ದೇಶದ ಭವಿಷ್ಯ ರೂಪಿಸುವ ಚುನಾವಣೆ: ವಿಶ್ವೇಶ್ವರ ಹೆಗಡೆ ಕಾಗೇರಿ

KannadaprabhaNewsNetwork | Published : Apr 20, 2024 1:04 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಕಳೆದ ೧೦ ವರ್ಷಗಳಲ್ಲಿ ದೇಶದ ಸೈನ್ಯವನ್ನು ಬಲಪಡಿಸಿ, ಆಧುನಿಕ ಸಲಕರಣೆ ಒದಗಿಸಿ ಅದರ ನೈತಿಕ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಭಯೋತ್ಪಾದನೆ ನಿಯಂತ್ರಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಸಿದ್ದಾಪುರ: ಈ ಬಾರಿಯ ಲೋಕಸಭಾ ಚುನಾವಣೆ ಭಾರತದ ಭವಿಷ್ಯವನ್ನು ರೂಪಿಸುವ ಚುನಾವಣೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ತಾಲೂಕಿನ ಶಿರಳಗಿ, ಮನಮನೆ, ಹಲಗೇರಿ, ಕೊರ್ಲಕೈ, ದೊಡ್ಮನೆ, ಕ್ಯಾದಗಿ, ಇಟಗಿ, ವಾಜಗೋಡ, ಬಿಳಗಿ, ಸೋವಿನಕೊಪ್ಪ, ಕೋಲಸಿರ್ಸಿ, ಬೇಡ್ಕಣಿ ಗ್ರಾಪಂ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಬಳಿಕ ಕವಂಚೂರಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕಳೆದ ೧೦ ವರ್ಷಗಳಲ್ಲಿ ದೇಶದ ಸೈನ್ಯವನ್ನು ಬಲಪಡಿಸಿ, ಆಧುನಿಕ ಸಲಕರಣೆ ಒದಗಿಸಿ ಅದರ ನೈತಿಕ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಭಯೋತ್ಪಾದನೆ ನಿಯಂತ್ರಿಸಿದ್ದಾರೆ. ಹಿಂದೂಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ, ಜನಸಾಮಾನ್ಯನಿಗೂ ತಲುಪುವ ಹಲವು ಜನಪರ ಯೋಜನೆಗಳ ಮೂಲಕ ದೇಶಕ್ಕೆ ಹೊಸತನವನ್ನು ನೀಡಿದ್ದಾರೆ. ಸಂಚಾರ, ಸಂಪರ್ಕ, ಕೃಷಿ ಕ್ಷೇತ್ರ ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಲು, ಬಿಜೆಪಿ ಅತಿ ಹೆಚ್ಚು ಸಂಸದ ಸ್ಥಾನಗಳನ್ನು ಪಡೆಯಬೇಕು ಎಂದರು. ಜೆಡಿಎಸ್ ಪ್ರಮುಖ ಉಪೇಂದ್ರ ಪೈ ಮಾತನಾಡಿ, ನರೇಂದ್ರ ಮೋದಿಯವರಿಂದ ಈ ದೇಶದ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಮುಂದಿನ ಭವಿಷ್ಯದ ದಿನಗಳು ಉತ್ತಮವಾಗಿರಲು ಮೋದಿ ಪ್ರಧಾನಿಯಾಗಲೇಬೇಕು. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಬಿಜೆಪಿ ಪ್ರಮುಖ ಕೆ.ಜಿ. ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಜಿಪಂ ಮಾಜಿ ಸದಸ್ಯ ಈಶ್ವರ ನಾಯ್ಕ, ಪ್ರಮುಖರಾದ ಮಾರುತಿ ನಾಯ್ಕ, ರಾಘವೇಂದ್ರ ಶಾಸ್ತ್ರಿ, ಸತೀಶ ಹೆಗಡೆ, ಕೃಷ್ಣಮೂರ್ತಿ ಕಡಕೇರಿ, ಸುರೇಶ ನಾಯ್ಕ ಬಾಲಿಕೊಪ್ಪ, ಗುರುರಾಜ ಶಾನಭಾಗ, ಮಂಜುನಾಥ ಭಟ್, ವಿಜೇತ ಗೌಡರ್, ನಂದನ ಬರ‍್ಕರ್ ಮುಂತಾದವರಿದ್ದರು.

Share this article