ಫೆಬ್ರವರಿ 25ರಂದು ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Jan 29, 2025, 01:33 AM IST
ಫೆ. 25 ರಂದು ನಡೆಯಲಿರುವ ಅಂಕೋಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಗಿರೀಶ ಬಾನಾವಳಿಕರ್ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಸಮ್ಮೇಳನದ ವೇದಿಕೆಗೆ ವೃಕ್ಷಮಾತೆ ದಿ. ತುಳಸಿ ಗೌಡ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಸಮ್ಮೇಳನಕ್ಕಾಗಿ ಸಮಿತಿ ರಚಿಸಲಾಗಿದೆ.

ಅಂಕೋಲಾ: 11ನೇ ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನ ಫೆ. 25ರಂದು ನಾಡವರ ಸಭಾಭವನದಲ್ಲಿ ನಡೆಸಲು ನಿರ್ಧರಿಸಲಾಯಿತು. ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿ ಉಪ ತಹಸೀಲ್ದಾರ್ ಗಿರೀಶ ಬಾನಾವಳಿಕರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.ಸಮ್ಮೇಳನದ ವೇದಿಕೆಗೆ ವೃಕ್ಷಮಾತೆ ದಿ. ತುಳಸಿ ಗೌಡ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಸಮ್ಮೇಳನಕ್ಕಾಗಿ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಶಾಸಕ ಸತೀಶ ಸೈಲ್, ಅಧ್ಯಕ್ಷರಾಗಿ ತಹಸೀಲ್ದಾರ್ ಅನಂತಕೃಷ್ಣ, ಕಾರ್ಯಾಧ್ಯಕ್ಷರಾಗಿ ಕಸಾಪ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ನ್ಯಾಯವಾದಿ ನಾಗಾನಂದ ಬಂಟ್, ಸಿಪಿಐ ಚಂದ್ರಶೇಖರ ಮಠಪತಿ, ಬಿಇಒ ಮಂಗಲಲಕ್ಷ್ಮಿ ಪಾಟೀಲ್, ಸಿಡಿಪಿಒ ರಾಘವೇಂದ್ರ ಭಟ್ಟ, ಕಾರ್ಯದರ್ಶಿಯಾಗಿ ಕಸಾಪ ಕಾರ್ಯದರ್ಶಿಗಳಾದ ಜಗದೀಶ ನಾಯಕ ಹೊಸ್ಕೇರಿ, ಜಿ.ಆರ್. ತಾಂಡೇಲ್ ನೇಮಕಗೊಂಡರು.ವಿವಿಧ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ವೇದಿಕೆ ಸಮಿತಿಗೆ ವಿನಾಯಕ ಹೆಗಡೆ, ಮೆರವಣಿಗೆ ಸಮಿತಿಗೆ ಜಗದೀಶ ಹೊಸ್ಕೇರಿ, ಜಿ.ಆರ್. ತಾಂಡೇಲ್, ಊಟೋಪಚಾರ ಸಮಿತಿಗೆ ಜಗದೀಶ ನಾಯಕ ಹೊಸ್ಕೇರಿ, ಸನ್ಮಾನ ಸಮಿತಿಗೆ ಬಾಲಚಂದ್ರ ನಾಯಕ, ಆರೋಗ್ಯ ಸಮಿತಿಗೆ ಡಾ. ಅರ್ಚನಾ, ಪುಷ್ಪಾ ನಾಯ್ಕ, ಸ್ಮರಣ ಸಂಚಿಕೆಗೆ ಮಂಜುನಾಥ ಇಟಗಿ ಪ್ರಚಾರ ಸಮಿತಿಗೆ ಅರುಣ ಶೆಟ್ಟಿ ನೇಮಕವಾಗಿದ್ದಾರೆ.ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು, ಸರ್ಕಾರಿ ಅಧಿಕಾರಿಗಳು ಕಡ್ಡಾಯ ಪಾಲ್ಗೊಳ್ಳುವಂತೆ ಮಾಡಲು ನಿರ್ಧರಿಸಲಾಯಿತು. ಸಭೆಯಲ್ಲಿದ್ದವರು ಹಲವಾರು ಸಲಹೆ ಸೂಚನೆ ನೀಡಿದರು. ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ಸಮ್ಮೆಳನ ಯಶಸ್ಸಿಗೆ ಸಹಕಾರ ಕೋರಿದರು.ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿ, ಏಳನೆ ತರಗತಿವರೆಗೆ ಕನ್ನಡದಲ್ಲಿ ಶಿಕ್ಷಣ ಆಗಬೇಕು ಎಂದರು. ಕಾರ್ಯದರ್ಶಿ ಜಗದೀಶ ನಾಯಕ ಸ್ವಾಗತಿಸಿದರು. ಕೋಶಾಧ್ಯಕ್ಷ ಡಾ. ಎಸ್.ವಿ. ವಸ್ತ್ರದ್ ನಿರ್ವಹಿಸಿದರು. ಕಾರ್ಯದರ್ಶಿ ಜಿ.ಆರ್. ತಾಂಡೇಲ್ ವಂದಿಸಿದರು. ಸಭೆಯಲ್ಲಿ ಹಿರಿಯ ಸಾಹಿತಿಗಳು, ಗಣ್ಯರು, ವಿವಿಧ ಸಂಘ ಸಂಸ್ಥೆ ಪ್ರಮುಖರು ಇದ್ದರು.ಫೆ. 2ರಿಂದ ತಿರುಮಲ ವೆಂಕಟ್ರಮಣ ದೇವರ ವರ್ಧಂತಿ

ಭಟ್ಕಳ: ಇಲ್ಲಿನ ನಾಮಧಾರಿ ಸಮಾಜದ ಗುರುಮಠವಾದ ಆಸರಕೇರಿಯ ನಿಚ್ಛಲಮಕ್ಕಿ ತಿರುಮಲ ವೆಂಕಟ್ರಮಣ ದೇವರ ಪುನರ್ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಹಾಗೂ ಪಾಲಕಿ ಮಹೋತ್ಸವ ಫೆ. 2ರಿಂದ 5ರ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ನಾಮಧಾರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರುಣ ನಾಯ್ಕ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ 8ನೇ ವರ್ಷದ ಪುನರ್ ಪ್ರತಿಷ್ಠಾಂಗದ ವರ್ಧಂತಿ ಮಹೋತ್ಸವ ಮತ್ತು ಪಾಲಕಿ ಮಹೋತ್ಸವ ಜರುಗಲಿದೆ.ಫೆ. 2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಫೆ. 3ರಂದು ಸಂಜೆ 5 ಗಂಟೆಯಿಂದ ಹರಿನಾಮಸ್ಮರಣೆ(ಹೌದರಾಯನ ಕುಣಿತ), ಸಂಜೆ 7 ಗಂಟೆಗೆ ಗದ್ದುಗೆಯ ಪದ್ಮಾವತಿ ಅಮ್ಮನವರ ಪಾಲಕಿ ಆಗಮಿಸಲಿದೆ. ಫೆ. 4ರಂದು ಬೆಳಗ್ಗೆ ಗಣಪತಿ ಪೂಜೆ, ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ದೇವರಿಗೆ ತುಲಾಭಾರ ಸಮರ್ಪಣೆ ಜರುಗಲಿದೆ.

ಬೆಳಗ್ಗೆ 10.30ಕ್ಕೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಶ್ರೀಗಳಿಂದ ಆಶೀರ್ವಚನ, ಮಂತ್ರಾಕ್ಷತೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1 ಗಂಟೆಯಿಂದ ಮಹಾ ಅನ್ನಸಂತರ್ಪಣೆ, ಸಂಜೆ 3.30ರಿಂದ ದೇವರ ಪಾಲಕಿ ಮಹೋತ್ಸವ, ರಾತ್ರಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದ ಅವರು ಫೆ. 5ರಂದು 8.30 ಗಂಟೆಗೆ ಓಕುಳಿ ಸೇವೆ, 11 ಗಂಟೆಗೆ ಫಲಾವಳಿ ಏಲಂ, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾತ್ರಿ 9.30 ಗಂಟೆಗೆ ಉಪ್ಲಾಡಿಯ ತ್ರಿನೇತ್ರ ಕಲಾತಂಡದಿಂದ ಪಂಚ ದೀವಟಿಗೆ ಸಾಮಾಜಿಕ ನಾಟಕ ನಡೆಯಲಿದೆ ಎಂದರು.ಗೌರವಾಧ್ಯಕ್ಷ ಕೃಷ್ಣಾ ನಾಯ್ಕ ಮಾತನಾಡಿದರು. ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ.ಕೆ. ನಾಯ್ಕ, ಪ್ರಧಾನ ಕಾರ್ಯದರ್ಶಿ ಡಿ.ಎಲ್. ನಾಯ್ಕ, ಪ್ರಮುಖರಾದ ವಿಠಲ್ ನಾಯ್ಕ, ಮಹಾಬಲೇಶ್ವರ ನಾಯ್ಕ, ಶ್ರೀಧರ ನಾಯ್ಕ,ಶಂಕರ ನಾಯ್ಕ, ಪ್ರಕಾಶ ನಾಯ್ಕ ಮುಂತಾದವರಿದ್ದರು.

ಪೊಟೋ ಪೈಲ್ : 28ಬಿಕೆಲ್1

ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ