ಕನಕಪುರ: ವಿದ್ಯಾರ್ಥಿಗಳ ಭವಿಷ್ಯದಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಅರಿವು ಬಹಳ ಮುಖ್ಯ. ಶಾಲೆಯಲ್ಲಿ ಕಲಿಯುವ ಪಠ್ಯದ ಜೊತೆಗೆ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಪ್ರಶಾಂತ್ ಹೆಗಡೆ ತಿಳಿಸಿದರು.
ವಿದ್ಯಾರ್ಥಿಗಳ ಪಾಲಿಗೆ ಹತ್ತನೇ ತರಗತಿ ಬಹಳ ಪ್ರಮುಖ ಘಟ್ಟವಾಗಿದ್ದು ಈ ಹಂತದಲ್ಲಿ ಸತತ ಪರಿಶ್ರಮದಿಂದ ಹಗಲು ರಾತ್ರಿ ಎನ್ನದೆ ಅಭ್ಯಾಸದಲ್ಲಿ ತೊಡಗಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿಗಳ ಪಾಲಿಗೆ ಹತ್ತನೇ ತರಗತಿ ಅತಿ ಮುಖ್ಯ ಮೆಟ್ಟಿಲಾಗಿದ್ದು ತಮ್ಮ ಜೀವನದ ಬದ್ರ ಬುನಾದಿಗೆ ಇಲ್ಲಿ ಪಡೆಯುವ ಅಂಕಗಳು ಮುಂದಿನ ಉನ್ನತ ವ್ಯಾಸಂಗಕ್ಕೆ ಸಹಕಾರಿಯಾಗಿ ಮುಂದೆ ಉತ್ತಮ ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ಉನ್ನತ ಹುದ್ದೆಗೆ ಏರಬಹುದಾಗಿದೆ ಎಂದು ಹೇಳಿದರು.
ರಾಜ್ಯದ ಪ್ರತಿಷ್ಠಿತ ಕನ್ನಡ ಪ್ರಭ ದಿನಪತ್ರಿಕೆ ಬಳಗ ಈ ನಿಟ್ಟಿನಲ್ಲಿ ಯುವ ಆವೃತ್ತಿಯನ್ನು ತಂದಿರುವುದು ಬಹಳ ಸಂತೋಷದ ವಿಷಯವಾಗಿದೆ. ಈ ಸಂಚಿಕೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅದರಲ್ಲೂ ಮುಖ್ಯವಾಗಿ ಹತ್ತನೇ ತರಗತಿ ವಿದ್ಯಾರ್ಥಿ ಗಳಿಗೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಹಾಗೂ ಅದಕ್ಕೆ ಉತ್ತರಗಳನ್ನು ನೀಡುವ ಜೊತೆಗೆ ಗಣಿತ,ವಿಜ್ಞಾನ, ಸಮಾಜ ಶಾಸ್ತ್ರದ ಜೊತೆಗೆ ಆಂಗ್ಲ ಮತ್ತು ಹಿಂದಿ ವಿಷಯಗಳ ಬಗ್ಗೆ ಅತ್ಯಂತ ಸರಳವಾಗಿ ಪ್ರಶ್ನೆ ಹಾಗೂ ಉತ್ತರಗಳನ್ನು ನೀಡಿರುವುದು ಹೆಚ್ಚು ಅನುಕೂಲಕರವಾಗಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ ತಮ್ಮ ಶಾಲಾ ಪಠ್ಯದ ಜೊತೆಗೆ ಈ ಆವೃತ್ತಿಯನ್ನು ಅಭ್ಯಾಸ ಮಾಡಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಹಾಗೂ ತಾಲೂಕಿಗೆ ಉತ್ತಮ ಹೆಸರು ತರುವಂತೆ ಶುಭ ಹಾರೈಸಿದರು.ಹಿರಿಯ ಪತ್ರಕರ್ತ ಕಾ. ಪ್ರಕಾಶ್ ಮಾತನಾಡಿ, ಇಂದು ವಿದ್ಯೆ ಇಲ್ಲದಿದ್ದರೆ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ. ಇಂದು ಎಲ್ಲಾ ರಂಗಗಳಲ್ಲಿ ಗ್ರಾಮೀಣ ಮಕ್ಕಳು ನಗರದ ಮಕ್ಕಳೊಂದಿಗೆ ಉತ್ತಮ ಪೈಪೋಟಿ ನೀಡಬೇಕಾದ ವಾತಾವರಣವಿದ್ದು ಈ ನಿಟ್ಟಿನಲ್ಲಿ ಉತ್ತಮ ಅಂಕಗಳನ್ನು ಪಡೆಯಲು ವಿದ್ಯಾರ್ಥಿಗಳು ಹೆಚ್ಚು ಅಭ್ಯಾಸದ ಕಡೆಗೆ ಗಮನ ಹರಿಸುವಂತೆ ತಿಳಿಸಿದರು.
ಕನ್ನಡಪ್ರಭ ದಿನಪತ್ರಿಕೆ ವತಿಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊರತಂದಿರುವ ಯುವ ಆವೃತ್ತಿ ಬಹಳ ಉಪಯುಕ್ತವಾಗಿದೆ. ದೇಶದ ಇಂದಿನ ರಾಜಕೀಯ ವಿದ್ಯಮಾನದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ಸೂಕ್ತ ಮಾಹಿತಿಗಳು ಇರುವುದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಉತ್ತಮ ಅಂಕಗಳನ್ನು ಗಳಿಸಿ ಉನ್ನತ ಸ್ಥಾನ ಗಳನ್ನು ಪಡೆಯುವಂತೆ ಆಶಿಸಿದರು.ಕಾರ್ಯಕ್ರಮದಲಲ್ಇ ಶಾಲಾ ಶಿಕ್ಷಕರಾದ ಮಹದೇವ್ರಾವ್, ಶಿವಪ್ರಕಾಶ್, ದಿವ್ಯ, ಲಿಂಗರಾಜು, ಮೃತ್ಯುಂಜಯ, ಕಿರಣ್ ಕುಮಾರ್ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 02:ಕನಕಪುರದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಕನ್ನಡಪ್ರಭ ಪತ್ರಿಕೆಯ ಯುವ ಆವೃತ್ತಿ ಬಿಡುಗಡೆ ಹಾಗೂ ವಿತರಣೆ ನಡೆಸಲಾಯಿತು.