- ಯರಗೋಳ ಮತ್ತು ಕಂದಕೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಹಸ್ತಾಂತರ
------ಕನ್ನಡಪ್ರಭ ವಾರ್ತೆ ಗುರುಮಠಕಲ್
ಕ್ಷೇತ್ರದಲ್ಲಿ ಜನರು ಆರೋಗ್ಯವಾಗಿರಬೇಕು. ತುರ್ತು ಪರಿಸ್ಥಿತಿಯಲ್ಲಿ ಜನರ ಆರೋಗ್ಯ ಕಾಪಾಡಲು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಿ ಉತ್ತಮವಾದ ಸೇವೆ ಸಲ್ಲಿಸಲು ಆ್ಯಂಬ್ಯುಲೆನ್ಸ್ ಗಳ ಪಾತ್ರ ಪ್ರಮುಖವಾಗಿದ್ದು, ಏಜೆನ್ಸಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡಬೇಕು ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ನಡೆದ ಪ್ರಾಥಮಿಕ ಆರೋಗ್ಯ ಕೇಂದ್ರ ಯರಗೋಳ ಮತ್ತು ಕಂದಕೂರು ವಲಯಕ್ಕೆ ಎರಡು ಆ್ಯಂಬ್ಯುಲೆನ್ಸ್ ಗಳ ಹಸ್ತಾಂತರಿಸಿ ಅವರು ಮಾತನಾಡಿದರು.
ಆ್ಯಂಬುಲೆನ್ಸ್ ಗಳ ನಿರ್ವಹಣೆ ಮಾಡುವ ಏಜೆನ್ಸಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಾಹಿಸಬೇಕು. ಜನರಿಗೆ ತ್ವರಿತವಾಗಿ ಸ್ಪಂದಿಸಬೇಕು. ಕ್ಷೇತ್ರದ ಜನರಿಗೆ ಸರಿಯಾದ ರೀತಿಯಲ್ಲಿ ಸೇವೆ ಕಲ್ಪಿಸಲು ವಿಫಲವಾದರೆ ನಾನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.ಕ್ಷೇತ್ರದ ಜನರು ಆರೋಗ್ಯವಾಗಿರಬೇಕು. ಪ್ರಾಥಮಿಕ ಕೇಂದ್ರಗಳಲ್ಲಿ ಉತ್ತಮವಾದ ಆರೋಗ್ಯ ಸೇವೆ ಜನರಿಗೆ ಸಿಗಬೇಕು. ಆ್ಯಂಬ್ಯುಲೆನ್ಸ್ ಗಳ ಸದುಪಯೋಗ ಜನರು ಪಡೆದುಕೊಳ್ಳಬೇಕು ಎಂದರು.
ತಾಲೂಕು ಅರೋಗ್ಯ ಅಧಿಕಾರಿ ಹಣಮಂತರೆಡ್ಡಿ, ಮುಖ್ಯಾಧಿಕಾರಿ ಭಾರತಿ ದಂಡೋತಿ, ಡಾ. ಶಿವಪ್ರಸಾದ ಮೈತ್ರಿ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ, ಜಿ. ತಮ್ಮಣ್ಣ, ಕಿಷ್ಟಾರೆಡ್ಡಿ ಗವಿನೋಳ, ಪಾಪಣ್ಣ ಮನ್ನೆ, ಪ್ರಕಾಶ ನೀರೆಟಿ, ಅಶೋಕ ಕಲಾಲ್, ಆಶನ್ನ ಬುದ್ಧ, ರಘುನಾಥರೆಡ್ಡಿ ಗವಿನೋಳ, ಅನಂತಪ್ಪ ಯದ್ಲಾಪೂರ, ಬಸಣ್ಣ ದೇವರಹಳ್ಳಿ ಹಾಗೂ ಅರೋಗ್ಯ ಸಿಬ್ಬಂದಿ ಇದ್ದರು.----
11ವೈಡಿಆರ್12: ಗುರುಮಠಕಲ್ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಯರಗೋಳ ಮತ್ತು ಕಂದಕೂರು ವಲಯಕ್ಕೆ ಆ್ಯಂಬುಲೆನ್ಸ್ ಗಳನ್ನು ಶಾಸಕ ಶರಣಗೌಡ ಕಂದಕೂರು ಅವರು ಹಸ್ತಾಂತರ ಮಾಡಿದರು.