ಪ್ರಾಮಾಣಿಕ ರಾಜಕಾರಣ ಮಾಡಿರುವೆ: ನಳಿನ್‌ ಕುಮಾರ್‌ ಕಟೀಲು

KannadaprabhaNewsNetwork |  
Published : Nov 29, 2023, 01:15 AM IST
ಫೋಟೋ: ೨೮ಪಿಟಿಆರ್-ಬಜೆಪಿಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಪಕ್ಷ ನಿಶ್ಚಯ ಮಾಡುವ ಸಿದ್ಧಾಂತ, ವಹಿಸುವ ಜವಾಬ್ದಾರಿಗೆ ಬದ್ಧನಾಗಿ ಕೆಲಸ ನಿರ್ವಹಿಸುವುದಷ್ಟೇ ನನ್ನ ಕೆಲಸವಾಗಿದೆ. ರಾಷ್ಟ್ರೀಯ ವಿಚಾರಧಾರೆಯಲ್ಲಿ ಬೆಳೆದ ತಾನು ಕೊಟ್ಟಿರುವ ಜವಾಬ್ದಾರಿಯಲ್ಲಿ ಮಹಾನ್ ಸಾಧನೆ ಮಾಡಿದ್ದೇನೆ ಎಂದು ಹೇಳುವುದಿಲ್ಲ, ಬದಲಾಗಿ ಆದರ್ಶವಾಗಿ, ಯಾವುದೇ ಚ್ಯುತಿ ಬಾರದಂತೆ, ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ ಎಂದು ಬಿಜೆಪಿ ನಿಕಪಟೂರ್ವ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು ಇಲ್ಲಿ ನಳಿನ್ ಎನ್ನುವುದು ಶೂನ್ಯವಾಗಿದ್ದು, ಸಿದ್ಧಾಂತ, ಕಮಲದ ಚಿಹ್ನೆ ಎನ್ನುವುದೇ ಬಹಳ ಮುಖ್ಯವಾಗಿದೆ. ಪಕ್ಷ ನಿಶ್ಚಯ ಮಾಡುವ ಸಿದ್ಧಾಂತ, ವಹಿಸುವ ಜವಾಬ್ದಾರಿಗೆ ಬದ್ಧನಾಗಿ ಕೆಲಸ ನಿರ್ವಹಿಸುವುದಷ್ಟೇ ನನ್ನ ಕೆಲಸವಾಗಿದೆ. ರಾಷ್ಟ್ರೀಯ ವಿಚಾರಧಾರೆಯಲ್ಲಿ ಬೆಳೆದ ತಾನು ಕೊಟ್ಟಿರುವ ಜವಾಬ್ದಾರಿಯಲ್ಲಿ ಮಹಾನ್ ಸಾಧನೆ ಮಾಡಿದ್ದೇನೆ ಎಂದು ಹೇಳುವುದಿಲ್ಲ, ಬದಲಾಗಿ ಆದರ್ಶವಾಗಿ, ಯಾವುದೇ ಚ್ಯುತಿ ಬಾರದಂತೆ, ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ ಎಂದು ಬಿಜೆಪಿ ನಿಕಪಟೂರ್ವ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಪುತ್ತೂರಿನ ರೋಟರಿ ಸಭಾಭವನದಲ್ಲಿ ಮಂಗಳವಾರ ನಡೆದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ನಗರ ಮತ್ತು ಗ್ರಾಮಾಂತರ ಮಂಡಲ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದಾಗ ನೀನು ಮಾಸ್ ಲೀಡರ್ ಆಗಲು ಈ ಅವಕಾಶವಲ್ಲ, ಪಕ್ಷವನ್ನು ಮಾಸ್ ಆಗಿಸಬೇಕು ಎಂದು ಪಕ್ಷ ತಿಳಿಸಿತ್ತು. ಅದರಂತೆ ೧೮ ಬಾರಿ ರಾಜ್ಯ ಪ್ರವಾಸ ಮಾಡಿದ್ದೇನೆ. ಪಂಚಾಯಿತಿ ಚುನಾವಣೆಯಿಂದ ಎಲ್ಲಾ ಚುನಾವಣೆಗಳಲ್ಲೂ ಅತಿಹೆಚ್ಚು ಗೆಲುವು ಬಿಜೆಪಿ ಪಕ್ಷದ್ದಾಗಿದೆ. ಕಾರ್ಯಕರ್ತರು ಎಲ್ಲವನ್ನೂ ತುಲನೆ ಮಾಡಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮಾತನಾಡಿ, ರಾಷ್ಟ್ರೀಯ ವಿಚಾರಧಾರೆಯೇ ಬಿಜೆಪಿಯ ಮೂಲ ಸಿದ್ಧಾಂತ. ಸೋತಿದ್ದೇವೆ ಎಂದು ವಿಚಲಿತರಾಗದೆ ಸಂಘಟನೆ ಬಲಪಡಿಸುವ ಆತ್ಮವಿಶ್ವಾಸ ನಮ್ಮದು ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಉಪಾಧ್ಯಕ್ಷ ರಾಮದಾಸ್ ಬಂಟ್ವಾಳ, ಪುತ್ತೂರು ನಗರ ಮಂಡಲ ಉಪಾಧ್ಯಕ್ಷ ಇಂಧುಶೇಖರ್ ಮತ್ತಿತರರಿದ್ದರು.ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪುಟ ಪುನಾರಚನೆ ಸರ್ಕಸ್; ಶಾಸಕರು- ಸುರ್ಜೇವಾಲ ಭೇಟಿ
ವೇಮುಲಾ ಮಸೂದೆಗೆ ಸಂಪುಟ ಅಸ್ತು