ಗದುಗಿನಲ್ಲಿ ಹಣ್ಣು ವಹಿವಾಟಿಗೆ ವಿಫುಲ ಅವಕಾಶ

KannadaprabhaNewsNetwork |  
Published : Apr 17, 2025, 12:05 AM IST
ಕಾರ್ಯಕ್ರಮದಲ್ಲಿ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಕೇವಲ ಅನಾರೋಗ್ಯದಿಂದ ಇದ್ದವರು ಹಣ್ಣುಹಂಪಲು ಸೇವಿಸುವ ಪದ್ಧತಿ ಒಂದು ಕಾಲ ಇತ್ತು, ಜನತೆಯ ಆಹಾರ ಪದ್ಧತಿಯೂ ಬದಲಾಗಿದೆ.

ಗದಗ: ಗದುಗಿನ ಮಾರುಕಟ್ಟೆಯಲ್ಲಿ ಹೂವು, ಹಣ್ಣು ವ್ಯಾಪಾರ ವಹಿವಾಟು ಹೆಚ್ಚಿನ ರೀತಿಯಲ್ಲಿ ವೃದ್ಧಿಸಲು ಸಾಕಷ್ಟು ಅವಕಾಶಗಳಿದ್ದು, ಬೆಳೆಗಾರರು, ವ್ಯಾಪಾರಸ್ಥರು ಗ್ರಾಹಕರಿಗೆ ವೈವಿಧ್ಯಮಯ ಹಣ್ಣುಹಂಪಲು ಪೂರೈಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಎಪಿಎಂಸಿ ಪ್ರಾಂಗಣದಲ್ಲಿ ಹೋಲ್‌ಸೇಲ್ ಹಣ್ಣಿನ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಲಭ್ಯವಾಗುವ ಎಲ್ಲ ರೀತಿಯ ಹಣ್ಣು ಹಂಪಲುಗಳು ಗದುಗಿನ ಮಾರುಕಟ್ಟೆಯಲ್ಲಿಯೂ ಗ್ರಾಹಕರಿಗೆ ಲಭ್ಯವಾಗುವ ಮೂಲಕ ಅವರ ಆರೋಗ್ಯದಲ್ಲಿಯೂ ಗುಣಾತ್ಮಕ ಬದಲಾವಣೆ ಬರುವಂತಾಗಲಿ ಎಂದರು.

ಕೇವಲ ಅನಾರೋಗ್ಯದಿಂದ ಇದ್ದವರು ಹಣ್ಣುಹಂಪಲು ಸೇವಿಸುವ ಪದ್ಧತಿ ಒಂದು ಕಾಲ ಇತ್ತು, ಜನತೆಯ ಆಹಾರ ಪದ್ಧತಿಯೂ ಬದಲಾಗಿದೆ. ಎಲ್ಲ ಬಗೆಯ ಹಣ್ಣು ಗದಗ ಜಿಲ್ಲೆಯಲ್ಲಿ ಬೆಳೆಯುವಂತಾಗಲಿ ಗುಣಮಟ್ಟದ ಹಣ್ಣು ಗ್ರಾಹಕರಿಗೆ ಸಿಗುವಂತಾಗಲಿ. ಹೋಲ್‌ಸೇಲ್ ಹಣ್ಣಿನ ದಲಾಲರು ಒಗ್ಗಟ್ಟಿನಿಂದ ಎಪಿಎಂಸಿಯಲ್ಲಿ ವ್ಯಾಪಾರ ನಡೆಸಲಿ ಎಂದರು.

ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗಾಗಲೇ ಕಾಳುಕಡಿ, ಒಣಮೆಣಸಿನಕಾಯಿ, ಹೂವು ಒಂದೇ ಕಡೆ ವಹೀವಾಟು ನಡೆದುಕೊಂಡು ಬಂದಿದ್ದು ಇದೀಗ ಹೋಲ್‌ಸೇಲ್ ಹಣ್ಣಿನ ಮಳಿಗೆಗಳೂ ಸಹ ಇಲ್ಲಿ ಶುಭಾರಂಭಗೊಂಡಿದ್ದು ಇನ್ನು ಮುಂದೆ ಗದಗ ಗ್ರೇನ್ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಈ ವಹಿವಾಟು ಎಪಿಎಂಸಿಯಲ್ಲಿ ನಡೆಯಬೇಕು ಅದಕ್ಕೆ ಎಪಿಎಂಸಿ ಕಾರ್ಯದರ್ಶಿಗಳು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕಲ್ಲದೆ ವ್ಯಾಪಾರಸ್ಥರ ಬೇಡಿಕೆಯಂತೆ ಸಿಸಿ ರಸ್ತೆ ಹಾಗೂ ಬೀದಿ ದೀಪದ ವ್ಯವಸ್ಥೆಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ 15 ದಿನಗಳಲ್ಲಿ ಭೂಮಿ ಪೂಜೆ ಜರುಗಿಸಬೇಕೆಂದು ಸೂಚಿಸಿದರು.

ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು ಮಾತನಾಡಿ, ವ್ಯಾಪಾರ ವಹಿವಾಟಿನಲ್ಲಿ ಸತ್ಯ, ನಿಷ್ಠೆ, ಪ್ರಾಮಾಣಿಕತೆ ಇರಲಿ. ಧರ್ಮ ಮತ್ತು ನ್ಯಾಯದ ದುಡಿಮೆಯು ನಿಶ್ಚಿತವಾಗಿಯೂ ಫಲ ನೀಡಬಲ್ಲದು. ಹೂವು ಮತ್ತು ಹಣ್ಣಿನ ಮಳಿಗೆಯ ವ್ಯಾಪಾರ ವಹಿವಾಟು ಎಪಿಎಂಸಿಯಲ್ಲಿ ಉತ್ತಮ ರೀತಿಯಲ್ಲಿ ನಡೆಯಲಿ ಇದಕ್ಕೆ ಗುರು ಪಂಚಾಕ್ಷರ, ಪುಟ್ಟರಾಜರ ಕೃಪೆ ಸದಾವಕಾಲ ಇದೆ ಎಂದರು.

ಈ ವೇಳೆ ಕೃಷ್ಣಾ ಪರಾಪೂರ, ಪೀರಸಾಬ್‌ ಕೌತಾಳ, ಬಿ.ಬಿ. ಅಸೂಟಿ, ಸುವರ್ಣಾ ವಾಲಿಕಾರ, ಸುಧಾ ಬಂಡಿ, ಎಂ.ಆರ್. ನದಾಫ, ಸಾಧಿಕ್ ನರಗುಂದ, ಸುರೇಶ ಕಟ್ಟಿಮನಿ, ಬರಕತ್‌ಅಲಿ ಮುಲ್ಲಾ, ರಿಯಾಜ್‌ಅಹ್ಮದ್ ಅತ್ತಾರ, ರಮೇಶ ಮುಳಗುಂದ, ಅಬ್ದುಲ್‌ರೆಹಮಾನ್ ಹುಯಿಲಗೋಳ, ಮಕ್ಬುಲ್‌ಸಾಬ್‌ ಶಿರಹಟ್ಟಿ, ಚಂದ್ರು ಬಾಳಿಹಳ್ಳಿಮಠ, ಬಾಷಾಸಾಬ್‌ ಮಲ್ಲಸಮುದ್ರ, ಐ.ಬಿ. ದಾವಲಸಾಬ್‌, ರಮೇಶ್ ಶೆಟ್ಟೆಪ್ಪನವರ, ಜೆ.ಸಿ. ಶಿರಹಟ್ಟಿ, ಹೋಲ್‌ಸೇಲ್ ಹಣ್ಣಿನ ಮಳಿಗೆಗಳ ದಲಾಲರ ಸಂಘದ ಗೌರವ ಅಧ್ಯಕ್ಷ ಮುನೀರ್ ನರೇಗಲ್, ಅಧ್ಯಕ್ಷ ಅಸ್ರಫ್‌ಅಲಿ ನಸಬಿ, ಉಪಾಧ್ಯಕ್ಷ ಬಸಪ್ಪ ಲಕ್ಕುಂಡಿ, ಕಾರ್ಯದರ್ಶಿ ಮೆಹರ್‌ಅಲಿ ಢಾಲಾಯತ್, ಅಲಿ ಹುಯಿಲಗೋಳ, ಕರಿಯಪ್ಪ ಹಂಜಗಿ, ರೆಹಾನ್ ಕಾಟಾಪೂರ, ಆಝಾದ್ ಶಿರಹಟ್ಟಿ, ಬಸಪ್ಪ ಲಕ್ಕುಂಡಿ, ಮೆಹಬೂಬಸಾಬ್‌ ಶಿರಹಟ್ಟಿ, ಅಜರ್ ಶಿರಹಟ್ಟಿ, ಸರ್ಫರಾಜ ಈಟಿ, ಮುನೀರ್ ನರೇಗಲ್ಲ, ಅಬ್ದುಲ್‌ರಜಾಕ್ ಮುಲ್ಲಾ, ಅಬ್ದುಲ್ ಕಾಟಾಪೂರ, ಇಲಿಯಾಸ್ ಶಿರಹಟ್ಟಿ, ಸಲೀಮ್ ಡಾಲಾಯತ್ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮೌಲಾನಾ ಹಾಫೀಜ್ ಹುಸೇನಸಾಬ ಬಾಗಲಿ ಕುರಾನ ಪಠಿಸಿದರು. ಅಬ್ದುಲ್‌ರೆಹಮಾನ ಹುಯಿಲಗೋಳ ಸ್ವಾಗತಿಸಿದರು. ಬಾಷಾಸಾಬ್‌ ಮಲ್ಲಸಮುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು. ಮಹ್ಮದ್‌ಅಲಿ ರೋಣ ವಂದಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ