2 ಟನ್‌ ಭಾರದ ಕಲ್ಲು ಎಳೆಯುವ ಸ್ಪರ್ಧೆ : ಆಂಧ್ರ ಸುಬ್ರಮಣ್ಯಶ್ವ ರೆಡ್ಡಿ ಎತ್ತು ಪ್ರಥಮ

KannadaprabhaNewsNetwork |  
Published : Jun 23, 2024, 02:13 AM ISTUpdated : Jun 23, 2024, 10:29 AM IST
22ಕೆಪಿಆರ್‌ಸಿಆರ್‌ 02:  | Kannada Prabha

ಸಾರಾಂಶ

ಇಲ್ಲಿನ ರಾಜೇಂದ್ರ ಗಂಜ್‌ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನವಾದ ಶನಿವಾರ 2 ಟನ್‌ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯು ಅತ್ಯಂತ ರೋಚಕವಾಗಿ ಜರುಗಿತು.

 ರಾಯಚೂರು : ಇಲ್ಲಿನ ರಾಜೇಂದ್ರ ಗಂಜ್‌ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನವಾದ ಶನಿವಾರ 2 ಟನ್‌ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯು ಅತ್ಯಂತ ರೋಚಕವಾಗಿ ಜರುಗಿತು.

ನಿಗದಿತ 20 ನಿಮಿಷನದಲ್ಲಿ ಎರಡು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 9 ಜೋಡೆತ್ತುಗಳು ಪಾಲ್ಗೊಂಡಿದ್ದವು. ಆಂಧ್ರಪ್ರದೇಶ ರಾಜ್ಯದ ನಂದ್ಯಾಲ ಜಿಲ್ಲೆಯ ಕೊತ್ತೂರು ಗ್ರಾಮದ ಬೀರಾಂ ಬುಲ್ಸ್ ಸುಬ್ರಮಣ್ಯಶ್ವರೆಡ್ಡಿ ಅವರ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದವು. 

ಸೂರ್ಯಪೇಟೆ ಜಿಲ್ಲೆ ಸುರನಗರ ಗ್ರಾಮದ ಎಸ್ಎಸ್‌ಆರ್ ಬುಲ್ಸ್ ಸೊಂಕಿ ಸುರೇಂದ್ರರೆಡ್ಡಿ ಅವರ ಎತ್ತು ದ್ವಿತೀಯ, ಪ್ರಕಾಶಂ ಜಿಲ್ಲೆ ಗಂಗಣ್ಣಪಾಳ್ಯಂ ಗ್ರಾಮದ ಉಮಾ ವೆಂಕಟೇಶರೆಡ್ಡಿ ಜೋಡಿ ಎತ್ತು ತೃತೀಯ, ತೆಲಂಗಾಣದ ಜೋಗಳಾಂಬ ಗದ್ವಾಲ್ ಜಿಲ್ಲೆ ಜೋಗಳಂಬ ತಾಲೂಕಿನ ಗುರ್ಲಕಾನದೊಡ್ಡಿ ಗ್ರಾಮದ ಕುರುವ ಕರೆಪ್ಪ ಅವರ ಜೋಡಿ ಎತ್ತು ನಾಲ್ಕನೇ ಸ್ಥಾನ ಹಾಗೂ ನಂದ್ಯಾಲ ಜಿಲ್ಲೆ ಕೊತ್ತೂರು ಬೀರಾಂ ಬುಲ್ಸ್ ಸುಬ್ರಮಣ್ಯಶ್ವರೆಡ್ಡಿ ಅವರ ಜೋಡು ಎತ್ತು ಐದನೇ ಸ್ಥಾನ ಪಡೆದುಕೊಂಡವು. ಇಷ್ಟೇ ಅಲ್ಲದೇ ಆಂಧ್ರದ ಕಡಪ ಜಿಲ್ಲೆಯ ಮಸನಪಲ್ಲಿ ಗ್ರಾಮದ ನಂದರೆಡ್ಡಿ ಅವರ ಜೋಡಿ ಎತ್ತು ಆರನೇ, ಅದೇ ಜಿಲ್ಲೆಯ ರಂಗಸಾಯಿಪಾಳ್ಯಂ ಗ್ರಾಮದ ಮರತಲ ವೆಂಕಟಸುಬ್ಬರೆಡ್ಡಿ ಅವರ ಜೋಡಿ ಎತ್ತು ಏಳನೇ ಸ್ಥಾನ ಪಡೆದುಕೊಂಡವು.

ಸ್ಪರ್ಧೆಯಲ್ಲಿ ಗೆದ್ದ ಜೋಡೆತ್ತುಗಳ ಮಾಲೀಕರಿಗೆ ಹಬ್ಬದ ರೂವಾರಿ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ, ಮುನ್ನೂರು ಕಾಪು (ಬಲಿಜ) ಸಮಾಜ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಅವರು ನಗರ ಬಹುಮಾನ, ಶೀಲ್ಡ್‌ ವಿತರಿಸಿ ಸನ್ಮಾನಿಸಿದರು. 

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ