ಬೆಂಗಳೂರಿನ ಪಂಚ ಪಾಲಿಕೆಗಳಲ್ಲಿ ಪಶ್ಚಿಮ ಪಾಲಿಕೆಯದ್ದೇ ದೊಡ್ಡ ಮೊತ್ತದ ಬಜೆಟ್

KannadaprabhaNewsNetwork |  
Published : Mar 29, 2026, 01:30 AM IST
ಐತಿಹಾಸಿಕ ಕರಗ ಮಹೋತ್ಸವದ ಪೋಸ್ಟರ್ ಅನ್ನು ಸಚಿವ ರಾಮಲಿಂಗಾರೆಡ್ಡಿ, ಶಾಸಕ ಉದಯ್ ಗರುಡಾಚಾರ್ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು, ಸಾರ್ವಜನಿಕ ಕಾಮಗಾರಿಗಳಿಗೆ ಗರಿಷ್ಠ ಶೇ.60ರಷ್ಟು ಹಣ ಮೀಸಲು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕಸ ಬಳಿಯುವ ಯಂತ್ರ ಖರೀದಿಸಲು 25 ಕೋಟಿ ರು. ಮೀಸಲು. ಎಸ್‌ಸಿ ಮತ್ತು ಎಸ್‌ಟಿ, ಹಿಂದುಳಿದ ವರ್ಗ ಮತ್ತು ವಿಶೇಷ ಚೇತನರ ಕಲ್ಯಾಣಕ್ಕೆ 334.99 ಕೋಟಿ ರು., 100 ಕಾಡುಗಳ ಸ್ಥಾಪನೆ ಯೋಜನೆ, 49 ಕೆರೆಗಳ ಅಭಿವೃದ್ಧಿಗಾಗಿ 13.75 ಕೋಟಿ ರು. ಅನುದಾನ ಮುಂತಾದ ಜನಪರ ಅಂಶಗಳನ್ನು ಒಳಗೊಂಡ ಪಶ್ಚಿಮ ನಗರ ಪಾಲಿಕೆಯ 2026-27ನೇ ಸಾಲಿನ 4,732.73 ಕೋಟಿ ರು. ಗಾತ್ರದ ಬಜೆಟ್ ಮಂಡಿಸಿದೆ. ಇದು ಐದು ಪಾಲಿಕೆಗಳ ಪೈಕಿ ಅತಿ ದೊಡ್ಡ ಬಜೆಟ್ ಆಗಿದೆ.

₹4,732.73 ಕೋಟಿ ಬಜೆಟ್

₹ 4732.81 ಆದಾಯ ನಿರೀಕ್ಷೆ

₹4732 ಕೋಟಿ ವೆಚ್ಚ

₹ 8.42 ಲಕ್ಷ ಉಳಿತಾಯ-ಕಂದಾಯ ವಿಭಾಗದಿಂದ ₹ 1,964.60 ಕೋಟಿ ಆದಾಯ ಗುರಿ

- ಆಸ್ತಿ ತೆರಿಗೆಗಳ ರೂಪದಲ್ಲಿ ₹872 ಕೋಟಿ ಆದಾಯ ನಿರೀಕ್ಷೆ

- ಖಾತಾಗೆ ಪರಿವರ್ತನೆಯಿಂದ ₹563 ಕೋಟಿ ರು. ಆದಾಯ ಗುರಿ

(ವಿಧಾನಸಭಾ ಕ್ಷೇತ್ರಗಳು; ದಾಸರಹಳ್ಳಿ, ಯಶವಂತಪುರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ರಾಜಾಜಿನಗರ, ಗೋವಿಂದರಾಜನಗರ, ವಿಜಯನಗರ, ಬಸವನಗುಡಿ. ಪದ್ಮನಾಭನಗರ.)

(ಒಟ್ಟು ವಾರ್ಡ್‌ಗಳು 112)ಕನ್ನಡಪ್ರಭ ವಾರ್ತೆ ಬೆಂಗಳೂರು

ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು, ಸಾರ್ವಜನಿಕ ಕಾಮಗಾರಿಗಳಿಗೆ ಗರಿಷ್ಠ ಶೇ.60ರಷ್ಟು ಹಣ ಮೀಸಲು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕಸ ಬಳಿಯುವ ಯಂತ್ರ ಖರೀದಿಸಲು 25 ಕೋಟಿ ರು. ಮೀಸಲು. ಎಸ್‌ಸಿ ಮತ್ತು ಎಸ್‌ಟಿ, ಹಿಂದುಳಿದ ವರ್ಗ ಮತ್ತು ವಿಶೇಷ ಚೇತನರ ಕಲ್ಯಾಣಕ್ಕೆ 334.99 ಕೋಟಿ ರು., 100 ಕಾಡುಗಳ ಸ್ಥಾಪನೆ ಯೋಜನೆ, 49 ಕೆರೆಗಳ ಅಭಿವೃದ್ಧಿಗಾಗಿ 13.75 ಕೋಟಿ ರು. ಅನುದಾನ ಮುಂತಾದ ಜನಪರ ಅಂಶಗಳನ್ನು ಒಳಗೊಂಡ ಪಶ್ಚಿಮ ನಗರ ಪಾಲಿಕೆಯ 2026-27ನೇ ಸಾಲಿನ 4,732.73 ಕೋಟಿ ರು. ಗಾತ್ರದ ಬಜೆಟ್ ಮಂಡಿಸಿದೆ. ಇದು ಐದು ಪಾಲಿಕೆಗಳ ಪೈಕಿ ಅತಿ ದೊಡ್ಡ ಬಜೆಟ್ ಆಗಿದೆ.

ರಸ್ತೆಗಳ ವಿಸ್ತರಣೆ ಮತ್ತು ಅಭಿವೃದ್ಧಿ, ಡಿಜಿಟಲ್ ಆಡಳಿತ, ಘನತ್ಯಾಜ್ಯ ನಿರ್ವಹಣೆ, ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಉದ್ದೇಶಿಸಲಾಗಿದೆ. ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದ್ದು ವಿವಿಧ ಮೂಲಗಳಿಂದ 4,727.81 ಕೋಟಿ ರು. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಶೇ.30ರಷ್ಟು ಹಣವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನುದಾನದಿಂದ ಭರಿಸಿಕೊಳ್ಳುವ ಗುರಿ ಹೊಂದಲಾಗಿದೆ. ತೆರಿಗೆಯೇತರ ಮೂಲಗಳಿಂದ ಶೇ.28ರಷ್ಟು ಆದಾಯ, ಆಸ್ತಿ ತೆರಿಗೆ, ಕರಗಳ ಮೂಲಕ ಶೇ.23ರಷ್ಟು ಆದಾಯ ಹಾಗೂ ಶೇ.20ರಷ್ಟು ಆದಾಯವನ್ನು ಒಂದು ಸಲ ಸಂಗ್ರಹಿಸುವ ಅಸಾಧಾರಣ ಆದಾಯದ ಮೂಲಗಳಿಂದ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಶನಿವಾರ ಮಲ್ಲೇಶ್ವರದ ಜಲಮಂಡಳಿಯ ಸುವರ್ಣ ಭವನದಲ್ಲಿ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ ಬಜೆಟ್ ಮಂಡಿಸಿದರು. ಈ ವೇಳೆ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಂದಾಯ ವಿಭಾಗದಿಂದ ಈ ವರ್ಷ ಒಟ್ಟು 1,964.60 ಕೋಟಿ ರು.ಆದಾಯ ಕ್ರೋಢೀಕರಣದ ಗುರಿ ಹೊಂದಲಾಗಿದೆ. ಆಸ್ತಿ ತೆರಿಗೆ ರೂಪದಲ್ಲಿ 872 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಇದಕ್ಕಾಗಿ ತೆರಿಗೆ ಜಾಲದಿಂದ ಹೊರಗಿರುವ ಆಸ್ತಿಗಳನ್ನು ಪತ್ತೆ ಹಚ್ಚಿ ತೆರಿಗೆ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.

ಪಾಲಿಕೆಯ ಆದಾಯಕ್ಕೆ ದೊಡ್ಡ ಬಲ ನೀಡಲಿರುವ ಬಿ ಖಾತಾದಿಂದ ಎ ಖಾತಾಗೆ ಪರಿವರ್ತಿಸುವ ಅಭಿಯಾನದಿಂದ 563 ಕೋಟಿ ರು. ಆದಾಯ ಸಂಗ್ರಹ ಅಂದಾಜು ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪಾಲಿಕೆಯ ಸೇವೆಗಳನ್ನು ಸಂಪರ್ಕ ರಹಿತ ಮತ್ತು ಸುಲಭಗೊಳಿಸಲು ನೂತನ ಡಿಜಿಟಲ್ ಐಟಿ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗುತ್ತಿದೆ. ಸಮುದಾಯ ಭವನಗಳ ಅನುಮತಿ, ಪಾಲಿಕೆ ಕಟ್ಟಡಗಳ ಬಾಡಿಗೆ, ಕ್ರೀಡಾಂಗಣಗಳ ಬುಕ್ಕಿಂಗ್ ಹಾಗೂ ಚಲನಚಿತ್ರ ಚಿತ್ರೀಕರಣದ ಸ್ಥಳಗಳ ಮಂಜೂರಾತಿ ಪ್ರಕ್ರಿಯೆಯನ್ನು ಈ ಡಿಜಿಟಲ್ ವೇದಿಕೆಯ ಮೂಲಕ ನಿರ್ವಹಿಸುವ ಮೂಲಕ ಪಾಲಿಕೆಯ ಸ್ವಂತ ಆಸ್ತಿಗಳಿಂದ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ನಗರ ಯೋಜನೆ ವಿಭಾಗದಿಂದ ಕಟ್ಟಡ ನಕ್ಷೆ ಮಂಜೂರಾತಿ, ಪರಿಷ್ಕೃತ ನಕ್ಷೆ ಮಂಜೂರಾತಿ ಮತ್ತಿತರ ಸೇವೆಗಳಿಂದ 254 ಕೋಟಿ ರು. ಶುಲ್ಕ ಸಂಗ್ರಹಿಸುವ ಗುರಿ ಹೊಂದಲಾಗಿದೆ.ಸರ್ಕಾರದ ಹೊಸ ಪ್ರೀಮಿಯಂ ಎಫ್‌ಎಆರ್ ನೀತಿಯಿಂದ ಅಂದಾಜು 380 ಕೋಟಿ ರು. ಆದಾಯವನ್ನು ನಿರೀಕ್ಷಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಿಂಗಲ್ ಪ್ಲಾಟ್ ಅಪ್ರೂವಲ್ ಗೆ ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಅಂದಾಜು 200 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ.

ಯಾವ ವಲಯಕ್ಕೆ ಎಷ್ಟು ಹಣ, ಸಂಗ್ರಹ? ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆ

- ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕಸ ಯಂತ್ರ ಖರೀದಿಸಲು 25 ಕೋಟಿ ಮೀಸಲು.

- ತ್ಯಾಜ್ಯ ವಿಲೇವಾರಿ ಸುಧಾರಣೆಗೆ ಬಿಎಸ್‌ಡಬ್ಲ್ಯುಎಂಎಲ್‌ ಸಂಸ್ಥೆಗೆ 300 ಕೋಟಿ

- ವೈಜ್ಞಾನಿಕ ತ್ಯಾಜ್ಯ ಸಂಗ್ರಹಕ್ಕಾಗಿ 10 ಹೊಸ ಟ್ರಾನ್ಸ್‌ಫರ್ ಸ್ಟೇಷನ್‌ ಸ್ಥಾಪನೆ.ಕಲ್ಯಾಣ ಯೋಜನೆಗಳು

- ಎಸ್‌ಸಿ ಮತ್ತು ಎಸ್‌ಟಿ, ಹಿಂದುಳಿದ ವರ್ಗ, ವಿಶೇಷ ಚೇತನರ ಕಲ್ಯಾಣಕ್ಕೆ 334.99 ಕೋಟಿ.

- ಪ.ಜಾತಿ, ಪ. ಪಂಗಡ, ಪೌರಕಾರ್ಮಿಕ, ಹಿಂದುಳಿದ, ಅಲ್ಪಸಂಖ್ಯಾತ ವರ್ಗ, ಅಂಗವಿಕಲರ ಪ್ರದೇಶ ಸೌಕರ್ಯಕ್ಕೆ 150.97 ಕೋಟಿ.

- ಒಂಟಿ ಮನೆ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ತಲಾ 5 ಲಕ್ಷ ರು.ನಂತೆ ಒಟ್ಟು 71.64 ಕೋಟಿ ರು. ಸಹಾಯಧನ.

- ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಶುಲ್ಕ ಮರುಪಾವತಿ ಮತ್ತು ವಿದೇಶಿ ವ್ಯಾಸಂಗಕ್ಕೆ ನೆರವು ನೀಡಲು 47.17 ಕೋಟಿ.

- ಬೀದಿ ಬದಿ ವ್ಯಾಪಾರಿಗಳಿಗಾಗಿ ಇ-ವೆಂಡಿಂಗ್ ವಾಹನ ಮತ್ತು ವೆಂಡಿಂಗ್ ಜೋನ್ ಅಭಿವೃದ್ಧಿಪಡಿಸಲು 13.35 ಕೋಟಿ ರು.

ತೋಟಗಾರಿಕೆ ಮತ್ತು ಪರಿಸರ

- 496 ಉದ್ಯಾನವನಗಳ ನಿರ್ವಹಣೆಗೆ 47.45 ಕೋಟಿ ರು.

- ಮಿಯಾವಾಕಿ ಕಾಡು ಮಾದರಿಯಲ್ಲಿ ಹಸಿರೀಕರಣಕ್ಕಾಗಿ 100 ಮಿಯಾವಾಕಿ ಕಾಡುಗಳ ಸ್ಥಾಪನೆ ಯೋಜನೆ.

- 20 ಉದ್ಯಾನಗಳಲ್ಲಿ ಮಳೆನೀರು ಸಂಗ್ರಹಣಾ ಘಟಕ ಸ್ಥಾಪನೆ, ಮಳೆ ನೀರು ಕೊಯ್ಲು ಜಾರಿಗಾಗಿ 2 ಕೋಟಿ

- ನಾಯಂಡಹಳ್ಳಿ ಕೆರೆ ಸುತ್ತಮುತ್ತ ಮತ್ತು ಇತರ 5 ಸ್ಥಳಗಳಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ.

ಕೆರೆಗಳ ಸಂರಕ್ಷಣೆ

- 49 ಕೆರೆಗಳ ಅಭಿವೃದ್ಧಿಗಾಗಿ 13.75 ಕೋಟಿ ರು. ಅನುದಾನ.

- ಯಡಿಯೂರು ಮತ್ತು ಚಿಕ್ಕಲ್ಲಸಂದ್ರ ಕೆರೆಗಳ ಹೂಳೆತ್ತಲು ಮತ್ತು ಅಭಿವೃದ್ಧಿಗೆ 5 ಕೋಟಿ ರು.

ಶಿಕ್ಷಣ

- ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ.

- ಪಾಲಿಕೆಯ 5 ಶಾಲೆಗಳನ್ನು ಸ್ಮಾರ್ಟ್ ಶಾಲೆಗಳಾಗಿ ಪರಿವರ್ತನೆ.

- ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 3 ದಿನಗಳ ಶೈಕ್ಷಣಿಕ ಪ್ರವಾಸಕ್ಕೆ 2 ಕೋಟಿ ರು.ಆರೋಗ್ಯ

- ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ 6 ಪ್ರಮುಖ ಆಸ್ಪತ್ರೆಗಳ ಉನ್ನತೀಕರಣಕ್ಕೆ 95.73 ಕೋಟಿ ರು.

- 20 ಆರೋಗ್ಯ ಕೇಂದ್ರಗಳಲ್ಲಿ ವರ್ಚುವಲ್ ಕ್ಲಿನಿಕ್ ವಿಸ್ತರಣೆಗೆ 4 ಕೋಟಿ ರು.

- ಗೋವಿಂದರಾಜನಗರ ಆಸ್ಪತ್ರೆಯಲ್ಲಿ ಜಯದೇವ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ 10 ಕೋಟಿ ರು.

ಪಶುಪಾಲನೆ

- ಬೀದಿ ನಾಯಿಗಳ ಸಂತಾನಹರಣ ಮತ್ತು ಲಸಿಕೆ ಕಾರ್ಯಕ್ರಮಕ್ಕೆ 1.12 ಕೋಟಿ ರು.

- ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಾರ್ಡ್ ಪಶುಪಾಲನಾ ಮಾದರಿ ವಾರ್ಡ್ ಆಗಿ ಅಭಿವೃದ್ಧಿ.

- 500 ನಾಯಿಗಳ ಸಾಮರ್ಥ್ಯದ ಆಶ್ರಯ ತಾಣ ನಿರ್ಮಾಣಕ್ಕೆ 2 ಕೋಟಿ ರು.

ವೆಚ್ಚದ ವಿವರ

ಕ್ರ.ಸಂ ವಿವರಗಳು ಕೋಟಿ ರು.ಗಳಲ್ಲಿ ಶೇಕಡ (%)

1 ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ2,834.68ಶೇ.60

2 ಕಾರ್ಯಾಚರಣೆ ,ನಿರ್ವಹಣೆ ವೆಚ್ಚಗಳು531.26ಶೇ.11

3 ಸಿಬ್ಬಂದಿ ವೆಚ್ಚಗಳು488.54 ಶೇ.10

4 ಘನತ್ಯಾಜ್ಯ ನಿರ್ವಹಣೆ ವೆಚ್ಚ322 ಶೇ.7

5 ಕಾರ್ಯಕ್ರಮಗಳ ವೆಚ್ಚ (ಆರೋಗ್ಯ, ಶಿಕ್ಷಣ,ಕಲ್ಯಾಣ)243.49ಶೇ.5

6 ಠೇವಣಿ, ಕರಗಳ ಮರುಪಾವತಿ158.56ಶೇ.4

7 ಆಡಳಿತ ವೆಚ್ಚಗಳು154.21 ಶೇ.3

ಒಟ್ಟು ಮೊತ್ತ4,732.73ಶೇ.100

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜೃಂಭಣೆಯಿಂದ ನಡೆದ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ
ಸಿಎನ್‌ಜಿ ದರ ಏರಿಕೆಗೆ ಆಟೋ ಚಾಲಕರ ಆಕ್ರೋಶ