ಆರ್ಥಿಕ ಪುನಶ್ಚೇತನಕ್ಕೆ ಹೈನೋದ್ಯಮ ಸಹಕಾರಿ: ಕೇಂದ್ರ ಸಚಿವ ಜೋಶಿ

KannadaprabhaNewsNetwork | Published : Feb 25, 2024 1:49 AM

ಸಾರಾಂಶ

ಅಳ್ನಾವರ ತಾಲೂಕಿನ ಹೊನ್ನಾಪೂರ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶೇಖರಣಾ ಮತ್ತು ಶಿಥಲೀಕರಣ ಘಟಕ ಉದ್ಘಾಟನೆ ಮತ್ತು ಹಾಲು ಉತ್ಪಾದಕರಿಗೆ ಬೋನಸ್‌ ವಿತರಣೆ ಕಾರ್ಯಕ್ರಮ ನಡೆಯಿತು.

ಅಳ್ನಾವರ: ಹಳ್ಳಿಗಳಿಂದ ಕೂಡಿದ ಭಾರತ ಹೈನೋದ್ಯಮದಲ್ಲಿ ಸ್ವಾವಲಂಬನೆ ಸಾಧಿಸಿ ಹಾಲು ಉತ್ಪಾದನೆಯಲ್ಲಿ ಎಲ್ಲಾ ಸ್ಥಾನಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದು ಹಾಲು ಉತ್ಪಾದಕರ ಆರ್ಥಿಕ ಪುನಶ್ಚೇತಮಕ್ಕೆ ಸಹಕಾರಿಯಾಗಿದೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿಯವರು ಹೇಳಿದರು

ತಾಲೂಕಿನ ಹೊನ್ನಾಪೂರ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶೇಖರಣಾ ಮತ್ತು ಶಿಥಲೀಕರಣ ಘಟಕ ಉದ್ಘಾಟನೆ ಮತ್ತು ಹಾಲು ಉತ್ಪಾದಕರಿಗೆ ಬೋನಸ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಗೋಕುಲ ಮತ್ತು ಸ್ಟೇಪ್ ಯೋಜನೆಗಳ ಮೂಲಕ ಜಾನುವಾರು ಸಾಕಾಣಿಕೆಗೆ ಒತ್ತು ನೀಡುತ್ತಿದೆ. ಹೈನುಗಾರಿಕೆಯು ರೈತರು ಮತ್ತು ಬಡವರ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದರು

ಸರಕಾರದ ಸೌಲಭ್ಯಗಳು ಅರ್ಹರಿಗೆ ನೇರವಾಗಿ ತಲುಪಿಸುವ ಮೂಲಕ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವುದು ಬಹು ದೊಡ್ಡ ಹೆಜ್ಜೆಯಾಗಿದೆ. ಬಡತನ ನಿರ್ಮೂಲನೆಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಪರಿಣಾಮ ದೇಶದ ಆರ್ಥಿಕತೆ ಮೇಲೆ ಬಂದಿದೆ ಎಂದರು.

ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಿ, ಅದರಿಂದ ಸ್ವಂತ ಉದ್ದಿಮೆ ಪ್ರಾರಂಭಿಸಿ ಉತ್ಪಾದಿಸಲಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆ ಇದ್ದು, ಸ್ವಾವಲಂಬಿ ಬದುಕಿಗೆ ಆಧಾರವಾಗಲಿದೆ. ಹೀಗೆ ಜನರನ್ನು ಬಡತನದಿಂದ ಮೇಲೆತ್ತುವ ಹಲವಾರು ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ರಾಜ್ಯದಲ್ಕಿ ಜಾರಿಯಲ್ಲಿರುವ ಹೈನುಗಾರಿಕೆ ಮತ್ತು ಪಶುಸಂಗೋಪನೆ ಯೋಜನೆಗಳಿಗೆ ಹೆಚ್ಚಿನ ಅನುದಾನದ ಪಾಲನ್ನು ಕೇಂದ್ರ ನೀಡುತ್ತಿದೆ ಎಂದರು

ಧಾರವಾಡ ಹಾಲು ಒಕ್ಕೂಟದ ಅದ್ಯಕ್ಷ ಶಂಕರ ಮುಗದ ಮಾತನಾಡಿ, ಈ ಭಾಗದಲ್ಲಿ ಉತ್ಪಾದನೆಯಾಗುತ್ತಿರುವ ಹಾಲನ್ನು ಸಂರಕ್ಷಣೆ ಮಾಡಿ ಸಾಗಿಸಲು ಅನುಕೂಲವಾಗಲು ಗ್ರಾಮದಲ್ಲಿ ಶಿಥಲೀಕರಣ ವ್ಯವಸ್ಥೆ ಕಲ್ಪಿಸಲಾಗಿದ್ದು, ಹಾಲು ಉತ್ಪಾದಕರು ಮತ್ತು ಸಂಘಗಳಿಗೆ ಉಪಯುಕ್ತವಾಗುವ ಜೊತೆಗೆ ಹಾಲು ಹಾಳಾಗದಂತೆ ಸಂರಕ್ಷಿಸಿಕೊಳ್ಳಬಹುದಾಗಿದೆ ಧಾರವಾಡ ಹಾಲು ಒಕ್ಕೂಟಕ್ಕೆ ಉಂಟಾಗುತ್ತಿರುವ ಹಾಲಿನ ಕೊರತೆಯನ್ನು ನೀಗಿಸಲು ಉತ್ಪಾದಕರಿಗೆ ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಹೆಚ್ಚೆಚ್ಚು ಜನರು ಹೈನೋದ್ಯಮ ಪ್ರಾರಂಭಿಸಬೇಕು. ಇದರಿಂದ ಹಾಲು ಒಕ್ಕೂಟ ಬಲಗೊಳ್ಳಲಿದೆ ಎಂದರು.

ಹೆಚ್ಚು ಹಾಲು ಮಾರಾಟ ಮಾಡಿದ ಹೈನೋದ್ಯಮಿಗಳನ್ನು ಸನ್ಮಾನಿಸಲಾಯಿತು. ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು

ಸಮಾರಂಭದ ಅದ್ಯಕ್ಷತೆಯನ್ನು ವೀರಪ್ಪ ಗೌಡಾಡಿ ವಹಿಸಿದ್ದರು. ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಹಾಲು ಒಕ್ಕೂಟದ ಎಂ.ಡಿ. ಎನ್.ಎಸ್. ಕೊಡಿಯಾಲಮಠ, ಹನಮಂತಪ್ಪ ಸನದಿ, ಶಶಿಧರ ಇನಾಮದಾರ, ಭರತೇಶ ಪಾಟೀಲ, ಕೆಂಪಣ್ಣ ನಾಯಕ, ಪರಪ್ಪ ಕ್ಷಾತ್ರತೇಜ. ರಮೇಶ ಹೂಗಾರ, ಶಿವಾಜಿ ಡೊಳ್ಳಿನ, ಕಲ್ಮೇಶ ಬೆಲೂರ, ನಾರಾಯಣ ಮೋರೆ, ಮಹಾವೀರ ಧರೆಣ್ಣವರ, ಕಲ್ಮೇಶ ಹಾವೇರಿಪೇಟ್, ಈರಯ್ಯ ಮತ್ತಿತರರು ಇದ್ದರು.

೨೩ಎಎಲ್ಎನ್ ೧

ಅಳ್ನಾವರ ತಾಲೂಕಿನ ಹೊನ್ನಾಪೂರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದಿಂದ ಹಾಲು ಶೇಖರಣ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿದರು.

Share this article