ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ ಅಡಿಯಲ್ಲಿ ಬಯೋಟೆಕ್ನಾಲಜಿ ಹಾಗೂ ಮೈಕ್ರೋಬಯಾಲಜಿ ವಿಭಾಗಗಳಿಂದ ನಡೆದ ರಾಜ್ಯ ಮಟ್ಟದ ಎರಡು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಸ್ಯ, ಪ್ರಾಣಿ, ಸೂಕ್ಷಾಣುಜೀವಿಗಳ ಜೀನ್ಸಗಳ, ಜೀನೋಮ್ ಗಳ ಸರಣಿ ತಂತ್ರಜ್ಞಾನ ಮತ್ತು ಆಂಕಿ ಆಂಶಗಳ ವಿಶ್ಲೇಷಣೆ ಹೇಗೆ ಸಾಧ್ಯವಾಗುತ್ತದೆ ಮತ್ತು ಇದನ್ನು ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ಹೇಗೆಲ್ಲ ಅವಕಾಶಗಳು ಒದಗಿಬರುತ್ತವೆ ಎಂಬುದನ್ನು ವಿವರಿಸಿದರು.ಸಂಪನ್ಮೂಲ ವ್ಯಕ್ತಿ ಪದ್ಮಿಣಿ ಪ್ರಿಯ ಆರ್. ಆರ್., ಕಾರ್ಯಾಗಾದ ಉದ್ದೇಶ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ಒದಗಿಸುವುದು ಆಗಿದೆ ಎಂದು ತಿಳಿಸಿದರು .
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಎಂ. ಗಾಂವಕರ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಇಂತಹ ಕಾರ್ಯಾಗಾರಗಳ ಪ್ರಯೋಜನ ಪಡೆಯಬೇಕು ಎಂದರು.ಐಕ್ಯೂಎಸಿ ಸಂಯೋಜಕ ಡಾ.ಡಿ.ಎಸ್. ಲಮಾಣಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಜೆ.ಬಿ. ಉಪ್ಪಿನ ಸ್ವಾಗತಿಸಿ ಪರಿಚಯಿಸಿದರು. ರೇಷ್ಮಾ ಸೌದಾಗರ ವಂದಿಸಿದರು. ಪ್ರಿಯಾ ಯಡಹಳ್ಳಿ ನಿರೂಪಿಸಿದರು.