ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ತಾಲೂಕು ಗಂಗಾಪರಮೇಶ್ವರಿ ಸಂಘದಿಂದ ಮಂಗಳವಾರ ನಡೆದ ನಿಜಶರಣ ಶ್ರೀಅಂಬಿಗರ ಚೌಡಯ್ಯ ಜಯಂತೋತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
12ನೇ ಶತಮಾನದಲ್ಲಿಯೇ ಜೀವಿಸಿದ್ದ ಅಂಬಿಗರ ಚೌಡಯ್ಯ ಶಿವಚರಣ ಹಾಗೂ ವಚನಕಾರರಾಗುವ ಮೂಲಕ ಉಳಿದೆಲ್ಲಾ ವಚನಕಾರರಿಗಿಂತ ಭಿನ್ನ ಹಾಗು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು ಎಂದು ಅಭಿಪ್ರಾಯಪಟ್ಟರು.ಗಂಗಾಪರಮೇಶ್ವರಿ ಮೀನುಗಾರರ ಸಂಘದ ನಿರ್ದೇಶಕ ಜಿ.ಶೇಖರ್ ಮಾತನಾಡಿ, ಸತ್ಯ, ಶುದ್ಧ, ಕಾಯಕದ ನೆಲೆಯಿಂದ ಬೆಳೆದು ಬಂದ ಅಂಬಿಗರ ಚೌಡಯ್ಯ ಅಪ್ಪಟ ಕನ್ನಡ ಪ್ರತಿಭೆ. ಅವರು ನಡೆನುಡಿಯಲ್ಲಿ ಹೆಜ್ಜೆ ತಪ್ಪಿದವರಲ್ಲ. ಸ್ವಾಭಿಮಾನದ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಇದಕ್ಕೂ ಮುನ್ನ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ನಡೆದ ಜಯಂತೋತ್ಸವದಲ್ಲಿ ದ್ವಿತೀಯ ದರ್ಜೆ ತಹಸೀಲ್ದಾರ್ ಸೋಮಶೇಖರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಎಂ.ಕೃಷ್ಣಪ್ಪ, ಮಾಜಿ ಸದಸ್ಯ ಕೃಷ್ಣಮೂರ್ತಿ, ಸಂಘದ ಮಾಜಿ ನಿರ್ದೇಶಕ ಡಿ.ಆರ್.ಕೃಷ್ಣಪ್ಪ, ಸಂಘದ ಉಪಾಧ್ಯಕ್ಷ ಜಯರಾಮ, ನಿರ್ದೇಶಕ ಎಸ್. ವೆಂಕಟೇಶ, ಮುಖಂಡರಾದ ಮಹೇಶ್, ಮಧು, ಜಯರಾಮು, ಚೆಲುವರಾಜು, ನವೀನ, ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.