ದಾಂಡೇಲಿ: ಬಸವವಾದಿ ಶರಣರ ಆಶಯ, ಪರಿಕಲ್ಪನೆಯಂತೆ ಅಂಬೇಡ್ಕರ ಅವರು ಸಂವಿಧಾನದಲ್ಲಿ ಪ್ರಸ್ತಾಪಿಸಿ, ಅನುಷ್ಠಾನಕ್ಕೆ ಆದ್ಯತೆ ನೀಡಿದ್ದಾರೆ ಎಂದು ಕೋಲಾರದ ಆದಿಮ ಫೌಂಡೇಶನ ಸ್ಥಾಪಕ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರದ ಹಾರ್ನಬಿಲ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟ ಜಿಲ್ಲಾ ಘಟಕ ಹಾಗೂ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಹಯೋಗದಲ್ಲಿ ದಾಂಡೇಲಿ, ಜೋಯಿಡಾ, ಹಳಿಯಾಳ ತಾಲೂಕುಗಳ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟ ಮತ್ತು ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕೇವಲ ದಲಿತರ ಉದ್ಧಾರಕ್ಕೆ ಅಂಬೇಡ್ಕರ ಶ್ರಮಿಸಿಲ್ಲ. ಬದಲಿಗೆ ಭಾರತೀಯರ ಅಸ್ಮಿತೆಗೆ ಹೋರಾಡಿದವರಲ್ಲದೇ ಎಲ್ಲ ವರ್ಗದ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ ಮಹಾನ ಚೇತನ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಭೀಮಾಶಂಕರ ಅಜನಾಳ ಅವರು, ದಲಿತ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವುದರ ಜತೆಗೆ ದಲಿತ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಉಪಅರಣ್ಯ ಸಂರಕ್ಷಣಾಧಿಕರಿ ಮಂಜುನಾಥ ನಾವ್ಹಿ, ಕಾರವಾರದ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ರವಿಕುಮಾರ ಕೆ.ಎಂ., ನಗರದ ಜನತಾ ವಿದ್ಯಾಲಯ ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯ ಅಮೃತ ರಾಮರಥ, ತಾಲೂಕು ಎಸ್ಎಸಿ, ಎಸ್‌ಟಿ ನೌಕರರ ಸಂಘದ ಗೌರವಾಧ್ಯಕ್ಷ ಡಾ. ಸಂತೋಷ ಚವ್ಹಾಣ ಮಾತನಾಡಿದರು.ವೇದಿಕೆಯಲ್ಲಿ ಜೋಯಿಡಾ ದಸಾಪ ಘಟಕದ ಗೌರವಾಧ್ಯಕ್ಷ ಪ್ರವೀಣ ಕುಮಾರ ಚಲವಾದಿ, ಜಿಲ್ಲಾ ಕಸಾಪ ಗೌರವ ಖಜಾಂಚಿ ಮುರ್ತುಜಾ ಹುಸೇನ ಆನೆಹೊಸುರು, ಜಿಲ್ಲಾ ದಸಾಪ ಕಾರ್ಯಾಧ್ಯಕ್ಷ ಗಣೇಶ ಭಿಷಣ್ಣನವರ, ಸಾರಿಗೆ ಘಟಕದ ವ್ಯವಸ್ಥಾಪಕ ಎಚ್.ಎಲ್. ರಾಠೋಡ, ಅಂಬೇಡ್ಕರ ಮೂರ್ತಿ ಪ್ರತಿಷ್ಠನ ಸಮಿತಿ ಅಧ್ಯಕ್ಷ, ನ್ಯಾಯವಾದಿ ರಾಜಶೇಖರ ಐ.ಎಚ್., ದಸಾಪ ದಾಂಡೇಲಿ ತಾಲೂಕು ಘಟಕ ಗೌರವಾಧ್ಯಕ್ಷ ಶ್ರೀಕಾಂತ ಅಸೂದೆ, ಜಿಲ್ಲಾ ದಸಾಪ ಸಂಘಟನಾ ಕಾರ್ಯದರ್ಶಿ ಗೋವಿಂದ ಮೇಲಗೇರಿ, ಆದಿ ಜಾಂಬವಂತ ಸಂಘದ ಅಧ್ಯಕ್ಷ ಚಂದ್ರಕಾಂತ ನಡಿಗೇರ, ಮಾನವ ಹಕ್ಕುಗಳ ಆಯೋಗದ ರಾಜ್ಯ ನಿರ್ದೇಶಕ ಫಿರೋಜ ಖಾನ ಪೀರಜಾದೆ ಮುಂತಾದವರಿದ್ದರು.ಗಾಯಕ ವಿಜಯ ಚೌವ್ಹಾಣ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ಮಂಜುನಾಥ ಕಾದ್ರೊಳ್ಳಿ ಸ್ವಾಗತಿಸಿದರು. ದಸಾಪ ದಾಂಡೇಲಿ ತಾಲೂಕು ಅಧ್ಯಕ್ಷ ಶ್ರೀಮಂತ ಮದರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಚಲವಾದಿ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕ ಬಾಬು ಚರ‍್ರಿ ವಂದಿಸಿದರು.