ಕನ್ನಡಪ್ರಭ ವಾರ್ತೆ ಮೇಲುಕೋಟೆ
ದೇವಿಯರ ವಿಶೇಷ ಅಲಂಕಾರದ ವೈಭವದ, ಸಜ್ಜೆಹಟ್ಟಿ ಮಂಟಪದಲ್ಲಿ ಮಡಿಲು ತುಂಬುವ ವೈಭವವನ್ನು ಕಣ್ತುಂಬಿಕೊಂಡು ಭಕ್ತರು ತಡರಾತ್ರಿಯವರೆಗೆ ಕಾದಿದ್ದು ಕಂಡು ಬಂತು.
ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯದಿಂದ ಅಶ್ವವಾಹನೋತ್ಸವದ ವಾಹನೋತ್ಸವ ಮಂಟಪಕ್ಕೆ ಬಿರುಸಿನಿಂದ ಓಡೋಡಿ ಬರುವ ಉತ್ಸವದ ಸಂಭ್ರಮದ ಕ್ಷಣಗಳನ್ನು ಕಂಡು ಪುಳಕಿತರಾಗಿ ಹರ್ಷೋದ್ಘಾರ ಮಾಡಿದರು.ತವರು ಮನೆಯ ಸಿರಿಯನ್ನು ಬಿಂಬಿಸುವ ಶ್ರೀದೇವಿ ಭೂದೇವಿಯರ ಉತ್ಸವ ರಾತ್ರಿ 8.15ರ ಸಮಯದಲ್ಲಿ ಆರಂಭವಾಗಿ 11.30 ಗಂಟೆಗೆ ಮುಕ್ತಾಯವಾಯಿತು. ಮಹಾ ಮಂಗಳರಾತಿ ನಂತರ ದೇವಾಲಯದ ಒಳಪ್ರಾಕಾರದಲ್ಲಿ ನಡೆದ ಉತ್ಸವ ನಡೆಮಡಿಯೊಂದಿಗೆ ಅಂಗಮಣಿ ಮಂಟಪಕ್ಕೆ ತಲುಪಿತು. ಅಲ್ಲಿ ದೇವಿಯರಿಗೆ ವೈವಿಧ್ಯಮಯ ಹಣ್ಣುಗಳಿಂದ ಮಡಿಲು ತುಂಬುವ ಕೈಂಕರ್ಯ ನೆರವೇರಿಸಲಾಯಿತು. ಸ್ಥಾನಾಚಾರ್ಯರಾದ ಕರಗಂನಾರಾಯಣ ಅಯ್ಯಂಗಾರ್ ಮತ್ತು ಸಜ್ಜೆಹಟ್ಟಿಗುರುಗಳಾದ ತಿರುನಾರಾಯಣ ಅಯ್ಯಂಗಾರ್ ಗುರುಪೀಠದಿಂದ ಅಂಗಮಣಿ ಉತ್ಸವದ ಕೈಂಕರ್ಯಗಳು ನೆರವೇರಿದವು.
ಮೊಲ ಅಡ್ಡ ಉತ್ಸವದ ವಿಶೇಷ:
ಕಣ್ಮನ ಸೂರೆಗಂಡ ಹಣ್ಣುಗಳ ತಟ್ಟೆಯ ವೈಭವ:
ಮಧ್ಯಾಹ್ನ 4 ಗಂಟೆಯಿಂದಲೇ ತಂಡೋಪ ತಂಡವಾಗಿ ಆಗಮಿಸುತ್ತಿದ್ದ ನೂರಾರು ಸಂಖ್ಯೆಯ ಭಕ್ತರು ತಟ್ಟೆವೀಕ್ಷಣೆ ಮಾಡಿದರು. ಬುಧವಾರ ದೇವಿಯರಿಗೆ ಅರ್ಪಿಸಲು ಜೋಡಿಸಿದ್ದ ಹಣ್ಣು-ತರಕಾರಿಗಳಿಂದ ರಸಾಯನ, ಕದಂಬ, ಪಾಯಸ ಮಾಡಿ ದೇಗುಲಕ್ಕೆ ಬಂದ ಎಲ್ಲಾ ಭಕ್ತರಿಗೆ ಪ್ರಸಾದರೂಪವಾಗಿ ವಿತರಿಸಲಾಯಿತು.