ಎಲ್ಲ ದರಗಳ ಏರಿಕೆ ಮಧ್ಯೆಯೇ ಲೀ. ಹಾಲು ಹೆಚ್ಚಳ ಖಂಡನೀಯ: ಬಿಜೆಪಿ

KannadaprabhaNewsNetwork |  
Published : Jun 27, 2024, 01:11 AM IST
ಕ್ಯಾಪ್ಷನಃ25ಕೆಡಿವಿಜಿ48ಃ ಕೊಳೇನಹಳ್ಳಿ ಬಿ.ಎಂ.ಸತೀಶ್ | Kannada Prabha

ಸಾರಾಂಶ

ಬಿತ್ತನೆ ಬೀಜ, ಪೆಟ್ರೋಲ್ ಡೀಸೆಲ್, ಆಲ್ಕೋಹಾಲ್, ಸ್ಟ್ಯಾಂಪ್ ಡ್ಯೂಟಿ ಬೆಲೆ ಹೆಚ್ಚಳ ಮಾಡಿ ಜನರ ಮೇಲೆ ಹೊರೆ ಏರಿಕೆ ಮಾಡಿದ್ದ ರಾಜ್ಯದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿನಿಂದ ಹಾಲಿನ ದರ ಹೆಚ್ಚು ಮಾಡಿದೆ. ಇದರಿಂದ ಜನರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ ಎಂದು ಜಿಲ್ಲಾ ಬಿಜೆಪಿ ಖಂಡಿಸಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ.ಸತೀಶ್ ತಿಳಿಸಿದ್ದಾರೆ.

- ಜನರಿಗೆ ಗಾಯದ ಮೇಲೆ ಬರೆ: ಬಿ.ಎಂ.ಸತೀಶ್‌ ಟೀಕೆ - - - ದಾವಣಗೆರೆ: ಬಿತ್ತನೆ ಬೀಜ, ಪೆಟ್ರೋಲ್ ಡೀಸೆಲ್, ಆಲ್ಕೋಹಾಲ್, ಸ್ಟ್ಯಾಂಪ್ ಡ್ಯೂಟಿ ಬೆಲೆ ಹೆಚ್ಚಳ ಮಾಡಿ ಜನರ ಮೇಲೆ ಹೊರೆ ಏರಿಕೆ ಮಾಡಿದ್ದ ರಾಜ್ಯದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿನಿಂದ ಹಾಲಿನ ದರ ಲೀಟರ್‌ಗೆ ₹2 ಹೆಚ್ಚು ಮಾಡಿದೆ. ಇದರಿಂದ ಜನರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ ಎಂದು ಜಿಲ್ಲಾ ಬಿಜೆಪಿ ಖಂಡಿಸಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ.ಸತೀಶ್ ತಿಳಿಸಿದ್ದಾರೆ.

ರಾಜ್ಯದಲ್ಲಿ ನಿತ್ಯ 1 ಕೋಟಿ ಲೀಟರ್ ಸನ್ನಿಹಕ್ಕೆ ಹಾಲು ಉತ್ಪಾದನೆಯಾಗುತ್ತಿದೆ. ಯಾವುದೇ ಉತ್ಪನ್ನದ ಉತ್ಪಾದನೆ ಅಧಿಕವಾದಾಗ ಬೆಲೆ ಕಡಿಮೆ ಆಗಬೇಕು. ರಾಜ್ಯದಲ್ಲಿ ಪ್ರತಿ ನಿತ್ಯ 1 ಕೋಟಿ ಲೀಟರ್ ಹಾಲು ಮತ್ತು 250 ಮೆಟ್ರಿಕ್ ಟನ್ ಹಾಲಿನ ಪುಡಿ ಉತ್ಪಾದನೆಯಾಗುತ್ತಿದೆ. ಇದು ನಮಗೆ ವಹಿವಾಟು ನಷ್ಟವಾಗುತ್ತದೆ. ಆದ್ದರಿಂದ 1 ಲೀಟರ್ ಹಾಲಿನ ಪ್ಯಾಕೆಟ್ ನಲ್ಲಿ 1000 ಎಂ.ಎಲ್ ಬದಲು 1050 ಎಂಎಲ್ ಹಾಲು ಕೊಟ್ಟು, ಹೆಚ್ಚಾದ 50 ಎಂಎಲ್ ಹಾಲಿಗೆ ₹2.10 ಆಗುತ್ತದೆ. ನಾವು ₹2 ಮಾತ್ರ ಹೆಚ್ಚಿಸಿದ್ದೇವೆ. ಇದರಿಂದ ಹಾಲಿನ ಪ್ರಸ್ತುತ ದರಕ್ಕಿಂತ 10 ಪೈಸೆ ಕಡಿಮೆ ಮಾಡಿದಂತಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ. ಅವರ ಹೇಳಿಕೆ ಅವೈಜ್ಞಾನಿಕ ಮತ್ತು ಕಿವಿಯಲ್ಲಿ ಹೂವು ಮೂಡಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಒಟ್ಟು 15 ಹಾಲು ಒಕ್ಕೂಟಗಳಲ್ಲಿ 798691 ಹಾಲು ಉತ್ಪಾದಕ ರೈತರಿದ್ದಾರೆ. ಅವರಿಗೆ ಆಗಸ್ಟ್,2023 ರಿಂದ ಮಾರ್ಚ್ 2024 ರವರೆಗೆ ಒಟ್ಟು 8 ತಿಂಗಳ ₹1083 ಕೋಟಿ ಪ್ರೋತ್ಸಾಹಧನ ಬಾಕಿ ಇದೆ. ಆದರೆ, ಏಪ್ರಿಲ್,2024ನೇ ತಿಂಗಳ ಪ್ರೋತ್ಸಾಹಧನ ₹109 ಕೋಟಿ ಬಿಡುಗಡೆ ಮಾಡಿದೆ. 2023-24ನೇ ಸಾಲಿನ ಪ್ರೋತ್ಸಾಹಧನ ಬಿಡುಗಡೆ ನನೆಗುದಿಗೆ ಬಿದ್ದಿದೆ. ಇದರಿಂದ ಹಾಲು ಉತ್ಪಾದಕ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ತಕ್ಷಣ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ ಎಂದಿದ್ದಾರೆ.

ಪ್ರಸ್ತುತ ಹಾಲಿನ ದರ ಏರಿಕೆ ಮಾಡಿರುವ ಕ್ರಮವನ್ನು ಹಿಂಪಡೆಯದಿದ್ದರೆ ಮತ್ತು ರೈತರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡದಿದ್ದರೆ ಬಿಜೆಪಿ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದ್ದಾರೆ.

- - -

-25ಕೆಡಿವಿಜಿ48ಃ:

ಕೊಳೇನಹಳ್ಳಿ ಬಿ.ಎಂ.ಸತೀಶ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ