ಎಲ್ಲರ ಹೃದಯ ಗೆದ್ದ ಆದರ್ಶ ಶಿಕ್ಷಕ ಮುಲ್ಲಾ

KannadaprabhaNewsNetwork |  
Published : Jun 14, 2024, 01:03 AM IST
ಐಗಳಿ ಗ್ರಾಮದ ಬಿರಾದಾರ ವಸತಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಜಿ.ಐ.ಮುಲ್ಲಾ ಅವರನ್ನು ಇಲಾಖೆಯ ಪರ ಸತ್ಕರಿಸಿ ಬಿ.ಆರ್.ಸಿ ಅಧಿಕಾರಿ ಜಿ.ಎ.ಖೋತ ಮಾತನಾಡಿದರು. | Kannada Prabha

ಸಾರಾಂಶ

ರೈತರ ಜೊತೆ ಬೆರೆತು, ಎಸ್‌ಡಿಎಂಸಿ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟು ಎಲ್ಲರ ಹೃದಯ ಗೆದ್ದ ಆದರ್ಶ ಶಿಕ್ಷಕ ಜಿ.ಐ.ಮುಲ್ಲಾ ಅವರು ಮಾಡಿದ ಸಾಧನೆ ಮತ್ತು ಕಾರ್ಯ ಶ್ಲಾಘನೀಯ ಬಿ.ಆರ್.ಸಿ ಯ ಹಿರಿಯ ಅಧಿಕಾರಿ ಜಿ.ಎ.ಕೋತ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ರೈತರ ಜೊತೆ ಬೆರೆತು, ಎಸ್‌ಡಿಎಂಸಿ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟು ಎಲ್ಲರ ಹೃದಯ ಗೆದ್ದ ಆದರ್ಶ ಶಿಕ್ಷಕ ಜಿ.ಐ.ಮುಲ್ಲಾ ಅವರು ಮಾಡಿದ ಸಾಧನೆ ಮತ್ತು ಕಾರ್ಯ ಶ್ಲಾಘನೀಯ ಬಿ.ಆರ್.ಸಿ ಯ ಹಿರಿಯ ಅಧಿಕಾರಿ ಜಿ.ಎ.ಕೋತ ಹೇಳಿದರು. ಸ್ಥಳೀಯ ಬಿರಾದಾರ ವಸತಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿವೃತ್ತಿ ಮಾಡಿದ ಜಿ.ಐ.ಮುಲ್ಲಾ ಅವರಿಗೆ ಶಿಕ್ಷಣ ಇಲಾಖೆಯ ಪರ ಸತ್ಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ನಮ್ಮ ಇಲಾಖೆಯಿಂದ 12 ಜನ ಶಿಕ್ಷಕರು ಸೇವಾ ನಿವೃತ್ತಿ ಹೊಂದಿದ್ದಾರೆ. ಮುಲ್ಲಾ ಅವರು ಕರ್ತವ್ಯ ಹಾಗೂ ಸಮಯ ಪ್ರಜ್ಞೆ ಇಟ್ಟುಕೊಂಡು ಮಕ್ಕಳಿಗೆ ಬೋಧನೆ ಮಾಡಿದ್ದಾರೆ. ಮೇಲಾಧಿಕಾರಿಗಳು ಕೇಳಿದ ಮಾಹಿತಿಗಳನ್ನು ಮೊಟ್ಟ ಮೊದಲಿಗೆ ಒಪ್ಪಿಸುತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಳ್ಳೆಯ ಜನರೊಂದಿಗೆ ಜನ ಪರ ಕಾರ್ಯ ಮಾಡಿ ನಿಮ್ಮ ಸೇವೆ ನಮ್ಮ ಇಲಾಖೆಗೆ ಇನ್ನೂ ಅವಶ್ಯವಿತ್ತು. ಅನಿವಾರ್ಯ ಪರಮಾತ್ಮ ನಿಮಗೆ ಆಯುಷ್ಯ ಆರೋಗ್ಯ ಹೆಚ್ಚಿಗೆ ದಯಪಾಲಿಸಲಿ ಎಂದು ಶುಭ ಹಾರೈಸಿದರು.ರಾಜ್ಯಪ್ರಶಸ್ತಿ ಪುರಸ್ಕೃತ ಎಸ್.ಸಿ.ಹಡಪದ ಮಾತನಾಡಿ, ನಾನು ಮತ್ತು ಮುಲ್ಲಾ ಅವರ ಜೊತೆಯಲ್ಲೇ ಕಾರ್ಯ ಮಾಡುತ್ತಿದ್ದೇವೆ. ಶಾಲೆ ಬೇರೆ ಇರಬಹುದು, ಇಬ್ಬರ ಗುರಿ ಒಂದೇಯಾಗಿತ್ತು. ಜನ ಮೆಚ್ಚುವಂತೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಜೊತೆಗೆ ಒಳ್ಳೆಯ ಸಂಸ್ಕಾರ ಕೊಟ್ಟಿದ್ದು ನಮಗೆ ತೃಪ್ತಿ ಇದೆ. ಪಾಠ ಬೋಧನೆ ಕಾರ್ಯದಲ್ಲಿ ಸಮಯ ಎಂದೂ ನೋಡಲಿಲ್ಲ. ಮಕ್ಕಳೇ ದೇವರೆಂದು ತಿಳಿದು ಸಂಭಳಕ್ಕಿಂತ ಹೆಚ್ಚಿಗೆ ಮಕ್ಕಳಿಗೆ ಅಕ್ಷರ ಕಲಿಸಿದ್ದು ಆನಂದ ಎನಿಸಿದೆ ಎಂದರು.ಬಿ.ಆರ್.ಸಿ ಎ.ಎಚ್.ಮುಜಾವರ, ವಿಶ್ರಾಂತ ಶಿಕ್ಷಕ ಪಿ.ವೈ.ದೇವನಗಾವಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಗೌಡ ಪಾಟೀಲ, ಪ್ರವಚನಕಾರ ಜಗದೀಶ ಕೊರಬು ಮತ್ತು ಕೆ.ಎಸ್.ಬಿರಾದಾರ, ಜಿ.ಐ.ಮುಲ್ಲಾ ಬಗ್ಗೆ ಮಾತನಾಡಿದರು. ಶಿಕ್ಷಣ ಇಲಾಖೆಯ ಸಿ.ಆಶಿಕ್ಷಕ ಡಿ.ಕೆ.ಮುಧೋಳ ಸ್ವಾಗತಿಸಿದರು. ವಿಶ್ವನಾಥ ಕಂಬಾಗಿ ನಿರೂಪಿಸಿದರು. ಶಿಕ್ಷಕ ಎಂ.ಆರ್.ಪಾಟೀಲ ವಂದಿಸಿದರು.

4 ಐಗಳಿ 01

ಐಗಳಿ ಗ್ರಾಮದ ಬಿರಾದಾರ ವಸತಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಜಿ.ಐ.ಮುಲ್ಲಾ ಅವರನ್ನು ಇಲಾಖೆಯ ಪರ ಸತ್ಕರಿಸಿ ಬಿ.ಆರ್.ಸಿ ಅಧಿಕಾರಿ ಜಿ.ಎ.ಖೋತ ಮಾತನಾಡಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ