಂದ ತಿಳಿಸಿಕೊಟ್ಟಿದ್ದಾರೆ. ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯವಾಗಿದೆ ಜತೆಗೆ ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ, ನಮ್ಮ ಮೇಲಿರುವ ಗುರುತರ ಜವಾಬ್ದಾರಿಯನ್ನು ಉಳಿಸಿಕೊಂಡು, ಬಳಸಿಕೊಂಡು ಉತ್ತಮ ಜೀವನ ನಡೆಸೋಣವೆಂದು ಕರೆ ಕೊಟ್ಟರು.

ಸಿವಿಲ್ ನ್ಯಾಯಾಧೀಶರಾದ ಚೇತನಾ ಅವರು ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಒಂದು ಸುಭದ್ರವಾದ ಕಾನೂನು ಅಥವಾ ನಿಯಮ ರೂಪಿಸಿಕೊಟ್ಟ ಕಾರಣದಿಂದ ಗರಿಷ್ಠ ಮಟ್ಟದಲ್ಲಿ ಸುರಕ್ಷಿತವಾಗಿ, ಭಯಭೀತಿ ಇಲ್ಲದೇ ಜೀವನ ನಡೆಸುವ ಮೂಲ ಕಾರಣ ಅಂಬೇಡ್ಕರ್ ನಮ್ಮ ಪೀಳಿಗೆಗೆ ನೀಡಿದ ಪೀಠಿಕೆ, ವಿಚಾರಧಾರೆಗಳು, ಆದರ್ಶಗಳು ಹಾಗೂ ನಿಯಮಗಳನ್ನು ನಾವುಗಳು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸೋಣವೆಂದು ಕರೆಕೊಟ್ಟರು.

ಚನ್ನರಾಯಪಟ್ಟಣದ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಜೆ.ರತ್ನಾಕರ ಪ್ರಧಾನ ಭಾಷಣ ಮಾಡಿದರು. ವಕೀಲೆ ಸಂಗೀತ ಪ್ರಾರ್ಥಿಸಿದರು, ರಾಜಶೇಖರಯ್ಯ ಸ್ವಾಗತಿಸಿದರು ಹಾಗೂ ಎಚ್.ಕೆ.ಹರೀಶ್ ನಿರೂಪಿಸಿದರು. ಅಪರ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಗುಡದಿನ್ನಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಸುನೀಲ್ ಕುಮಾರ್, ಶಿವಕುಮಾರ್ ಹಾಗೂ ಶಿರೀನ್, ಸರ್ಕಾರಿ ವಕೀಲರಾದ ಸುರೇಶ್ ಜಿ.ಎನ್., ಹಿರಿಯ ವಕೀಲರಾದ ರಾಮಪ್ರಸನ್ನ, ಪುರುಷೋತಮ್, ಆರ್‌.ಡಿ.ರವೀಶ್, ಅರುಣ್ ಕುಮಾರ್, ಮೈತ್ರಿ ಕೆ.ಎನ್, ಕೆ.ಎಸ್.ಪ್ರಕಾಶ್, ಜಯಪ್ರಕಾಶ್, ಸುನೀಲ್, ರಾಮಪ್ರಸಾದ್, ಶಿವಕುಮಾರ್, ಮಂಜುನಾಥ್, ನವೀನ್, ಶಿವಣ್ಣ, ಶಶಿಕುಮಾರ್, ಲಾವಣ್ಯ, ಆಶಾಕುಮಾರಿ, ಆಶಾರಾಣಿ, ಸಂಗೀತ, ರಾಣಿ, ಜ್ಯೋತಿ, ಅನುಷಾ, ಚಂದ್ರಶೇಖರ್, ರಾಘವೇಂದ್ರ, ಪ್ರವೀಣ್, ಕೃಷ್ಣಮೂರ್ತಿ, ಪುನೀತ್, ಪ್ರಶಾಂತ್, ಕೃಷ್ಣೇಗೌಡ, ಇತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ