ನ.26ರಂದು ಸೇಡಂನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Nov 20, 2026, 01:15 AM IST
ಫೋಟೋ- ಬೇಳೂರು ರಘುನಂದನ | Kannada Prabha

ಸಾರಾಂಶ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ ಸಾಹಿತಿಗಳಾದ ಪ್ರತಿಭಾ ನಂದಕುಮಾರ, ಪದ್ಮಲತಾ ಮೋಹನ್, ಸಂತೆಬೆನ್ನೂರು ಫೈಜ್ನಟ್ರಾಜ್, ಮಹಾದೇವ ಹಡಪದ, ಜಯರಾಮಚಾರಿ, ಮಮತಾ ಅರಸೀಕೆರೆ, ಬೇಲೂರು ರಘುನಂದನ್, ಚೀ.ಜ.ರಾಜೀವ್, ಡಾ.ಸಂತೋಷ ಹಾನಗಲ್ ಹಾಗೂ ಡಾ.ಶರಣಮ್ಮ ಪಾಟೀಲ (ಕಲಬುರಗಿ) ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ ಸಾಹಿತಿಗಳಾದ ಪ್ರತಿಭಾ ನಂದಕುಮಾರ, ಪದ್ಮಲತಾ ಮೋಹನ್, ಸಂತೆಬೆನ್ನೂರು ಫೈಜ್ನಟ್ರಾಜ್, ಮಹಾದೇವ ಹಡಪದ, ಜಯರಾಮಚಾರಿ, ಮಮತಾ ಅರಸೀಕೆರೆ, ಬೇಲೂರು ರಘುನಂದನ್, ಚೀ.ಜ.ರಾಜೀವ್, ಡಾ.ಸಂತೋಷ ಹಾನಗಲ್ ಹಾಗೂ ಡಾ.ಶರಣಮ್ಮ ಪಾಟೀಲ (ಕಲಬುರಗಿ) ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾವ್ಯ ವಿಭಾಗದಲ್ಲಿ ಪ್ರತಿಭಾ ನಂದಕುಮಾರ ಬೆಂಗಳೂರು (ಇಳಿದು ಬರುವುದಿಲ್ಲ ತಾಯಿ) ಹಾಗೂ ಸಂತೆಬೆನ್ನೂರು ಫೈಜ್ನಟ್ರಾಜ್ ದಾವಣಗೆರೆ (ದ್ರೌಪದಿಯ ವಾಷಿಂಗ್ ಮಿಷನ್ನು), ಕಥಾ ವಿಭಾಗದಲ್ಲಿ ಜಯರಾಮಚಾರಿ ಬೆಂಗಳೂರು (ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ) ಹಾಗೂ ಡಾ.ಶರಣಮ್ಮ ಪಾಟೀಲ ಕಲಬುರಗಿ (ರರಾಚಿ), ಕಾದಂಬರಿ ವಿಭಾಗದಲ್ಲಿ ಮಹಾದೇವ ಹಡಪದ ಧಾರವಾಡ (ಅನಿಮಿಷಯೋಗಿ) ಹಾಗೂ ಪದ್ಮಲತಾ ಮೋಹನ್ ದಕ್ಷಿಣ ಕನ್ನಡ (ಎಲ್‍ಬಿಡಬ್ಲೂ), ನಾಟಕ ವಿಭಾಗದಲ್ಲಿ ಮಮತಾ ಅರಸೀಕೆರೆ ಹಾಸನ (ಗೂಡು ಸೇರಿದ ಹಕ್ಕಿಗಳು) ಹಾಗೂ ಬೇಲೂರು ರಘುನಂದನ್ ಬೆಂಗಳೂರು (ಶರ್ಮಿಷ್ಠೆ), ಲೇಖನ ಸಂಕಲನ ವಿಭಾಗದಲ್ಲಿ ಡಾ.ಸಂತೋಷ ಹಾನಗಲ್ ಹಾವೇರಿ (ಭಾಷೆ ಮತ್ತು ಬದುಕು) ಹಾಗೂ ಚೀ.ಜ.ರಾಜೀವ್ ಮೈಸೂರು (ಪ್ರಿಯ ಗಾಂಧಿ) ಕೃತಿಗಳನ್ನು 26 ನೇ ವರ್ಷದ ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ 5000 ರು. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿ ಹಂಚಿಕೊಂಡಿದ್ದು, ನ. 26 ರಂದು ಸಂಜೆ 5.30 ಕ್ಕೆ ಸೇಡಮ್‍ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಅಮ್ಮ ಪ್ರಶಸ್ತಿ ನೀಡಲಾಗುವುದು ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಸಿದರು.ಅಮ್ಮ ಪ್ರಶಸ್ತಿಗೆ 26ರ ಸಂಭ್ರಮ: ನಿರಂತರವಾಗಿ 26 ವರ್ಷಗಳಿಂದ ತಾಲೂಕು ಕೇಂದ್ರವೊಂದರಿಂದ ದಿನಾಂಕ, ಸ್ಥಳ ಬದಲಿಸದಂತೆ, ಎಲ್ಲವನ್ನೂ ಬದ್ಧತೆಯಿಂದ ನಡೆಸಿಕೊಂಡು ಬರಲಾಗುತ್ತಿರುವ ಅಮ್ಮ ಪ್ರಶಸ್ತಿಗೆ ಈ ಬಾರಿ 26 ನೇ ವರ್ಷದ ಸಂಭ್ರಮ. ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ಅಮ್ಮ ಪ್ರಶಸ್ತಿಗೆ ಈಗ 26 ನೇ ವರ್ಷ. ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮ ಪ್ರಶಸ್ತಿಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿ ಗೌರವಿಸಿದ್ದಾರೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಅಮ್ಮ ಪ್ರಶಸ್ತಿ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದರಿಂದ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಧ್ಯವರ್ತಿಗಳ ಮೋಸ ತಡೆಗಟ್ಟಲು ಜಾಗೃತಿ ಮೂಡಿಸಿ
ನೀರಿಗಾಗಿ ಕಾರಟಗಿ ಬಂದ್‌, ರೈತರ ಆಕ್ರೋಶ