ಕೃಷಿಯಲ್ಲಿ ಗೆದ್ದ ಸಿರಿಗೆರೆಯ ಎಂಟೆಕ್ ಪದವೀಧರ!

KannadaprabhaNewsNetwork |  
Published : Oct 25, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

An M.Tech graduate from Sirigere finds success in agriculture!

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಇಂಜಿನಿಯರಿಂಗ್‌ ಪದವಿಯಲ್ಲಿ ಬಂಗಾರದ ಪದಕ ಗಳಿಸಿ ನಂತರ ಬೆಂಗಳೂರಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಯೂನಿವರ್ಸಿಟಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂ.ಟೆಕ್. ವ್ಯಾಸಂಗ ಮುಗಿಸಿ, ತಾಂತ್ರಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳಿದ್ದರೂ ಅವನ್ನೆಲ್ಲ ದೂರ ಇಟ್ಟು ಕೃಷಿಯ ಕಡೆಗೆ ಹೊರಳಿದ ಸಿರಿಗೆರೆಯ ದಬ್ಬಗೌಡ್ರ ನರೇಂದ್ರ ಮತ್ತೊಬ್ಬರಿಗೆ ಮಾದರಿಯಾಗುವಂತೆ ಕೃಷಿ ಮಾಡುತ್ತಿದ್ದಾರೆ.

ಅಡಿಕೆ ಗಿಡದ ಮಧ್ಯೆ ಮಾಡಿದ್ದ ಪಪ್ಪಾಯಿ ಕೃಷಿ ಸಾಕಷ್ಟು ಲಾಭ ತಂದುಕೊಟ್ಟಿದೆ. ಜೊತೆಗೆ ಹೊಸದಾಗಿ ನಾಟಿ ಮಾಡಿದ್ದ ಅಡಿಕೆ ಸಸಿಗಳಿಗೆ ಪಪ್ಪಾಯಿ ನೆರಳು ಒದಗಿಸಿದ್ದರಿಂದ ಅಡಿಕೆ ಸಸಿಗಳು ಸಮೃದ್ಧವಾಗಿ ಬೆಳೆದಿವೆ. ಮೊದಲ ಬಾರಿಗೆ ಪ್ರಾಯೋಗಿಕವಾಗಿ ಪಪ್ಪಾಯಿ ಬೆಳೆದಿದ್ದಾರೆ. ಗಿಡಗಳಲ್ಲಿ ನಿರೀಕ್ಷೆ ಮೀರಿ ಕಾಯಿಗಳು ಹೊಮ್ಮಿದವು. ಮಳೆಗಾಲದಲ್ಲಿಯೇ ಫಸಲು ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಅನುಭವವನ್ನು ಕಂಡರು. ಆದಾಗ್ಯೂ 3 ಲಕ್ಷ ರು.ಗಳ ಲಾಭವನ್ನು ಪಪ್ಪಾಯಿ ತಂದುಕೊಟ್ಟಿದೆ.

1400 ಗಿಡಗಳಲ್ಲಿ ಇನ್ನೂ ನಾಲ್ಕಾರು ಟನ್‌ ಫಸಲು ಇದೆ. ಈಗ ಬೆಲೆಯೂ ಚೇತರಿಸಿಕೊಂಡು ಕೆಜಿ ಕಾಯಿಗೆ ಆಸುಪಾಸು 25 ರು. ಬೆಲೆ ಇದೆ. ಹಾಗಾಗಿ ಈಗ ಸಿಗುವ ಫಸಲಿನಿಂದ ಇನ್ನಷ್ಟು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ. ಅವರ ತೋಟದ ತುಂಬ ಓಡಾಡಿದರೆ ಎಲ್ಲಾ ಗಿಡಗಳಲ್ಲಿಯೂ ಈಗ ಯತೇಚ್ಛವಾದ ಕಾಯಿಗಳು ಕಾಣಿಸುತ್ತವೆ. ಗಿಡಗಳಿಗೆ ನೀರು ಉಣಿಸಲು ಡ್ರಿಪ್‌ ಅಳವಡಿಸಿದ್ದಾರೆ. ಪಪ್ಪಾಯಿ ಬೆಳೆಯಲ್ಲಿ ಬಂದ ಲಾಭದಿಂದ ಸೋಲಾರ್ ವಿದ್ಯುತ್‌ ಸಂಪರ್ಕ ಪಡೆದು ಕೊಳವೆ ಬಾವಿಗೆ ಮೋಟಾರು ಅಳವಡಿಸಿದ್ದಾರೆ. ಹೀಗಿರುವುದರಿಂದ ಅವರಿಗೆ ವಿದ್ಯುತ್‌ ಕೊರತೆಯ ಭೀತಿ ಇಲ್ಲ.

ಪಪ್ಪಾಯಿಗೆ ಎಲ್ಲ ಕಡೆ ಬೇಡಿಕೆ ಇದೆ. ಮಾರಾಟಗಾರರು ತೋಟಕ್ಕೇ ಬಂದು ಗುತ್ತಿಗೆ ಆಧಾರದ ಮೇಲೆ ಕಾಯಿ ಕಟಾವು ಮಾಡಿಕೊಳ್ಳುತ್ತಾರೆ. ಸ್ಥಳದಲ್ಲಿಯೇ ತೂಕ ಮಾಡಿ ಹಣ ಪಾವತಿ ಮಾಡುವುದರಿಂದ ಕೃಷಿಕರಿಗೆ ನೆಮ್ಮದಿ.

ಎಲ್ಲೆಡೆ ಇರುವಂತೆ ಕೃಷಿಯಲ್ಲಿಯೂ ಸಂಕಟಗಳಿವೆ. ಗಿಡಗಳನ್ನು ಸರಿಯಾಗಿ ಆರೈಕೆ ಮಾಡಿದರೆ ಹೆಚ್ಚು ಲಾಭ ಬರುವುದು ನಿಶ್ಚಯ. ತಾಲೂಕಿನ ಸಿದ್ಧವ್ವನದುರ್ಗದ ರಾಜಣ್ಣ ಎಂಬುವವರ ನರ್ಸರಿಯಿಂದ ಸಸಿಯೊಂದಕ್ಕೆ 12 ರೂ.ಹಣ ಕೊಟ್ಟು 1400 ಸಸಿ ತಂದಿದ್ದಾರೆ. ನಾಟಿ ಮಾಡಿದ ನಾಲ್ಕಾರು ತಿಂಗಳುಗಳಲ್ಲಿಯೇ ಪಪ್ಪಾಯಿ ಗಿಡಗಳು ನಿರೀಕ್ಷೆ ಮೀರಿ ಬೆಳೆದಿದ್ದಾವೆ. ಅವುಗಳಿಗೆ ತಜ್ಞರ ಮಾರ್ಗದರ್ಶನದಲ್ಲಿ ಕ್ರಿಮಿನಾಶಕ ಸಿಂಪರಣೆ, ರಸಾಯನಿಕ ಗೊಬ್ಬರ ಬಳಕೆ ಮಾಡಿದ ಪರಿಣಾಮ ಲಾಭ ಬರುವಂತಾಗಿದೆ.ಬಾಕ್ಸ್:

ಕೀಟನಾಶಕ ಸಿಂಪಡಣೆನರೇಂದ್ರ ನಾಟಿ ಮಾಡಿದ್ದು ಪಂದ್ರ ತಳಿಯ ಪಪ್ಪಾಯಿ. ಸಸಿ ನೆಡುವುದಕ್ಕಿಂತ ಮೊದಲು ಟ್ರಿಗರ್‌ನಿಂದ ಒಂದು ಆಡಿ ಆಳ ಗುಂಡಿ ತೆಗೆಸಿ, ಅದಕ್ಕೆ ಮಣ್ಣು ಮತ್ತು ಗೊಬ್ಬರ ಹಾಕಿ ಸಸಿ ನೆಟ್ಟಿದ್ದಾರೆ. ನೀರು ಮತ್ತು ಗಿಡದ ಆರೈಕೆ ಕಡೆಗೆ ಗಮನ ಕೊಡಲಾಗಿದೆ. ಪಪ್ಪಾಯಿ ಅತಿ ಹೆಚ್ಚು ನೀರು ಬೇಡುವುದಿಲ್ಲ. ಪಪ್ಪಾಯಿಗೆ ವೈರಸ್‌ ಬರದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ಕೆಲವು ಬಾರಿ ಕೀಟನಾಶಕ ಸಿಂಪಡಣೆ ಅಗತ್ಯ.

--------------ಕೋಟ್‌...ತಂದೆಯ ಕಾಲದ ಕೃಷಿಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಹಾಗೂ ಕುಟುಂಬದ ಕಡೆಗೆ ಗಮನ ನೀಡುವ ಅನಿವಾರ್ಯತೆ ಇತ್ತು. ಹಾಗಾಗಿ ಎಂ.ಟೆಕ್., ಪದವಿ ಮುಗಿಸಿ ಕೃಷಿಯ ಕಡೆ ಗಮನ ಹರಿಸಿದೆ. ಅಡಿಕೆ ಬೆಳೆಯಲು ಸಾಹಸವನ್ನೇ ಮಾಡಬೇಕಾದ ಪರಿಸ್ಥಿತಿ ಇತ್ತು. ಈಗ ಪಪ್ಪಾಯಿ ನನಗೆ ಉತ್ತಮ ಲಾಭ ತಂದುಕೊಟ್ಟಿದೆ. ಮಾಡಿದ ಖರ್ಚು ಕಳೆದು ನಾನು ಲಾಭದಲ್ಲಿರುವೆ. ಗಿಡದಲ್ಲಿ ಇನ್ನೂ 3 – 4 ಟನ್‌ ಫಸಲು ಸಿಗುವ ಸಾಧ್ಯತೆ ಇದೆ. ಅದರಿಂದ ಇನ್ನೂ ಹೆಚ್ಚು ಲಾಭ ನಿರೀಕ್ಷೆ ಮಾಡುತ್ತಿರುವೆ.ನರೇಂದ್ರ, ಕೃಷಿಕ

ಫೋಟೋ ...ನರೇಂದ್ರ, ಎಂ.ಟೆಕ್., ಪದವೀಧರ – ಕೃಷಿಕ

-------------ಫೋಟೋಗಳು:

ತೋಟದಲ್ಲಿನ ಪಪ್ಪಾಯಿ ತೋಟದಲ್ಲಿನ ಪಪ್ಪಾಯಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಸಿಡಿ ತಪಾಸಣೆಯಲ್ಲಿ ಚಿಕ್ಕಮಗಳೂರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಯು.ಟಿ. ಖಾದರ್ ಅಭಿನಂದನೆ
ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ, ಗುಣಮಟ್ಟದ ಸೇವೆ ನೀಡಿ